ನೋಡೋಕೆ ಬೆಳದಿಂಗಳ ಚೆಲುವೆ. ನರ್ತಿಸಿದ್ರೆ ನವಿಲೇ ನಾಟ್ಯ ಮಾಡಿದಂತೆ. ನಕ್ಕರೆ ಮಂಡ್ಯ ಸಕ್ಕರೆ, ಕನ್ನಡಕ್ಕೆ ಸಿಕ್ಕಿದ್ದಾಳೆ ಸೂರ್ಯಕಾಂತಿಯಂತಾ ಚೆಲುವೆ. ಅವ್ರೇ ನೆನಪಿರಲಿ ಪ್ರೇಮ್ ಮಗಳು ಅಮೃತಾ ಪ್ರೇಮ್. ಟಗರು ಪಲ್ಯ.
ನೋಡೋಕೆ ಬೆಳದಿಂಗಳ ಚೆಲುವೆ. ನರ್ತಿಸಿದ್ರೆ ನವಿಲೇ ನಾಟ್ಯ ಮಾಡಿದಂತೆ. ನಕ್ಕರೆ ಮಂಡ್ಯ ಸಕ್ಕರೆ, ಕನ್ನಡಕ್ಕೆ ಸಿಕ್ಕಿದ್ದಾಳೆ ಸೂರ್ಯಕಾಂತಿಯಂತಾ ಚೆಲುವೆ. ಅವ್ರೇ ನೆನಪಿರಲಿ ಪ್ರೇಮ್ ಮಗಳು ಅಮೃತಾ ಪ್ರೇಮ್. ಟಗರು ಪಲ್ಯ. ಸ್ಯಾಂಡಲ್ವುಡ್ನ ಮಾಸ್ ಮಹರಾಜ ಡಾಲಿ ಧನಂಜಯ್ ನಿರ್ಮಾಣದ ಸಿನಿಮಾ. ಈ ಸಿನಿಮಾದಿಂದ ನೆನಪಿರಲಿ ಪ್ರೇಮ್ ಮುದ್ದಿನ ಪುತ್ರಿ ಅಮೃತಾ ಪ್ರೇಮ್ ಸ್ಯಾಂಡಲ್ವುಡ್ಗೆ ಡೆಬ್ಯೂ ಆಗ್ತಿದ್ದಾರೆ. ಇದೀಗ ಈ ಸಿನಿಮಾದ ಲವ್ ಸಾಂಗ್ ರಿಲೀಸ್ ಆಗಿದೆ. ಈ ಹಾಡಿನಲ್ಲಿ ಮಂಡ್ಯ ಹಳ್ಳಿ ಹುಡುಗಿ ರೋಲ್ ಮಾಡಿರೋ ಅಮೃತಾ ಸುರ್ಯಕಾಂತಿಯಂತೆ ನಾನು ಎಂದು ನವಿಲಂತೆ ನರ್ತಿಸಿದ್ದಾರೆ.
ವಾಸುಕಿ ವೈಭವ್ ಈಗಿನ ಜಮಾನದ ಮೆಲೋಡಿ ಕಿಂಗ್. ಟಗರು ಪಲ್ಯಾಕ್ಕೆ ಮೆಲೋಡಿ ಒಗ್ಗರಣೆಯ ಟ್ಯೂನ್ ಕೊಟ್ಟಿದ್ದಾರೆ ವಾಸುಕಿ. ಆದ್ರೆ ಇಂಟ್ರೆಸ್ಟಿಂಗ್ ಏನ್ ಗೊತ್ತಾ. ಈ ಸಾಂಗ್ ಬರೆದಿದ್ದು ಡಾಲಿ ಧನಂಜಯ್.. ತೆರೆ ಮೇಲೆ ರಫ್ ಆ್ಯಂಡ್ ಟಪ್ ಮಾಸ್ ಆಗಿ ಮಿಂಚೋ ಡಾಲಿ ಇಲ್ಲಿ ಪ್ರೇಮ ಕವಿ ಆಗಿದ್ದಾರೆ. ಉಮೇಶ್ ಕೆ ಕೃಪಾ ನಿರ್ದೇಶನದ ಟಗರು ಪಲ್ಯಾ ಅಪ್ಪಟ ಹಳ್ಳಿ ಸೊಗಡಿನ ಸೊಬಗಿನ ಸಿನಿಮಾ. ನಾಗಭೂಷಣ್ ಟಗರು ಪಲ್ಯಾ ನಾಯಕ. ಡಾಲಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ಟಗರು ಪಲ್ಯಾ ನಿರ್ಮಾಣ ಆಗ್ತಿದೆ. ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವರಂತಹ ಘಟಾನುಘಟಿ ಸ್ಟಾರ್ಸ್ ಟಗರು ಪಲ್ಯಾ ಟೀಂ ಸ್ಟ್ರೆಂಟ್.
‘ಟಗರು ಪಲ್ಯ’ ಚಿತ್ರದಲ್ಲಿ ಅಮೃತಾ ಪ್ರೇಮ್ ಪಕ್ಕಾ ಹಳ್ಳಿ ಹುಡುಗಿ ಪಾತ್ರವನ್ನು ನಿಭಾಯಿಸಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ, ವರ್ಕ್ ಶಾಪ್ ಮೂಲಕ ಸಾಕಷ್ಟು ಕಲಿತು ಹಳ್ಳಿ ಹುಡುಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ ಎನ್ನಬಹುದು. ಮಂಡ್ಯ ಭಾಗದ ಕಥೆಯನ್ನೊಳ್ಳಗೊಂಡ ಈ ಚಿತ್ರದಲ್ಲಿ ಅಲ್ಲಿನ ಸೊಗಡಿನ ಭಾಷೆ ಕಲಿತು ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕ ಉಮೇಶ್ ಕೆ ಕೃಪ ಹಳ್ಳಿ ಹುಡುಗಿ ಪಾತ್ರ ಅಂದ್ರೆ ಸುಲಭದ ವಿಷಯವಲ್ಲ. ಅದಕ್ಕೆ ಆದಷ್ಟು ಬೇಗ ಒಗ್ಗಿಕೊಂಡು ಆ ನಯನಾಜೂಕನ್ನು ಬಹಳ ಬೇಗ ಅರ್ಥಮಾಡಿಕೊಂಡು ಅಮೃತ ನಟಿಸಿದ್ದಾರೆ.
ಈಗ ಶುರುವಾಗ್ತಿದೆ 'ಭೀಮ' ದರ್ಬಾರ್: ಗಣೇಶ ಹಬ್ಬಕ್ಕೆ ದುನಿಯಾ ವಿಜಯ್ ಬಾಯ್ಸ್ ಭರ್ಜರಿ ಸ್ಟೆಪ್!
ಭಾಷೆ ಮೇಲೆ ಅವರಿಗೆ ಹಿಡಿತ ಇದೆ. ಮಂಡ್ಯ ಸ್ಲ್ಯಾಂಗ್ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಈಗಾಗಲೇ ಎರಡು ಶೆಡ್ಯೂಲ್ ಕಂಪ್ಲೀಟ್ ಆಗಿದ್ದು ಬಹಳ ಬೇಗ ಎಲ್ಲವನ್ನು ಕಲಿತುಕೊಂಡು ಅಭಿನಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಡಾಲಿ ಧನಂಜಯ್ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್ಸ್ ನಡಿ ನಿರ್ಮಾಣವಾಗುತ್ತಿರುವ ಮೂರನೇ ಸಿನಿಮಾ ‘ಟಗರು ಪಲ್ಯ’. ಈ ಬಾರಿ ಹೊಸ ಪ್ರತಿಭೆಗಳಿಗೆ ಡಾಲಿ ಪಿಕ್ಚರ್ಸ್ ವೇದಿಕೆಯಾಗಿದೆ. 'ಇಕ್ಕಟ್' ಖ್ಯಾತಿಯ ನಾಗಭೂಷಣ್, ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಪ್ರೇಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ಉಮೇಶ್. ಕೆ. ಕೃಪ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.