National Film Awards: ಆರ್‌ಆರ್‌ಆರ್‌ಗೆ ಬಂಪರ್‌, ಅಲ್ಲು ಅರ್ಜುನ್‌, ಆಲಿಯಾ ಭಟ್‌, ಕೃತಿ ಶನೋನ್‌ಗೆ ಪ್ರಶಸ್ತಿ!

By Santosh NaikFirst Published Aug 24, 2023, 6:39 PM IST
Highlights

69th National Film Awards: ಕೇಂದ್ರ ಸರ್ಕಾರ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ ಮಾಡಿದ್ದು, ಅದರ ಫುಲ್‌ ಲಿಸ್ಟ್‌ ಇಲ್ಲಿದೆ.


ನವದೆಹಲಿ (ಆ.24): 2021ರ ಸಾಲಿನ ಹಾಗೂ 69ನೇ ಆವೃತ್ತಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಗುರುವಾರ ಘೋಷಣೆ ಮಾಡಿದೆ. ಆಸ್ಕರ್‌ ಗೌರವಕ್ಕೆ ಭಾಜನವಾಗಿದ್ದ ಆರ್‌ಆರ್‌ಆರ್‌ ಸಿನಿಮಾ ನಿರೀಕ್ಷೆಯಂತೆ ಗರಿಷ್ಠ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಅತ್ಯುತ್ತಮ ಆಕ್ಷನ್‌ ಡೈರೆಕ್ಷನ್‌,ನೃತ್ಯ ಸಂಯೋಜನೆ ಹಾಗೂ ಸ್ಪೆಷಲ್‌ ಎಫೆಕ್ಟ್ಸ್‌  ವಿಭಾಗದಲ್ಲಿ ಪ್ರಶಸ್ತಿ ಜಯಿಸಿದೆ. ಅದರೊಂದಿಗೆ ತೆಲುಗು ಸಿನಿಮಾ ರಂಗದ ಪ್ರಮುಖ ಚಿತ್ರವಾದ ಪುಷ್ಪಾ: ದಿ ರೈಸ್‌ ಸಿನಿಮಾದ ನಟನೆಗಾಗಿ ಅಲ್ಲು ಅರ್ಜುನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಒಲಿದಿದೆ.

ಆರ್‌ಆರ್‌ಆರ್‌ಗೆ ಬಂಪರ್‌ ಪ್ರಶಸ್ತಿ: ತೆಲುಗಿನ ಆರ್‌ಆರ್‌ಅರ್‌ ಸಿನಿಮಾ ಅತ್ಯುತ್ತಮ ಆಕ್ಷನ್‌ ಡೈರೆಕ್ಷನ್‌, ನೃತ್ಯ ಸಂಯೋಜನೆ, ಸ್ಪೆಷಲ್‌ ಎಫೆಕ್ಟ್ಸ್‌ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಎಸ್‌ಎಸ್‌ ರಾಜಮೌಳಿಯವರ ಚಿತ್ರ ಇದಾಗಿದೆ.

ಅತ್ಯುತ್ತಮ ಸಿನಿಮಾ: ನಟ ಮಾಧವನ್‌ ನಿರ್ದೇಶನದ, ಇಸ್ರೋ ವಿಜ್ಞಾನಿ ನಂಬಿ ನಾರಾಯಣ್‌ ಅವರ ಜೀವನಾಧಾರಿತ ಚಿತ್ರ ರಾಕೆಟ್ರಿ: ನಂಬಿ ಎಫೆಕ್ಟ್ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದೆ.

ಅತ್ಯುತ್ತಮ ನಟ: ಪುಷ್ಪ: ದಿ ರೈಸ್‌ ಭಾಗ-1 ಸಿನಿಮಾದ ನಟನೆಗಾಗಿ ಅಲ್ಲು ಅರ್ಜುವ್‌ ಅವರು ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಜಯಿಸಿದ್ದಾರೆ.

ಅತ್ಯುತ್ತಮ ನಟಿ: ಗಂಗೂಬಾಯಿ ಕಥಿಯಾವಾಡಿ ಮತ್ತು ಮಿಮಿಗಾಗಿ ಆಲಿಯಾ ಭಟ್ ಮತ್ತು ಕೃತಿ ಸನೋನ್ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಜಂಟಿಯಾಗೊ ಪಡೆದುಕೊಳ್ಳಲಿದ್ದಾರೆ.

ಅತ್ಯುತ್ತಮ ಪೋಷಕ ನಟ: ಮಿಮಿ ಚಿತ್ರದಲ್ಲಿ ಪಂಕಜ್‌ ತ್ರಿಪಾಠಿ ಅವರು ತಮ್ಮ ಪಾತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ರಾಷ್ಟ್ರೀಯ ಪ್ರಶಸ್ತಿ ಜಯಿಸಿದ್ದಾರೆ.

ಅತ್ಯುತ್ತಮ ಪೋಷಕ ನಟಿ: ದಿ ಕಾಶ್ಮೀರ್‌ ಫೈಲ್ಸ್‌ನಲ್ಲಿ ವಿವಿ ಪ್ರೊಫೆಸರ್‌ ಪಾತ್ರ ನಿಭಾಯಿಸಿದ್ದ ಪಲ್ಲವಿ ಜೋಶಿ ಅವರಿಗೆ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿ ಘೋಷಣೆಯಾಗಿದೆ.

ಬೆಸ್ಟ್‌ ಅಡಾಪ್ಟೆಡ್‌ ಸ್ಕ್ರೀನ್‌ ಪ್ಲೇ, ಬೆಸ್ಟ್‌ ಡೈಲಾಗ್‌: ಗಂಗೂಬಾಯಿ ಕಥಿಯಾವಾಡಿ ಬೆಸ್ಟ್‌ ಅಡಾಪ್ಟೆಡ್‌ ಸ್ಕ್ರೀನ್‌ ಪ್ಲೇ ಮತ್ತು ಅತ್ಯುತ್ತಮ ಸಂಭಾಷಣೆ ವಿಭಾಗದ ರಾಷ್ಟ್ರೀಯ ಪ್ರಶಸ್ತಿ ಜಯಿಸಿದೆ.

ಪ್ರಾದೇಶಿಕವಾರು ಅತ್ಯುತ್ತಮ ಚಲನಚಿತ್ರಗಳು
ಹಿಂದಿ: ಸರ್ದಾರ್‌ ಉದಮ್‌
ಗುಜರಾತಿ: ಚೆಲ್ಲೋ ಶೋ
ಮಿಶಿಂಗ್: ಬೂಂಬಾ ರೈಡ್
ಅಸ್ಸಾಮಿ: ಅನುರ್ (ಐಸ್ ಆನ್ ದಿ ಸನ್‌ಶೈನ್)
ಬಂಗಾಳಿ: ಕಲ್ಕೊಕ್ಖೋ
ಕನ್ನಡ - 777 ಚಾರ್ಲಿ
ಮೈಥಿಲಿ: ಸಮನಾಂತರ್‌
ಮರಾಠಿ: ಎಕ್ದಾ ಕೇ ಜಲಾ
ಮಲಯಾಳಂ: ಹೋಮ್

ಅತ್ಯುತ್ತಮ ನಾನ್ ಫೀಚರ್ ಚಿತ್ರ: ಅತ್ಯುತ್ತಮ ನಾನ್ ಫೀಚರ್ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಗಡ್ವಾಲಿ ಮತ್ತು ಸೃಷ್ಟಿ ಲಖೇರಾ ನಿರ್ದೇಶನದ ಹಿಂದಿ ಚಿತ್ರ ‘ಏಕ್ ಥಾ ಗಾಂವ್’ಗೆ ಲಭಿಸಿದೆ.
ಅತ್ಯುತ್ತಮ ಚಲನಚಿತ್ರ ವಿಮರ್ಶಕ ಪ್ರಶಸ್ತಿ: ಪುರುಷೋತ್ತಮ ಚಾರ್ಯುಲು (ತೆಲಗು)

click me!