ಕನ್ನಡದ ಕೋಟ್ಯಾಧಿಪತಿ ಹಾಟ್ ಸೀಟ್ ನಲ್ಲಿ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ | ಗೆದ್ದ ಹಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ |
ಮೈಸೂರು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಜನಪರ ಕೆಲಸಗಳ ಮೂಲಕ ಜನಸಾಮಾನ್ಯರಿಗೆ ಹತ್ತಿರವಾಗಿದ್ದಾರೆ. ಅಭಿವೃದ್ಧಿ ಕೆಲಸಗಳಲ್ಲಿ ಹೆಚ್ಚು ಉತ್ಸುಕತೆ ತೋರುತ್ತಿದ್ದಾರೆ. ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರವಾಹ ಸಂತ್ರಸ್ತರ ನೆರವಿಗೆ ನಿಲ್ಲಲು ‘ಕನ್ನಡದ ಕೋಟ್ಯಧಿಪತಿ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ ಗೆದ್ದ ಹಣವನ್ನು ಮುಖ್ಯಮಂತ್ರಿಗಳ ಸಂತ್ರಸ್ತರ ನಿಧಿಗೆ ಕೊಡಲು ನಿರ್ಧರಿಸಿದ್ದಾರೆ.
ಕೋಟ್ಯಧಿಪತಿಯಲ್ಲಿ 25 ಲಕ್ಷದ ಪ್ರಶ್ನೆ ಕ್ವಿಟ್ ಮಾಡಿ 12.5 ಲಕ್ಷ ಸಾಕು ಎಂದ ಮಹಿಳೆ!
undefined
ಕನ್ನಡದ ಕೋಟ್ಯಧಿಪತಿ ಹಾಟ್ ಸೀಟಿನಲ್ಲಿ ಮೈಸೂರಿನ ಸಿಂಹ, ಯುವಜನತೆಯ ಸೂರ್ಯ ಕುಳಿತಿದ್ದಾರೆ. ಇಬ್ಬರೂ ಕೂಡಾ ಒಳ್ಳೆಯ ಸ್ಪರ್ಧಿಗಳು. ಇವರಿಬ್ಬರೂ ಟಿವಿ ಚಾನೆಲ್ ಗಳಲ್ಲಿ, ಚರ್ಚೆಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಹಾಗಾಗಿ ಇವರಿಗೆ ಟಿವಿ ಮಾಧ್ಯಮ ಹೊಸದಲ್ಲ. ಆದರೆ ಇದೇ ಮೊದಲ ಬಾರಿಗೆ ಮನರಂಜನಾ ವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಕೋಟ್ಯಧಿಪತಿಯಲ್ಲಿ ಪುನೀತ್‌ಗೆ ಸವಾಲು ಹಾಕಿದ ಸ್ಪರ್ಧಿ!
ಈ ಎಪಿಸೋಡ್ ಇದೇ ಶನಿವಾರ, ಭಾನುವಾರ ಅಂದರೆ ಸೆಪ್ಟೆಂಬರ್ 7, 8 ರಂದು ಪ್ರಸಾರವಾಗಲಿದೆ. ಎಷ್ಟು ಹಣ ಗೆದ್ದಿರಬಹುದು ಎಂಬುದು ಕುತೂಹಲ ಮೂಡಿಸಿದೆ.
ಸೆ.05ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ