
ಮಹಾನಟಿ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಕೀರ್ತಿ ಸುರೇಶ್ ಗೆ ‘ಮಿಸ್ ಇಂಡಿಯಾ’ ಕಿರೀಟ! ಹೌದು ಕೀರ್ತಿ ಸುರೇಶ್ ಮುಡಿಗೇರಿದೆ ಮಿಸ್ ಇಂಡಿಯಾ ಕಿರೀಟ!
ರಾಷ್ಟ್ರ ಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ತೆಲುಗಿನಲ್ಲಿ ಮಿಸ್ ಇಂಡಿಯಾ ಎನ್ನುವ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಪಾತ್ರದ ಬಗ್ಗೆ ಒಂದು ಟೀಸರನ್ನು ಚಿತ್ರ ತಂಡ ರಿಲೀಸ್ ಮಾಡಿದೆ.
ಮಿಸ್ ಇಂಡಿಯಾ ಆಗಲು ಕೀರ್ತಿ ಸುರೇಶ್ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಟೀಸರ್ ನಲ್ಲಿ ತೆಳ್ಳಗೆ ಬಳಕುವ ಬಳ್ಳಿಯಂತಾಗಿದ್ದಾರೆ.
'ಮದಗಜ'ನಿಗೆ ಜೋಡಿಯಾದ ಕೀರ್ತಿ ಸುರೇಶ್!
ಇನ್ನು ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ರಿವೀಲ್ ಮಾಡಿಲ್ಲ. ಕೆಲವು ಮೂಲಗಳ ಪ್ರಕಾರ ಕೀರ್ತಿ ಸುರೇಶ್ ಮಾಡೆಲ್ ಪಾತ್ರವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.
ನರೇಂದ್ರ ನಾಥ್ ಮಿಸ್ ಇಂಡಿಯಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಜಗಪತಿ ಬಾಬು, ನವೀನ್ ಚಂದ್ರ, ರಾಜೇಂದ್ರ ಪ್ರಸಾದ್, ನರೇಶ್, ಭಾನುಶ್ರೀ ಮೆಹ್ರಾ, ಸುಮಂತ್ ಎಸ್, ಪೂಜಿತಾ ಪೊನ್ನಡ, ಕಮಲ್ ಕಾಮರಾಜು ಈ ಚಿತ್ರದಲ್ಲಿ ನಟಿಸಲಿದ್ದಾರೆ.
66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಇಲ್ಲಿದೆ ಪ್ರಶಸ್ತಿ ವಿವರ
ಇನ್ನು ಕೀರ್ತಿ ಬಾಲಿವುಡ್ ಗೆ ಕಾಲಿಡಲು ಸಜ್ಜಾಗಿದ್ದು, ಅಜಯ್ ದೇವಗನ್ ಜೊತೆ ಶೂಟಿಂಗ್ ಶುರು ಮಾಡಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.