ಸೆರಗು ಸರ್ಸಿದ್ದಕ್ಕೆ ಕ್ಷಮೆ ಯಾಚಿಸಿದ ಪ್ರೇಮ್..! ಹೊಸ ರೂಪದಲ್ಲಿ ಬರುತ್ತಂತೆ ಕೆಡಿ ಸರ್ಸೆ ಸಾಂಗ್!

Published : Mar 21, 2026, 10:17 AM IST
KD Prem

ಸಾರಾಂಶ

'ಕೆಡಿ' ಸಿನಿಮಾದ 'ಸರ್ಸೆ ಸರ್ಸೆ' ಹಾಡು ದೊಡ್ಡ ವಿವಾದ ಸೃಷ್ಟಿಸಿದೆ. ಈ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ನೋರಾ ಫತೇಹಿ, ತನಗೆ ಸಾಹಿತ್ಯದ ಅರ್ಥವೇ ತಿಳಿದಿರಲಿಲ್ಲ ಎಂದು ಹೇಳುವ ಮೂಲಕ ನಿರ್ದೇಶಕ ಪ್ರೇಮ್ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಇದಕ್ಕೆ ಪ್ರೇಮ್ ತಿರುಗೇಟು ನೀಡಿದ್ದಾರೆ.

ಬೆಂಗಳೂರು: ಚನ್ನಾಗಿದ್ರೆ ಎಲ್ಲವೂ ಸರಿ ಇರುತ್ತೆ. ಅದೆ ಸಮಸ್ಯೆ ಅಂತ ಬಂದ್ರೆ ಎಷ್ಟೇ ಚನ್ನಾಗಿದ್ದವರು ಕೂಡ ಒಬ್ಬರ ಮೇಲೊಬ್ಬರು ಉರಿದು ಬೀಳೋಕೆ ಶುರುವಾಗುತ್ತಾರೆ. ಮನಸ್ಸಿಗೆ ಬಂದಂತೆ ಮಾತನಾಡೋಕೆ ನಿಂತು ಬಿಡುತ್ತಾರೆ. ಈಗ ಪ್ಯಾನ್​ ಇಂಡಿಯಾ ಸಿನಿಮಾದ ಹಾಡಿನಲ್ಲಿ ನಟಿಸೋಕೆ ಚಾನ್ಸ್​ ಕೊಟ್ಟ ಡೈರೆಕ್ಟರ್​ ಪ್ರೇಮ್ ವಿರುದ್ಧವೇ ನಟಿ ನೋರಾ ಫತೇಹಿ ಇಲ್ಲದ ಆರೋಪ ಮಾಡ್ತಾ ಬಾಯ್ ಬಡ್ಕೋಳೋದಕ್ಕೆ ಶುರು ಮಾಡಿದ್ದಾರೆ. ಹಾಗಾದ್ರೆ ಬಾಂಬೆಯಲ್ಲಿ ಕೂತು ನೂರಾ ಪ್ರೇಮ್​ ವಿರುದ್ಧ ಏನೆಲ್ಲಾ ಆರೋಪ ಮಾಡುತ್ತಿದ್ದಾರೆ? ಇದಕ್ಕೆ ಪ್ರೇಮ್ ಕೌಂಟರ್​​ ಹೇಗಿದೆ ನೋಡೋಣ ಬನ್ನಿ.

ಸರ್ಸೆ ಸರ್ಸೆ ಹಾಡಿನಲ್ಲಿ ನೋರಾ ಮಸ್ತ್​ ಕುಣಿತಾ!

ಮಂಡ್ಯ ಗತ್ತು ಇಡೀ ಇಂಡಿಯಾಗೇ ಗೊತ್ತಾಗೋ ಹಾಗೆ ಮಾಡಿದ್ದು, ರೆಬೆಲ್ ಸ್ಟಾರ್ ಅಂಬರೀಶ್​. ಈಗ ಇದೇ ಮಂಡ್ಯ ಹೈದ ಜೋಗಿ ಪ್ರೇಮ್​ ಪಾರ್ಲಿಮೆಂಟ್​​ ನಲ್ಲೂ ಗದ್ದಲವಾಗೋ ಹಾಗೆ ಮಾಡಿದ್ದಾರೆ. ಅದಕ್ಕೆ ಕಾರಣ ಪ್ರೇಮ್​ ಅಡ್ಡದಿಂದ ಬಂದ ಈ ಒಂದೇ ಒಂದು ಸರ್ಸೆ ಸರ್ಸೆ ಹಾಡು. ಈ ಹಾಡಿನಲ್ಲಿ ನಟಿಸುವಾಗ ಖುಷಿ ಖುಷಿಯಿಂದ ನಗು ನಗುತ್ತಾ ಡ್ಯಾನ್ಸ್ ಮಾಡಿದ್ದ ನಟಿ ನೋರಾ ಫತೇಹಿ ವಿವಾದ ಭುಗಿಲೇಳುತ್ತಿದ್ದಂತೆ ಹೊಸ ತಕಧಿಮಿತ ಶುರು ಮಾಡಿದ್ದಾರೆ.

ಬೇಕು ಅಂತ ಬರೆದಿದ್ದಲ್ಲ, ಕೈ ತಪ್ಪಿ ಬರೆದಿದ್ದು; ಸೆರಗು ಸರ್ಸಿದ್ದಕ್ಕೆ ಕ್ಷಮೆ ಯಾಚಿಸಿದ ಪ್ರೇಮ್..!

ಸರ್ಸೆ ಸರ್ಸೆ ಸೆರಗ ಸರ್ಸೆ ಸಾಂಗ್ ವಿವಾದ ದೊಡ್ಡದಾದ ಮೇಲೆ ಫೈನಲಿ ಪ್ರೇಮ್, ಕ್ಷಮೆ ಕೇಳಿದ್ದಾರೆ. ನಾನು ಬಾಟಲಿ, ಉಪ್ಪಿನಕಾಯಿ ಮನಸ್ಸಲ್ಲಿ ಇಟ್ಟುಕೊಂಡು ಬರೆದಿದ್ದು, ಹೀಗೆಲ್ಲಾ ಆಗುತ್ತೆ ಅಂತ ಗೊತ್ತಿರಲಿಲ್ಲ ಅಂದಿದ್ದಾರೆ.

ಪ್ರೇಮ್ ಏನೋ ಪಾಪ ಕೈ ಮೀರಿದ್ದ ಪರಿಸ್ಥಿತಿಯನ್ನ ಅರ್ಥ ಮಾಡಿಕೊಂಡು ಕ್ಷಮೆ ಕೇಳಿದ್ದಾರೆ. ತಪ್ಪೊಪ್ಪಿಕೊಂಡು ಹೊಸ ಹಾಡು ಕೊಡುತ್ತೇನೆ ಅಂದಿದ್ದಾರೆ. ಆದ್ರೆ ಈ ಹಾಡಿನಲ್ಲಿ ಕುಣಿದು ಕುಪ್ಪಳಿಸಿರೋ ನೋರಾ ಫತೇಹಿ ಮಾಡಿದ್ದು ಮಾತ್ರ ದೊಡ್ಡ ಯಡವಟ್ಟು. ಎಲ್ಲಾ ಗೊತ್ತಿದ್ದು, ನನಗೆ ಗೊತ್ತೇ ಇರಲಿಲ್ಲ ಅಂದಿರೋ ನೋರಾ ಇಂತದ ಬಿಗ್ ಕ್ಯಾನ್ವಸ್​​ ಸಿನಿಮಾ ಕೆಡಿಯ ಹಾಡಿನಲ್ಲಿ ಡಾನ್ಸ್ ಮಾಡೋಕೆ ಚಾನ್ಸ್​​ ಕೊಟ್ಟ ನಿರ್ದೇಶಕರಿಗೆ ಗುನ್ನ ಇಟ್ಟಿದ್ದಾಳೆ.

ಸಾಹಿತ್ಯ ಗೊತ್ತಿಲ್ಲದೇ ಹೆಜ್ಜೆ, ಉಲ್ಟಾ ಹೊಡೆದ ನೋರಾ..!

ಬಾಲಿವುಡ್‌ನ ಈ ನೋರಾ ಫತೇಹಿ ಎಂಥಾ ಊಸರವಳ್ಳಿ ಅನ್ನೋದಕ್ಕೆ ಇದೇ ಉದಹಾರಣೆ. ಯಾವಾಗ ಈ ಹಾಡು ದೇಶಾದ್ಯಂತ ದೊಡ್ಡ ಕಾಂಟ್ರವರ್ಸಿ ಎಬ್ಬಿಸ್ತೋ ನೋರಾ ಉಲ್ಟಾ ಹೊಡೆದಿದ್ದಾಳೆ. ನನಗೆ ಸಾಹಿತ್ಯದ ಅರ್ಥವೇ ಗೊತ್ತಿರಲಿಲ್ಲ ಎಂದಿದ್ದಾಳೆ.

ನಾನು ಈ ಹಾಡನ್ನು ಮೂರು ವರ್ಷಗಳ ಹಿಂದೆ ಕನ್ನಡ ಭಾಷೆಯಲ್ಲಿ ಚಿತ್ರೀಕರಿಸಿದ್ದೆ. ಸಂಜಯ್ ದತ್ ಅವರಂತಹ ದೊಡ್ಡ ನಟರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರಿಂದ ನಾನು ಇದಕ್ಕೆ ಒಪ್ಪಿಕೊಂಡಿದ್ದೆ. ಚಿತ್ರೀಕರಣದ ಸಮಯದಲ್ಲಿ ನಾನು ನಿರ್ದೇಶಕರು ಹೇಳಿದ ಅರ್ಥವನ್ನೇ ನಂಬಿದ್ದೆ. ಅವರು ಹೇಳಿದಂತೆ ನಾನು ಅಭಿನಯಿಸಿದೆ. ಈ ಹಾಡನ್ನು ಹಿಂದಿ ಆವೃತ್ತಿಯಲ್ಲಿ ಇಂತಹ ಸಾಹಿತ್ಯದೊಂದಿಗೆ ಬಿಡುಗಡೆ ಮಾಡುತ್ತಾರೆ ಎಂಬುದು ನನಗೆ ತಿಳಿದಿರಲಿಲ್ಲ. ನನ್ನ ಅನುಮತಿ ಅಥವಾ ಒಪ್ಪಿಗೆಯನ್ನು ಪಡೆದಿಲ್ಲ.ಇದಕ್ಕೆ ಚಿತ್ರದ ನಿರ್ಮಾಪಕರು ಮತ್ತು ಕಂಟೆಂಟ್ ಕ್ರಿಯೇಟರ್ಗಳೇ ಜವಾಬ್ದಾರರು. ಇನ್ನು ಮುಂದೆ ಇಂತಹ ವಿಷಯಗಳಲ್ಲಿ ನಾನು ಹೆಚ್ಚು ಜಾಗರೂಕತೆಯಿಂದ ಇರುತ್ತೇನೆ ಎಂದಿದ್ದಾರೆ ನೋರಾ.

ಸುದ್ದಿಗೋಷ್ಠಿಯಲ್ಲಿ ಪ್ರೇಮ್​​ರನ್ನ ಕೊಂಡಾಡಿದ್ದ ನೋರಾ..!

ಅಸಲಿಗೆ ನೋರಾ ಫತೇಹಿ ಮೊನ್ನೆ ಸಾಂಗ್ ಲಾಂಚ್ ಕಾರ್ಯಕ್ರಮಕ್ಕೆ ಬಂದಾಗ ಒಂದೊಂದು ಸಾಲಿನ ಅರ್ಥ ನಿರ್ದೇಶಕರ ಬಳಿ ಕೇಳಿ ಹಾಡಿಗೆ ಹೆಜ್ಜೆ ಹಾಕಿದೆ ಅಂದಿದ್ರು. ಪ್ರೇಮ್​​ ನಿಜವಾಗ್ಲು ಶೋ ಮ್ಯಾನ್​ ಅಂದಿದ್ರು. ಈಗ ವಿವಾದ ಆಗ್ತಾ ಇದ್ದ ಹಾಗೆ ನೋರಾ ನನಗೆ ಲಿರಿಕ್ಸ್ ಗೊತ್ತಿಲ್ಲ. ಅದು ಕನ್ನಡ ಹಾಡು ನನಗೆ ಅರ್ಥ ಆಗದೇ ನಟಿಸಿದ್ದೀನಿ ಊಸರವಳಿ ಆಟ ಆಡೋದಕ್ಕೆ ಶುರು ಮಾಡಿದ್ದಾಳೆ.

ನೊಂದ ಜೀವ ಚನ್ನಾಗಿರಲಿ, ನೋರಾಗೆ ಪ್ರೇಮ್ ತಿರುಗೇಟು..!

ಸರ್ಸೆ ಸರ್ಸೆ ಸಾಂಗ್ ಇಷ್ಟೆಲ್ಲಾ ವಿವಾದ ಸೃಷ್ಟಿಸಿದ ಮೇಲೆ ಫೈನಲಿ ಪ್ರೇಮ್ ಇದಕ್ಕೆ ಸ್ಪಷ್ಟನೆ ಕೊಡೋದ್ರ ಜೊತೆಗೆ ನೋರಾ ಮೇಲೂ ಸಿಟ್ಟಾಗಿದ್ದಾರೆ. ‘ನೋರಾ ಮಾತನಾಡಿದ್ದು ತಪ್ಪು. ಸಾಹಿತ್ಯ ಗೊತ್ತಿಲ್ಲದೆ ಭಾವನೆ ಬರಲ್ಲ. ಏಕೆ ಹಾಗೆ ಮಾತಾಡಿದ್ರೋ ಗೊತ್ತಿಲ್ಲ. ವಿವಾದಿಂದ ತಪ್ಪಿಸಿಕೊಳ್ಳಬೇಕು ಎಂದು ಹೀಗೆ ಹೇಳಿರಬಹುದು. ಪ್ರೇಮ್ ಜೊತೆ ಕೆಲಸ ಮಾಡಿದ್ದು ಖುಷಿ ಆಯ್ತು ಎಂದು ಸಾಂಗ್ ರಿಲೀಸ್ ಆದಾಗ ಹೇಳಿದ್ದರು. ನೊಂದ ಜೀವ ಚೆನ್ನಾಗಿರಲಿ’ ಎಂದು ಪ್ರೇಮ್ ಹೇಳಿದ್ದಾರೆ.

ಪ್ರೇಮ್​ ಮೇಲೆ ರಾಷ್ಟ್ರೀಯ ಮಹಿಳಾ ಆಯೋಗ ಸಿಟ್ಟು..!

ಇನ್ನು ಈ ಸರ್ಸೆ ಸರ್ಸೇ ಹಾಡು ಕೆಡಿ ಸಿನಿಮಾ ತಂಡವನ್ನ ಉಸಿರು ಗಟ್ಟಿಸುತ್ತಿದೆ. ದೇಶಾದ್ಯಂತ ಹಾಡು ವಿವಾದ ಎಬ್ಬಿಸುತ್ತಿದ್ದಂತೆ ರಾಷ್ಟ್ರೀಯ ಮಹಿಳಾ ಆಯೋಗ ಎಂಟ್ರಿ ಕೊಟ್ಟಿದೆ, ನಿರ್ದೇಶಕ ಪ್ರೇಮ್, ನಿರ್ಮಾಪಕ ವೆಂಕಟ್ ನಾರಾಯಣ್, ನಟಿ ನೋರಾ ಫತೇಹಿ, ನಟ ಸಂಜಯ್ ದತ್, ಹಿಂದಿ ಹಾಡಿನ ಬರಹಾರ ರಕೀಬ್ ಆಲ್ಬಂಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿದೆ. ಮಾ.24 ರಂದು ಮಧ್ಯಾಹ್ನ 12:30ಕ್ಕೆ ವಿಚಾರಣೆಗೆ ಹಾಜರಾಗಿ ಇಲ್ಲದಿದ್ರೆ ಕಾನೂನು ಕ್ರಮ ಎದುರಿಸಲು ರೆಡಿಯಾಗಿ ಎಂದು ಎಚ್ಚರಿಕೆ ಕೊಟ್ಟಿದೆ.

ಹೊಸ ರೂಪದಲ್ಲಿ ಬರುತ್ತಂತೆ ಕೆಡಿ ಸರ್ಸೆ ಸಾಂಗ್..!

ಈಗಾಗ್ಲೆ ತಪ್ಪೊಪ್ಪಿಕೊಂಡಿರೋ ಜೋಗಿ ಪ್ರೇಮ್​, ಈ ಹಾಡನ್ನ ಡಿಲೀಟ್ ಮಾಡಿದ್ದು, ಹೊಸ ಸಾಹಿತ್ಯ ಬರೆಯುತ್ತಿದ್ದಾರೆ. ಸದ್ಯದಲ್ಲೇ ಹಾಡಿನ ಲಿರಿಕ್ಸ್ ಚೇಂಜ್ ಮಾಡಿ ಹೊಸ ರೂಪದಲ್ಲಿ ಹಾಡು ರೆಡಿ ಮಾಡಿ ರಿಲೀಸ್ ಮಾಡಲಿದ್ದಾರೆ. ಎನಿ ವೇ ಈ ಸಾರಿ ಯಾವುದಕ್ಕೂ ಲಿರಿಕ್ಸ್ ನೋಡಿಕೊಂಡು ಬರೀರಿ ಅಂತಿದ್ದಾರೆ ಕನ್ನಡ ಚಿತ್ರಪ್ರಿಯರು.

ವಿಜಯ್ ಪಟೆದಾರ್​, ಏಷ್ಯಾನೆಟ್ ಏಷ್ಯಾನೆಟ್ ಸುವರ್ಣ ನ್ಯೂಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Dhurandhar: 'ಧುರಂಧರ್' ಸಿನಿಮಾ ನೋಡುವವರು ಬಿಜೆಪಿಗೆ ವೋಟ್ ಹಾಕ್ತಾರೆ, ಬಿರುಗಾಳಿ ಎಬ್ಬಿಸಿದ ಅಸ್ಸಾಂ ಸಿಎಂ ಹೇಳಿಕೆ!
Dhruv Rathee: 'ಧುರಂಧರ್ 2' ಕಳಪೆ ಪ್ರೊಪಗಾಂಡ ಸಿನಿಮಾ, ಆದಿತ್ಯ ಧರ್ ಬಿಜೆಪಿಯ ಪ್ರಚಾರಕ; ಧ್ರುವ್ ರಾಠಿ ಕಿಡಿ