
ಬೆಂಗಳೂರು (ಜೂ.09): ಗಾಂಧಿನಗರದಲ್ಲಿ ದಂಡುಪಾಳ್ಯ-2 ಚಿತ್ರದ ಪ್ರಚಾರಕ್ಕಾಗಿ ನನ್ನನ್ನು ಕರೆಯುತ್ತಿಲ್ಲ ಅಂತ ನಟಿ ಸಂಜನಾ ಕೆಲ ದಿನಗಳಗಳ ಹಿಂದೆ ನಟಿ ಪೂಜಾಗಾಂಧಿ ವಿರುದ್ಧ ತಮ್ಮ ಬೇಸರವನ್ನ ವ್ಯಕ್ತಪಡಿಸಿದ್ದರು. ಹಾಗೇ ಪೂಜಾಗಾಂಧಿಯಿಂದಾಗಿ ದಂಡುಪ್ಯಾಳ್ಯ ಚಿತ್ರದ ಪ್ರಚಾರಕ್ಕೆ ಕರೆಯುತ್ತಿಲ್ಲ ಅಂತಾ ಸಂಜನಾ ಪರೋಕ್ಷವಾಗಿ ಪೂಜಾಗಾಂಧಿ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ರು.
ಈ ಬಗ್ಗೆ ನಟಿ ಪೂಜಾಗಾಂಧಿ ತಮ್ಮ ಫೇಸ್ ಬುಕ್’ನಲ್ಲಿ ನನಗೆ ಬೇರೆಯವರನ್ನ ತುಳಿಯುವ ಮನಸ್ಥಿತಿ ಇಲ್ಲ. ಹಾಗೇ ನಾನೊಬ್ಬಳು ಒಳ್ಳೆಯ ನಟಿ ಅಂತ ನನಗೆ ಗೊತ್ತು.ಈ ಚಿತ್ರದ ನಿರ್ದೇಶಕ ಹಾಗು ನಿರ್ಮಾಪಕರಿಗೆ ಯಾವುದೇ ರೀತಿಯ ಒತ್ತಡಗಳನ್ನ ಹೇರಿಲ್ಲ ಅಂತ ಹೇಳಿಕೊಂಡಿದ್ದಾರೆ. ದಂಡುಪಾಳ್ಯ ಚಿತ್ರದಲ್ಲಿ ಮುಖ್ಯ ಪಾತ್ರ ನಾನು ಮಾಡ್ತಾ ಬಂದಿದ್ದೇನೆ. ಹಾಗೇ ಮೂರು ಸಿನಿಮಾಗಳನ್ನ ನಿರ್ಮಾಣ ಕೂಡ ಮಾಡ್ತಾ ಇದ್ದೇನೆ. ಹೀಗೆ ಇರಬೇಕಾದ್ರೆ ಬೇರೆಯವರ ಬೆಳವಣಿಗೆ ನೋಡಿ ನಾನು ಯಾಕೇ ಬೇಸರ ಮಾಡಿಕೊಳ್ಳಲಿ ಎಂದು ಪೂಜಾಗಾಂಧಿ ದಂಡುಪಾಳ್ಯ-2 ಚಿತ್ರದ ವಿವಾದ ಬಗ್ಗೆ ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.