
ಇಷ್ಟು ದಿನ ಒಂಟಿಯಾಗಿಯೋ ಅಥವಾ ಆಗ ಪತಿಯಾಗಿದ್ದ ಚಂದನ್ ಶೆಟ್ಟಿ ಜೊತೆಗೋ ರೀಲ್ಸ್ ಮಾಡುತ್ತಿದ್ದ ನಿವೇದಿತಾ ಗೌಡ ಇದೀಗ ಸ್ನೇಹಿತೆಯೊಬ್ಬರ ಜೊತೆ ರೀಲ್ಸ್ ಮಾಡುತ್ತಿದ್ದಾರೆ. ಹಲವು ರೀಲ್ಸ್ಗಳಲ್ಲಿ ಇಬ್ಬರೂ ಸುಖಾಸುಮ್ಮನೆ ಜೋರಾಗಿ ನಕ್ಕಿದ್ದು ಬಿಟ್ಟರೆ ಇನ್ನೇನೂ ಇರುವುದಿಲ್ಲ. ಆದರೆ ಪ್ರತಿಬಾರಿ ಇವರ ಈ ಹೊಸ ಗೆಳತಿಯ ಬಗ್ಗೆ ಫ್ಯಾನ್ಸ್ ತಲೆಕೆಡಿಸಿಕೊಳ್ಳುತ್ತಲೇ ಇರುತ್ತಾರೆ. ವಾಣಿ ಅವರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅವರು ಇನ್ಸ್ಟಾಗ್ರಾಮ್ನಲ್ಲಿ ಇದಾಗಲೇ ಹಲವಾರು ರೀಲ್ಸ್ ಮಾಡಿ ಶೇರ್ ಮಾಡಿದ್ದಾರೆ. ಇದೀಗ ಅವರು ನಿವೇದಿತಾ ಜೊತೆ ರೀಲ್ಸ್ ಮಾಡುವುದು ಹೆಚ್ಚಾಗುತ್ತಿದೆ.
ಇದೀಗ ವಾಣಿ ಅವರ ಹುಟ್ಟುಹಬ್ಬಕ್ಕೆ ಅವರಿಗೆ ವಿಶ್ ಮಾಡಿದ್ದಾರೆ ನಿವೇದಿತಾ. ಇದರಲ್ಲಿ ವಾಣಿ ನಿವೇದಿತಾಗೆ ಹೂವು ಕೊಟ್ಟು ಪ್ರಪೋಸ್ ಮಾಡಿದ್ದರೆ, ನಿವೇದಿತಾ ಶೀರ್ಷಿಕೆಯಲ್ಲಿ ಇಡೀ ಜಗತ್ತಿನಲ್ಲಿ ನನ್ನ ಆತ್ಮೀಯ ಗೆಳೆತಿಗೆ ಹುಟ್ಟುಹಬ್ಬದ ಶುಭಾಶಯಗಳು.... ನೀನು ತುಂಬಾ ಸುಂದರವಾಗಿದ್ದೀಯ, ಆದರೆ ಅದೇ ಸಮಯದಲ್ಲಿ ತುಂಬಾ ಮೂರ್ಖನಾಗಿದ್ದೀಯ... ನಿನ್ನೊಂದಿಗೆ ನಾನು ಯಾವಾಗಲೂ ನಗುತ್ತಿದ್ದೇನೆ... ನೀನು ನನ್ನ ಹೆಂಡತಿಯಂತೆ... ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದಿದ್ದಾರೆ. ಈ ವಿಡಿಯೋ ಹಾಗೂ ನಿವೇದಿತಾ ಬರೆದಿರುವ ಶೀರ್ಷಿಕೆ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಅಷ್ಟಕ್ಕೂ ನಿವೇದಿತಾ ಗೌಡ ಅವರ ಅರ್ಥ, ತಾವಿಬ್ಬರೂ ಎಷ್ಟು ಸ್ನೇಹಿತೆಯರು ಎನ್ನುವುದು ಆಗಿದೆಯಷ್ಟೇ. ಇದರಲ್ಲಿ ನಿವೇದಿತಾ ದೂರ ಹೋದರೆ, ತಾವು ಹೇಗೆ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ವಾಣಿ ಕಣ್ಣೀರಿನ ಮೂಲಕ ತಿಳಿಸಿದ್ದರೆ, ಇವರಿಬ್ಬರೂ ಬೇರೆ ಬೇರೆ ಸಮಯದಲ್ಲಿ ಖುಷಿಯಾಗಿ ಇರುವ ಕ್ಷಣಗಳನ್ನೂ ಸೆರೆ ಹಿಡಿಯಲಾಗಿದೆ. ಆದರೆ ಪ್ರಪೋಸ್ ಮಾಡಿರುವುದು, ಹೆಂಡತಿ ಎಂದೆಲ್ಲಾ ಹೇಳಿರುವುದು ಜೊತೆಗೆ ಇಬ್ಬರೂ ಅಸಭ್ಯವಾಗಿ ವರ್ತಿಸುವುದನ್ನು ನೋಡಿರುವ ನೆಟ್ಟಿಗರು ಎಂಥ ಕಾಲ ಬಂತಪ್ಪಾ ಎನ್ನುತ್ತಿದ್ದಾರೆ.
ಅಷ್ಟಕ್ಕೂ, ವಿಚ್ಛೇದನದ ಬಳಿಕ, ನಿವೇದಿತಾ ಮೇಲೆ ಕೋಪ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪತಿ ಚಂದನ್ ಶೆಟ್ಟಿ ಅವರಿಂದ ನಿವೇದಿತಾ ವಿಚ್ಛೇದನ ಪಡೆದ ಮೇಲೆ ಬಹುತೇಕ ಎಲ್ಲರೂ ನಿವೇದಿತಾ ಅವರನ್ನೇ ದೂರುತ್ತಿದ್ದಾರೆ. ಚಂದನ್ ಶೆಟ್ಟಿ ತುಂಬಾ ಒಳ್ಳೆಯವರು, ಅವರ ಜೀವನ ಹಾಳು ಮಾಡಿಬಿಟ್ಟೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಬೈಗುಳಗಳ ಸುರಿಮಳೆಯಾಗುತ್ತಲೇ ಇದೆ. ಇವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ನಿಜವಾದರೂ ಅದರಲ್ಲಿ ನಿವೇದಿತಾ ಅವರದ್ದೇ ತಪ್ಪಿದೆ ಎನ್ನುವುದು ಚಂದನ್ ಶೆಟ್ಟಿ ಅಭಿಮಾನಿಗಳ ಮಾತು. ಇದೇ ಕಾರಣಕ್ಕೆ, ನಿವೇದಿತಾ ಅವರ ವಿಡಿಯೋ ಕಂಡಾಗಲೆಲ್ಲಾ ಅವರ ವಿರುದ್ಧ ಕಮೆಂಟ್ಗಳೇ ಹರಿದಾಡುತ್ತಿವೆ.
ಆದರೆ ಇದ್ಯಾವುದಕ್ಕೂ ನಿವೇದಿತಾ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದರೆ ಈ ಸ್ನೇಹಿತೆಯ ಜೊತೆಗಿನ ರೀಲ್ಸ್ನಲ್ಲಿ ಕೆಲವೊಮ್ಮ ಕಮೆಂಟ್ಸ್ ಸೆಕ್ಷನ್ ಆಫ್ ಮಾಡೋದು ಎಂದು ನೆಟ್ಟಿಗರನ್ನು ಚಿಂತೆಗೀಡು ಮಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.