
ನವದೆಹಲಿ(ಅ.11): ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್ ಅವರನ್ನು ಸರ್ಕಾರಿ ಸ್ವಾಮ್ಯದ ಅಗ್ರಗಣ್ಯ ಸಿನಿಮಾ ತರಬೇತಿ ಸಂಸ್ಥೆ 'ಎಫ್'ಟಿಟಿಐ'ನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಹಾಲಿ ಅಧ್ಯಕ್ಷರಾದ ಗಜೇಂದ್ರ ಚೌಹಾನ್ ನಂತರ ಅನುಪಮ್ ಖೇರ್ ಅವರನ್ನು ನೇಮಕ ಮಾಡಲಾಗಿದೆ.
ಹಿಮಾಚಲ ಪ್ರದೇಶದ ಮೂಲದವರಾದ ಅನುಪಮ್ ಬಾಲಿವುಡ್'ನ ನೂರಕ್ಕೂ ಹೆಚ್ಚು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದು ಈಗಾಗಲೇ ರಾಷ್ಟ್ರೀಯ ನಾಟಕ ಶಾಲೆ ಹಾಗೂ ಸೆನ್ಸ್'ರ್ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 2 ಬಾರಿ ನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
ಹಿಂದಿ ಕಿರುತೆರೆಯ ನಟರಾದ ಗಜೇಂದ್ರ ಚೌಹಾನ್ ಅವರ ಧೋರಣೆಗಳ ವಿರುದ್ಧ ಎಫ್'ಟಿಟಿಐ ವಿದ್ಯಾರ್ಥಿಗಳು ಸತತ 139 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಗಜೇಂದ್ರ ಅವರ ಆಯ್ಕೆಗೆ ವಿವಿಧ ಕ್ಷೇತ್ರದ ವಲಯಗಳಿಂದ ಪರ ವಿರೋಧ ಚರ್ಚೆಯಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.