ತನುಶ್ರೀ ದತ್ತಾ ವಿರುದ್ಧ ಎಂಎನ್‌ಎಸ್‌ ಮಾನನಷ್ಟ ಕೇಸ್‌

By Web DeskFirst Published Oct 5, 2018, 11:05 AM IST
Highlights

ನಾನಾ ಪಾಟೇಕರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ಬಾಲಿವುಡ್ ನಟಿ ತನುಶ್ರೀ ದತ್ತಾ ವಿರುದ್ದ ಎಂಎನ್‌ಎಸ್ ಮಾನ ನಷ್ಟ ಮೊಕದ್ದಮೆ ದಾಖಲಿಸಿದೆ.

ಮುಂಬೈ: ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ನಟಿ ದತ್ತಾ ವಿರುದ್ಧ ಎಂಎನ್‌ಎಸ್‌ನ ಬೀಡ್‌ ಜಿಲ್ಲಾ ಘಟಕದ ಅಧ್ಯಕ್ಷ ಸುಮಂತ್‌ ಧಾಸ್‌ ಎಂಬುವರು ಮಾನನಷ್ಟಕೇಸ್‌ ದಾಖಲಿಸಿದ್ದಾರೆ.

ಲೈಂಗಿಕ ಕಿರುಕುಳ: ನಟಗೆ ನಟಿಯ ಸಡ್ಡು

ಬಾಳಾ ಠಾಕ್ರೆ ಅವರ ನಂತರ ರಾಜ್‌ ಠಾಕ್ರೆ ಅವರಿಗೆ ಶಿವಸೇನೆ ಮುಖ್ಯಸ್ಥರಾಗಬೇಕೆಂಬ ಆಕಾಂಕ್ಷೆಯಿತ್ತು. ಆದರೆ, ಅದಾಗಲಿಲ್ಲ ಎಂದು ದತ್ತಾ ಹೇಳಿದ್ದರು. ಅಲ್ಲದೆ, 2008ರ ಹಾರ್ನ್‌ ಓಕೆ ಪ್ಲೀಸ್‌ ಚಿತ್ರೀಕರಣದಿಂದ ಹೊರ ಬಂದಾಗ, ಎಂಎನ್‌ಎಸ್‌ ತಮ್ಮ ಕಾರನ್ನು ಧ್ವಂಸ ಮಾಡಿತ್ತು.

ತನುಶ್ರೀ ದತ್ತಾ ಮನೆಗೆ ನುಗ್ಗಲೆತ್ನಿಸಿದ ಇಬ್ಬರು ಯಾರು?

ಇದರ ಜೊತೆಗೆ ಎಂಎನ್‌ಎಸ್‌ನಿಂದ ತಮಗೆ ಬೆದರಿಕೆಗಳು ಬರುತ್ತಿದ್ದು, ಇತ್ತೀಚೆಗಷ್ಟೇ ಇಬ್ಬರು ತಮ್ಮ ಮನೆ ಬಾಗಿಲನ್ನೂ ಸಹ ಹೊಡೆದು ಹಾಕಿದ್ದರು ಎಂದು ದತ್ತಾ ದೂರಿದ್ದರು.

2008ರಲ್ಲಿ 'ಹಾರ್ನ್ ಒಕೆ ಪ್ಲೀಸ್' ಎಂಬ ಹಾಡಿನ ಚಿತ್ರೀಕಕರಣ ನಡೆಯುತ್ತಿತ್ತು. ಈ ವೇಳೆ ನಟನೊಬ್ಬ ನನ್ನನ್ನು ಬಿಗಿಯಾಗಿ ತಬ್ಬಿಕೊಳ್ಳಲು ಯತ್ನ ಮಾಡಿದ. ನಿನಗೆ ನೃತ್ಯ ಮಾಡುವುದನ್ನು ಹೇಳಿಕೊಡುತ್ತೇನೆ ಎಂದು ಬೇಕಾದಲ್ಲಿ ಮೈ ಕೈ ಎಲ್ಲ ಮುಟ್ಟಿ ಹಿಂಸಿಸಿದ ಎಂದು ತನುಶ್ರೀ ದತ್ತಾ, ನಟ ನಾನಾ ಪಾಟೇಕರ್ ಸೇರಿ ಇನ್ನಿಬ್ಬರು ಅನುಚಿತಚಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರ ಬಾಲಿವುಡ್ ನಲ್ಲಿ ಗುಲ್ಲೆಬ್ಬಿಸಿದೆ. ಇದರ ಮುಂದುವರಿದ ಭಾಗವಾಗಿ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತಿದೆ.

click me!