
ಬೆಂಗಳೂರು(ಜ.21); ಕನ್ನಡದ ಚಮ್ಕಾಯಿಸಿ ಚಿಂದಿ ಉಡಾಯಿಸಿದ ಪಂಚರಂಗಿ ಹುಡುಗಿ, ಕೃಷ್ಣನ್ ಮ್ಯಾರೇಜ್ ಸ್ಟೋರಿಯ ರಾಧೇ ನಿಧಿ ಸುಬ್ಬಯ್ಯ ಮದುವೆ ಆಗುತ್ತಿದ್ದಾರೆ. ಕೊಡಗಿನುಡುಗಿ ನಿಧಿ ಸುಬ್ಬಯ್ಯಾ ಮದುವೆ ಆಗುತ್ತಿರುವ ಹುಡುಗ ಮುಂಬೈ ಮೂಲದ ಬಿಜಿನೆಸ್ ಮೆನ್ ಲ್ಯಾವಿಷ್ ಕೈರಾಜಾನಿ. ದೂರದ ಸಂಬಂಧಿ.
ಜನವರಿ 2ನೇ ತಾರೀಖು ಲ್ಯಾವಿಷ್ ಲವ್ ಪ್ರಪೋಸ್ ಮಾಡಿದ್ದಾರೆ. ನಿಧಿಗೆ ಅಚ್ಚರಿಯನ್ನೂ ನೀಡಿದ್ದಾರೆ. ರೆಸಾರ್ಟ್ ಒಂದನ್ನ ಬುಕ್ ಮಾಡಿ. ಸುಂದರ ಹೂಗಳಿಂದ ಅಲಂಕರಿಸಿದ ಬ್ಯಾಗ್ರೌಂಡ್`ನಲ್ಲಿ ಸ್ಪೆಷಲ್ ಡಿಸೈನರ್ ಟೇಬಲ್ ಮುಂದೆ ನಿಂತ ಲ್ಯಾವಿಷ್ ಒಂದು ಗಂಟೆ ಕಾಲ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡರಂತೆ. ನಿಧಿ ಫುಲ್ ಫಿದಾ ಆಗಿ ಹೋದರಂತೆ. ಡೈಮಂಡ್ ರಿಂಗ್ ತೆಗೆದು ಬೆರಳಿಗೂ ತೊಡಿಸಿಬಿಟ್ಟರಂತೆ. ಮದುವೆ ಏನಿದ್ರೂ ಕೂರ್ಗ್`ನಲ್ಲಿ ನಡೆಯಲಿದೆಯಂತೆ. ಯಾವುದಕ್ಕೂ ಇನ್ನಷ್ಟು ಮಾಹಿತಿಗಾಗಿ ಕಾದು ನೋಡಿ.
ಸುಗುಣ ಎಂಟರ್ಟೈನ್ಮೆಂಟ್ಬ್ಯೂರೋ ಸುವರ್ಣ ನ್ಯೂಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.