ನೆನಪಿರಲಿ ಪ್ರೇಮ್‌ಗೆ 25ರ ಸಂಭ್ರಮ

By Web Desk  |  First Published Apr 8, 2019, 10:36 AM IST

ಅಂದುಕೊಂಡಂತೆ ನೆನಪಿರಲಿ ಪ್ರೇಮ್ ಅವರ ೨೫ನೇ ಸಿನಿಮಾ ಸಾಕಷ್ಟು ಭಿನ್ನತೆಗಳಿಂದ ಶುರುವಾಗಿದೆ. ಈಗಾಗಲೇ ಸಿಕ್ಕಾಪಟ್ಟೆ ಯಂಗ್ ಆಂಡ್ ಸ್ಟೈಲೀಶ್ ಲುಕ್‌ನಲ್ಲಿ ಚಿತ್ರದ ಫಸ್ಟ್ ಬಿಡುಗಡೆ ಮಾಡಿಕೊಂಡಿದ್ದಾರೆ. ಕತೆ ಓಕೆ ಮಾಡಿಕೊಂಡು ಸದ್ಯ ಚಿತ್ರಕ್ಕೆ ಬೇಕಾದ ಸಂಭಾಷಣೆಗಳನ್ನು ಜೋಡಿಸುವುದರಲ್ಲಿ ತಮ್ಮ ನಿರ್ದೇಶಕ ತಂಡದ ಜತೆಗೆ ಬ್ಯುಸಿಯಾಗಿದ್ದಾರೆ ನಟ ಪ್ರೇಮ್. ತಮ್ಮ ಈ 25ನೇ ಚಿತ್ರವಾಗಿ ಮೂಡಿ ಬರುತ್ತಿರುವ ‘ಪ್ರೇಮಂ ಪೂಜ್ಯಂ’ ಎನ್ನುವ ಚಿತ್ರದ ಬಗ್ಗೆ ಪ್ರೇಮ್ ಹೇಳಿದ್ದೇನು?


  • ಲೈಫ್ ಜತೆ ಒಂದ್ ಸೆಲ್ಫಿ ಸಿನಿಮಾ ನಂತರ ಹೆಚ್ಚು ಕಡಿಮೆ ಒಂದುವರೆ ವರ್ಷ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳದೆ ಸುಮ್ಮನಿದ್ದೆ. ಯಾಕೆಂದರೆ ಮುಂದೆ ಒಪ್ಪಿಕೊಳ್ಳುವ ಚಿತ್ರ ನನ್ನ 25ನೇ ಸಿನಿಮಾ ಆಗುತ್ತದೆ ಎಂಬ ಕಾರಣಕ್ಕೆ.
  • ಯಾವುದೇ ಒಬ್ಬ ನಟನೆಗೆ ತನ್ನ ವೃತ್ತಿ ಬದುಕಿನಲ್ಲಿ 25 ಹೆಜ್ಜೆಗಳು ಎಂಬುದು ತುಂಬಾ ಮಹತ್ವದಿಂದ ಕೂಡಿರುತ್ತದೆ. ಆತನ ಜೀವನದಲ್ಲಿ ಈ 25 ಎಂಬ ಸಂಭ್ರಮ ಕೊನೆ ತನಕ ಇರುತ್ತದೆ. ಆ ಕಾರಣಕ್ಕೆ ನಾನು ನಟಿಸಲಿರುವ 25ನೇ ಸಿನಿಮಾ ವಿಶೇಷವಾಗಿರಬೇಕು ಎಂದು ಮೊದಲೇ ನಿರ್ಧರಿಸಿದೆ.
  • ಆದರೆ, ಈ ಒಂದುವರೆ ವರ್ಷದಲ್ಲಿ ನನಗೆ ಸಾಕಷ್ಟು ಕತೆಗಳು ಬಂದವು. ಹೆಚ್ಚು ಕಮ್ಮಿ 20 ಕತೆಗಳನ್ನು ನಾನು ಕೇಳಿದ್ದೇನೆ. ಇನ್ನೂ ಏನೋ ಹೊಸತನ ಬೇಕು ಅನಿ ಸಕ್ಕೆ ಶುರುವಾಯಿತು. ಯಾಕೆಂದರೆ ರೆಗ್ಯೂಲರ್ ಫೈಟ್, ಹಾಡುಗಳ ಹೊರತಾಗಿರುವ ಕತೆಗಾಗಿ ಕಾಯುತ್ತಿದ್ದೆ. ಅಲ್ಲದೆ ಚಿತ್ರದ ಕತೆ ಪ್ರೇಕ್ಷಕನಲ್ಲಿ ಚರ್ಚೆ ಹುಟ್ಟು ಹಾಕ ಬೇಕು ಎಂಬುದು ನನ್ನ ಗುರಿಯಾಗಿತ್ತು.

  • ನನ್ನ ಈ ಕಾಯುವಿಕೆಗೆ ತಕ್ಕಂತೆ ಸಿಕ್ಕ ಚಿತ್ರವೇ ‘ಪ್ರೇಮಂ ಪೂಜ್ಯಂ’. ಇದು ನನ್ನ ಬೆಳ್ಳಿ ಸಂಭ್ರಮಕ್ಕೆ ಸೂಕ್ತವಾದ ಸಿನಿಮಾ ಅನಿಸಿತು. ಮೊದಲನೇ ಬಾರಿಗೆ ನನಗೆ ಚಿತ್ರದ ಹೆಸರೇ ವಿಶೇಷವಾಗಿ ಕೇಳಿಸಿತು. ಆ ನಂತರ ನಾನು ಆಸಕ್ತಿಯಿಂದ ಕತೆ ಕೇಳಕ್ಕೆ ಕೂತೆ.
  • ಇಲ್ಲಿ ಹೀರೋಯಿಸಂ ಇದೆ. ನಟನೊಬ್ಬನ ವ್ಯಕ್ತಿತ್ವಕ್ಕೆ ತಕ್ಕಂತೆ ಕತೆಯೊಂದು ತುಂಬಾ ಚೆನ್ನಾಗಿ ನಿರ್ದೇಶಕ ಡಾ ರಾಘವೇಂದ್ರ ಅವರು ಮಾಡಿಕೊಂಡಿದ್ದಾರೆ. ಮೊದಲು ನನ್ನ ಲುಕ್ ಬದಲಾಯಿಸಿದರು. ಅಲ್ಲಿಂದ ನನಗೆ ಮತ್ತಷ್ಟು ಭಿನ್ನವಾಗಿ ಕಂಡಿತು. ಚಿತ್ರದ ಫಸ್ಟ್ ಲುಕ್ ಫೋಟೋಶೂಟ್ ಮಾಡಿದಾಗ ಇದೇ ನನ್ನ 25ನೇ ಸಿನಿಮಾ ಆಗಲಿ ಎನ್ನುವ ಸಂಭ್ರಮ ಮೂಡಿಸಿತು.
  • ಏಪ್ರಿಲ್ ಕೊನೆ ಅಥವಾ ಮೇ ತಿಂಗಳ ಮೊದಲ ವಾರದಿಂದ ಚಿತ್ರೀಕರಣ ಶುರುವಾಗಲಿದೆ. ವಿಶೇಷವಾದ ತಂಡ. ಹೊಸ ರೀತಿಯ ಯೋಚನೆಗಳಿಂದ ಕೂಡಿರುವ ತಂತ್ರಜ್ಞರು. ಅದ್ಭುತವಾದ ಸಹ ಕಲಾವಿದರನ್ನು ಜತೆಯಾಗಿಸಿಕೊಂಡು ಈ ಸಿನಿಮಾ ಮಾಡುವುದಕ್ಕೆ ಹೊರಟಿದ್ದೇವೆ. ನಿರ್ದೇಶಕರು ವೈದ್ಯರು. ಡಾಕ್ಟರ್ ಒಬ್ಬರು ಇಂಥದ್ದೊಂದು ಕತೆ ಬರೆಯುತ್ತಾರೆಯೇ ಎಂದು ನಾನು ಅಚ್ಚರಿಯಿಂದಲೇ ಈ ಸಿನಿಮಾ ಒಪ್ಪಿಕೊಂಡಿದ್ದೇನೆ.
  • ಈ ಚಿತ್ರದ ನಂತರ ಸಂಪೂರ್ಣವಾಗಿ ಹೊಸ ಪ್ರೇಮ್ ಕಾಣಿಸುತ್ತಾರೆ. ಆ ಮಟ್ಟಿಗೆ ನನಗೆ ನಂಬಿಕೆ ಮೂಡಿಸಿರುವ ಕತೆಯನ್ನು ‘ಪ್ರೇಮಂ ಪೂಜ್ಯಂ’ ಒಳಗೊಂಡಿದೆ. 
click me!