
ಬೆಂಗಳೂರು (ಡಿ. 29): ಸ್ಯಾಂಡಲ್ ವುಡ್ ಸೂಪರ್ ಹಿಟ್ ಮೂವಿ ’ಮುಂಗಾರು ಮಳೆ’ ತೆರೆ ಕಂಡು ಇಂದಿಗೆ 12 ವರ್ಷ ತುಂಬುತ್ತದೆ. 12 ನೇ ವರ್ಷದ ಆ್ಯನಿವರ್ಸರಿ ಇಂದು. 2006 ರಲ್ಲಿ ತೆರೆ ಕಂಡ ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಗೆ ಭಾರೀ ಹೆಸರು ತಂದುಕೊಟ್ಟ ಚಿತ್ರ ಇದು.
ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್. ಅನಿಸುತಿದೆ ಯಾಕೋ ಇಂದು.... ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.... ಹಾಡುಗಳು ಲವರ್ಸ್ ಗಳ ಬಾಯಲ್ಲಿ ಗುನುಗುವಂತೆ ಮಾಡಿದೆ.
ನವಿರಾದ ಪ್ರೇಮಕಥೆ ಮೂಲಕ ಜನರ ಮನಸೂರೆಗೊಂಡ ಚಿತ್ರವಿದು. ಈ ಚಿತ್ರದ ನಂತರ ಯೋಗರಾಜ್ ಭಟ್, ಗಣೇಶ್ ಹಾಗೂ ಪೂಜಾ ಗಾಂಧಿ ಸ್ಟಾರ್ ಬದಲಾಗಿ ಹೋಯಿತು. ಚಿತ್ರದ ಯಶಸ್ಸಿನ ಬಗ್ಗೆ ಯೋಗರಾಜ್ ಭಟ್ ಮಾತನಾಡುತ್ತಾ, ಈ ಪರಿ ಯಶಸ್ಸು ಹೇಗೆ ಸಿಕ್ತು? ಇವೆಲ್ಲಾ ಹೇಗೆ ಸಾಧ್ಯವಾಯಿತು ಎನ್ನುವುದು ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಇದಕ್ಕೆ ಅನೇಕ ಸಂಗತಿಗಳು ಕಾರಣ. ಈ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಲ್ಯಾಂಡ್ ಮಾರ್ಕ್ ಆಗಿದೆ. ಇದೊಂದು ಅದೃಷ್ಟ’ ಎಂದು ಹೇಳಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, ಮುಂಗಾರು ಮಳೆ ಚಿತ್ರ ನನಗೆ ಎಲ್ಲವನ್ನು ಕೊಟ್ಟಿದೆ. ನಾನು ಇಂದು ಏನಾಗಿದ್ದೆನೋ ಅದಕ್ಕೆಲ್ಲಾ ಕಾರಣ ಮುಂಗಾರು ಮಳೆ’ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.