ರೆಬೆಲ್ ಸ್ಟಾರ್ ಅಂಬರೀಶ್‌ಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಕೊಡಿ: ಸರ್ಕಾರಕ್ಕೆ ಸಚಿವ ರಾಮಲಿಂಗಾರೆಡ್ಡಿ ಪತ್ರ!

Published : Oct 06, 2026, 03:00 PM IST
rebel star ambareesh Ramalinga reddy

ಸಾರಾಂಶ

ದಿವಂಗತ ನಟ ಹಾಗೂ ರಾಜಕಾರಣಿ ಡಾ. ಎಂ.ಎಚ್. ಅಂಬರೀಶ್ ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ನೀಡುವಂತೆ ಸಚಿವ ರಾಮಲಿಂಗಾರೆಡ್ಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮುಂಬರುವ ಕನ್ನಡ ರಾಜ್ಯೋತ್ಸವದಂದು ಈ ಅತ್ಯುನ್ನತ ಗೌರವವನ್ನು ನೀಡಬೇಕೆಂದು ಅಭಿಮಾನಿಗಳು ಹಾಗೂ ಸಚಿವರು ಒತ್ತಾಯಿಸಿದ್ದಾರೆ.

ಬೆಂಗಳೂರು (ಅ.05): ಕನ್ನಡ ಚಿತ್ರರಂಗದ ದಿಗ್ಗಜ ನಟ, ಮಾಜಿ ಕೇಂದ್ರ ಮತ್ತು ರಾಜ್ಯ ಸಚಿವರಾಗಿದ್ದ ದಿವಂಗತ ಡಾ. ಎಂ.ಎಚ್. ಅಂಬರೀಶ್ ಅವರಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಗೌರವವಾದ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಬೇಕೆಂದು ಸಚಿವ ರಾಮಲಿಂಗಾರೆಡ್ಡಿ ಸರ್ಕಾರಕ್ಕೆ ಪತ್ರ ಬರೆದು ಅಧಿಕೃತ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಅಧಿಕೃತ ನಡವಳಿ ಪತ್ರ ಬರೆದಿರುವ ರಾಮಲಿಂಗಾರೆಡ್ಡಿ ಅವರು, ಮುಂಬರುವ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ 'ಮಂಡ್ಯದ ಗಂಡು' ಅಂಬರೀಶ್ ಅವರಿಗೆ ಈ ಗೌರವ ಸಮರ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

ಚಿತ್ರರಂಗ ಹಾಗೂ ನಾಡಿಗೆ ಅಂಬಿ ಕೊಡುಗೆ ಅಪಾರ:

"ಬೆಳ್ಳಿ ತೆರೆಯ ಮೇಲಿನ 'ರೆಬೆಲ್ ಸ್ಟಾರ್', ಜನರ ಕಷ್ಟಗಳಿಗೆ ಸದಾ ಮಿಡಿಯುತ್ತಿದ್ದ 'ಮಂಡ್ಯದ ಗಂಡು' ಡಾ. ಅಂಬರೀಶ್ ನಮ್ಮೆಲ್ಲರ ನೆನಪಿನಲ್ಲಿ ಸದಾ ಅಮರ. ಅವರು 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿದ್ದಾರೆ. ಚಿತ್ರರಂಗದ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಾ, ಕಲಾವಿದರ ಹಿತ ಕಾಯುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದರು. ರಾಜಕೀಯದಲ್ಲೂ ಶಾಸಕರಾಗಿ, ಸಂಸದರಾಗಿ, ರಾಜ್ಯ ಹಾಗೂ ಕೇಂದ್ರ ಸಚಿವರಾಗಿ ನಾಡಿನ ಅಭಿವೃದ್ಧಿಗೆ, ವಿಶೇಷವಾಗಿ ಮಂಡ್ಯ ಹಾಗೂ ಕಾವೇರಿ ಕೊಳ್ಳದ ರೈತರ ಹಿತರಕ್ಷಣೆಗೆ ಸದಾ ಶ್ರಮಿಸಿದ್ದಾರೆ" ಎಂದು ಸಚಿವರು ಪತ್ರದಲ್ಲಿ ಗುಣಗಾನ ಮಾಡಿದ್ದಾರೆ.

ಅಭಿಮಾನಿಗಳ ಆಶಯಕ್ಕೆ ಸ್ಪಂದನೆ:

ಅಖಿಲ ಕರ್ನಾಟಕ ನ್ಯಾಯ ನೀತಿ ಧರ್ಮ ಡಾ. ಅಂಬರೀಶ್ ಅಭಿಮಾನಿಗಳ ಸಂಘದವರು ಸಲ್ಲಿಸಿದ ಮನವಿಯನ್ನು ಪತ್ರದೊಂದಿಗೆ ಲಗತ್ತಿಸಿರುವ ಸಚಿವರು, "ಅಂಬರೀಶ್ ಅವರ ನಿಸ್ವಾರ್ಥ ಸೇವೆ, ಅಗಾಧ ಜನಪ್ರಿಯತೆ ಹಾಗೂ ನಾಡಿನ ಮೇಲಿನ ಪ್ರೀತಿಯನ್ನು ಗೌರವಿಸಿ ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ನೀಡುವುದು ನಾಡಿನ ಸಮಸ್ತ ಜನತೆಯ ತೀವ್ರ ಆಶಯವಾಗಿದೆ. ಅಂಬರೀಶ್ ಅವರಿಗೆ ಸಲ್ಲಬೇಕಾದ ಈ ಗೌರವ ನಾಡಿನ ಪ್ರತಿಯೊಬ್ಬ ಕನ್ನಡಿಗನ ಗೌರವವಾಗಿದೆ" ಎಂದು ತಮ್ಮ ಟ್ವೀಟ್ ಸಂದೇಶದಲ್ಲೂ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಂಬರುವ ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲೇ ಅಂಬರೀಶ್ ಅವರಿಗೆ ರಾಜ್ಯದ ಸರ್ವೋಚ್ಚ ಪ್ರಶಸ್ತಿಯನ್ನು ಘೋಷಿಸಬೇಕೆಂಬ ಕೂಗು ಅಭಿಮಾನಿ ವಲಯದಲ್ಲೂ ಬಲವಾಗಿ ಕೇಳಿಬರುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಾಶಿನಾಥ್ ಜೊತೆ ನಟಿಸಿ ಕನ್ನಡಿಗರನ್ನು ನಗಿಸಿದ್ದ ಖ್ಯಾತ ನಟಿ ಈಗ ಜೀ ಕನ್ನಡದ ಹೊಸ ಸೀರಿಯಲ್‌ಗೆ ಎಂಟ್ರಿ!
ನಾನಿ ಮನೆಯಲ್ಲಿ 'ದೋಸೆ' ಹಾಕಲು ಯಾರಿಗೂ ಬರಲ್ವಾ? ಮನೆಗೆ ಬಂದ ಆ ಸ್ಟಾರ್ ನಟಿಯೇ ದೋಸೆ ಹಾಕಿದ್ದು ಏಕೆ?