National Film Awards: 777 ಚಾರ್ಲಿಗೆ ಅತ್ಯುತ್ತಮ ರಾಷ್ಟ್ರೀಯ ಪ್ರಶಸ್ತಿ, ಇಲ್ಲಿದೆ ನೋಡಿ ವಿಜೇತರ ಲಿಸ್ಟ್‌

By Santosh NaikFirst Published Aug 24, 2023, 5:47 PM IST
Highlights

ಕೇಂದ್ರ ಮಾಹಿತಿ ಮತತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ 69ನೇ ರಾಷ್ಟ್ರೀಯ ಪ್ರಶಸ್ತಿಯನ್ನು ಘೋಷಣೆ ಮಾಡಿದರು. ಗರ್ವಾಲಿ ಮತ್ತು ಹಿಂದಿ ಚಿತ್ರ ಏಕ್ ಥಾ ಗಾಂವ್ ಅತ್ಯುತ್ತಮ ನಾನ್ ಫೀಚರ್ ಚಿತ್ರ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.

ನವದೆಹಲಿ (ಆ.24): ಕೇಂದ್ರ ಸರ್ಕಾರ 69ನೇ ಆವೃತ್ತಿಯ ನ್ಯಾಷನಲ್‌ ಫಿಲ್ಮ್‌ ಅವಾರ್ಡ್‌ ಅನ್ನು ಪ್ರಕಟಿಸಿದೆ.31 ಪ್ರಶಸ್ತಿಗಳನ್ನು ಫೀಚರ್‌ ಫಿಲ್ಮ್‌ ವಿಭಾಗದಲ್ಲಿ ಹಾಗೂ 24 ಪ್ರಶಸ್ತಿಗಳನ್ನು ನಾನ್‌ ಫೀಚರ್‌ ವಿಭಾಗದಲ್ಲಿ ನೀಡಲಾಗುತ್ತದೆ. 2021ರ ಸಾಲಿನ ಪ್ರಶಸ್ತಿಗಳು ಇದಾಗಿದೆ. 2021ರ ಫೀಚರ್‌ ಫಿಲ್ಮ್‌ ವಿಭಾಗದಲ್ಲಿ 28 ಭಾಷೆಗಳಿಂದ 285 ಸಿನಿಮಾಗಳು ಎಂಟ್ರಿಯಾಗಿದ್ದರೆ, ನಾನ್‌ ಫೀಚರ್‌ ವಿಭಾಗದಲ್ಲಿ 23 ಭಾಷೆಗಳಿಂದ 158 ಎಂಟ್ರಿಗಳು ಬಂದಿದ್ದವು. ದಾದಾ ಸಾಹೇಬ್‌ ಪ್ರಶಸ್ತಿಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗಿವುದು ಎಂದು ಇಲಾಖೆ ತಿಳಿಸಿದೆ. ಕಿರಣ್‌ ಕುಮಾರ್‌ ನಿರ್ದೇಶನದ 777 ಚಾರ್ಲಿ ಸಿನಿಮಾ ಫೀಚರ್‌ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಜಯಿಸಿದೆ. ನಟ ಮಾಧವನ್‌ ನಿರ್ದೇಶನದ ರಾಕೆಟ್ರಿ: ದಿ ನಂಬಿ ಎಫೆಕ್ಟ್‌ ಚಿತ್ರ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಫೀಚರ್‌ ಫಿಲ್ಮ್‌ ವಿಭಾಗದಲ್ಲಿ ಪ್ರಶಸ್ತಿ ಜಯಸಿದೆ. ನಾನ್‌ ಫೀಚರ್‌  ಸ್ಪೆಷಲ್‌ ಮೆನ್ಶನ್‌ ವಿಭಾಗದಲ್ಲಿ ಕನ್ನಡದ ಅನಿರುದ್‌ ಜತ್ಕರ್‌ ಅವರ ಬಾಳೆ ಬಂಗಾರ ಸಿನಿಮಾ ಪ್ರಶಸ್ತಿ ಜಯಿಸಿದೆ. ಗಂಗೂಬಾಯಿ ಚಿತ್ರಕ್ಕಾಗಿ ನಟಿ ಆಲಿಯಾ ಭಟ್‌ ಹಾಗೂ ಮಿಮಿ ಚಿತ್ರಕ್ಕಾಗಿ ಕೃತಿ ಶನನ್‌ ಅತ್ಯುತ್ತಮ ನಟಿ ಪ್ರಶಸ್ತಿ ಜಯಿಸಿದ್ದಾರೆ.

ಬಾಳೆ ಬಂಗಾರ ಸಾಕ್ಷ್ಯಚಿತ್ರವನ್ನು ನಟ ಅನಿರುದ್‌ ಜತ್ಕರ್‌ ನಿರ್ದೇಶ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಟಿ ಭಾರತಿ ವಿಷ್ಣುವರ್ಧನ್‌ ಅವರ ಸಾಧನೆ ಹಾಗೂ ಜೀವನದ ಬಗ್ಗೆ ಸಾಕ್ಷ್ಯಚಿತ್ರದಲ್ಲಿ ವಿವರಿಸಲಾಗಿದೆ.ಆಯುಷ್ಮಾನ್ ಚಿತ್ರವು ಗ್ರಾಮೀಣ ಭಾರತದ ಇಬ್ಬರು 14 ವರ್ಷದ ಎಚ್‌ಐವಿ ಪೀಡಿತರ ಪ್ರಯಾಣದ ಒಂದು ಸ್ಫೂರ್ತಿದಾಯಕವಾಗಿದೆ, ಅವರು ಎಚ್‌ಐವಿ ರೋಗಿಗಳ ವಿರುದ್ಧ ಸಮಾಜದಲ್ಲಿ ಇರುವ ಎಲ್ಲಾ ಸಾಮಾಜಿಕ ಕಳಂಕ ಮತ್ತು ತಾರತಮ್ಯವನ್ನು ನಿವಾರಿಸಲು ಮ್ಯಾರಥಾನ್‌ಗಳನ್ನು ಓಡಲು ಇಷ್ಟಪಡುವ ಕಥೆಯನ್ನು ಹೊಂದಿದೆ. 


ಫೀಚರ್‌ ಫಿಲ್ಮ್‌ ವಿಭಾಗದ ಪ್ರಶಸ್ತಿಗಳು
ಬೆಸ್ಟ್‌ ಫೀಚರ್‌ ಫಿಲ್ಮ್‌:
ಬೆಸ್ಟ್‌ ಮಿಶಿಂಗ್‌ ಫಿಲ್ಮ್‌: ಬೊಂಬಾ ರೈಡ್‌
ಅಸ್ಸಾಮಿ ಚಿತ್ರ: ಅನುರ್‌
ಬೆಂಗಾಳಿ ಚಿತ್ರ: ಕಾಲಕೋಕ್ಕೊ-ಹೌಸ್‌ ಆಫ್‌ ಟೈಮ್‌
ಹಿಂದಿ ಚಿತ್ರ: ಸರ್ದಾರ್‌ ಉದಮ್‌
ಗುಜರಾತಿ ಚಿತ್ರ: ಚೆಲ್ಲೋ ಶೋ
ಕನ್ನಡ ಚಿತ್ರ: 777 ಚಾರ್ಲಿ

 

(ಸುದ್ದಿ ಅಪ್‌ಡೇಟ್‌ ಆಗುತ್ತಿದೆ)

click me!