
ಮದ್ವೆಗಳು ಸ್ವರ್ಗದಲ್ಲೇ ನಿಶ್ಚಯವಾಗುತ್ತವಂತೆ. ಅಲ್ಲೇ ನಿಶ್ಚಯವಾದರೂ ಇಲ್ಲಿ ಹಾರಾಟ ಹೋರಾಟ ತಪ್ಪಿದ್ದಲ್ಲ. ಅದರಲ್ಲೂ ಸ್ಟಾರ್ ಮದುವೆಗಳ ಬಗ್ಗೆಯಂತೂ ಕೇಳಲೇಬೇಡಿ. ಅದೂ ಎಂಗೇಜ್‌ಮೆಂಟ್ ಆದ ಮೇಲಿಂದ ಮದ್ವೆ ಆಗುವವರೆಗೆ ಹೇಗ್, ಏನ್ ಕತೆ, ಯಾವಾಗ ಮದ್ವೆ, ಉಪ್ಪಿನಕಾಯಿ ಎಲ್ಲಿಂದ ತರ್ತಾರೆ, ಹಾಲ್ ಯಾವುದು ಎಂಬಿತ್ಯಾದಿ ಪ್ರಶ್ನೆಗಳು ಕೇಳುತ್ತಲೇ ಇರುತ್ತವೆ.
ಸದ್ಯ ಆ ಪ್ರಶ್ನೆಗೆ ತುತ್ತಾಗಿರುವ ಸ್ಟಾರ್ ಕಪಲ್ ನಾಗಚೈತನ್ಯ ಮತ್ತು ಸಮಂತಾ. ಆದರೆ ಅವರಿಬ್ಬರ ಮದ್ವೆ ಡೇಟು ಫಿಕ್ಸಾಗಿದೆ. ಅಕ್ಟೋಬರ್ 6ರಂದು ಇವರಿಬ್ಬರ ಮದುವೆ ನಡೆಯಲಿದೆ. ಈ ಮಧ್ಯೆ ಸಮಂತಾ ಅವರು ರಾಮ್‌ಚರಣ್‌ತೇಜಾ ನಾಯಕರಾಗಿರುವ ‘ರಂಗಸ್ಥಳಂ 1985' ಎಂಬ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಅದೊಂದು ಪೀರಿಯಾಡಿಕ್ ಸಿನಿಮಾ ಆಗಿದ್ದು, ಬಹುಶಃ ಅನಂತರ ಸಮಂತಾ ಮದುವೆ ಬಂಧನಕ್ಕೆ ಒಳಗಾಗಬಹುದು ಅಂತ ಟಾಲಿವುಡ್ ಮಾತನಾಡುತ್ತಿದೆ.
ಸದ್ಯಕ್ಕಂತೂ ಇದೊಂದು ಟಾಲಿವುಡ್‌ನ ಮಹೋನ್ನತ ಮದುವೆಯೆಂದೇ ಬಿಲ್ಡಪ್ ಸಿಗುತ್ತಿದೆ. ನಾಗಾರ್ಜುನ ಬೇರೆ ಮದುವೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಏನಕ್ಕೂ ಇನ್ನೂ ಅಕ್ಟೋಬರ್ 6ರವೆಗೆರೆ ಕಾಯಬೇಕು.
ವರದಿ: ಕನ್ನಡಪ್ರಭ, ಸಿನಿವಾರ್ತೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.