ಬಿಗ್ ಬಾಸ್ ನಡುವೆ ಸಲ್ಮಾನ್ ನಡೆಯಿಂದ ರಾಜಕೀಯ ಸಂಚಲನ, ಮನೆಯಲ್ಲಿ ಬಿಜೆಪಿ ನಾಯಕನ ಮೀಟ್

Published : Oct 06, 2026, 01:10 PM IST
Salman Khan Meets BJP Leader at Home

ಸಾರಾಂಶ

ಬಿಗ್ ಬಾಸ್ ನಿರೂಪಣೆಯಲ್ಲಿ ಬ್ಯೂಸಿಯಾಗಿರುವ ಸಲ್ಮಾನ್ ಖಾನ್ ನಡೆ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಸಲ್ಮಾನ್ ತಮ್ಮ ಮನೆಗೆ ಬಿಜೆಪಿ ನಾಯಕನ ಆಹ್ವಾನಿಸಿ ಆತಿಥ್ಯ ನೀಡಿದ್ದಾರೆ. ಈ ವೇಳೆ ಮಹತ್ವದ ಸಭೆಯೊಂದು ನಡೆದಿದೆ.

ಮುಂಬೈ (ಅ.06) ಬಾಲಿವುಡ್ ನಟ ಸಲ್ಮಾನ್ ಖಾನ್ ಸದ್ಯ ಬಿಗ್ ಬಾಸ್ ನಿರೂಪಣೆಯಲ್ಲಿ ಸಕ್ರಿಯವಾಗಿದ್ದಾರೆ. ಒಂದೆಡೆ ಮಾತೃಭೂಮಿ ಸಿನಿಮಾ ಬಿಡುಗಡೆ ತಯಾರಿಗಳು ನಡೆಯುತ್ತಿದೆ. ಇತ್ತ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಬ್ಯೂಸಿಯಾಗಿದ್ದಾರೆ. ಈ ಎಲ್ಲಾ ಬ್ಯೂಸಿ ಶೆಡ್ಯೂಲ್ ನಡುವೆ ಸಲ್ಮಾನ್ ಖಾನ್, ಬಿಜೆಪಿ ನಾಯಕನ ಮನೆಗೆ ಆಹ್ವಾನಿಸಿ ಆತಿಥ್ಯ ನೀಡಿದ್ದಾರೆ. ಇದೇ ವೇಳೆ ಸಲ್ಮಾನ್ ಖಾನ್ ಮನೆಯಲ್ಲಿ ಮಹತ್ವದ ಸಭೆಯೊಂದು ನಡೆದಿದೆ.

ಸಲ್ಮಾನ್ ಮನೆಗೆ ಆಗಮಿಸಿದ ಬಿಜೆಪಿ ಯುವ ಮೋರ್ಚಾ ಖಜಾಂಚಿ

ಸಲ್ಮಾನ್ ಖಾನ್ ಎಲ್ಲಾ ರಾಜಕೀಯ ನಾಯಕರ ಜೊತೆ ಉತ್ತಮವಾಗಿದ್ದಾರೆ. ರಾಜಕೀಯ ವೇದಿಕೆಗಳಲ್ಲಿ ಸಲ್ಮಾನ್ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಆದರೆ ಈ ಬಾರಿ ಸಲ್ಮಾನ್ ಖಾನ್ ನಡೆ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಖಜಾಂಚಿ ಪಿಎಂ ಸಾಯಿ ಪ್ರಸಾದ್ ಹಾಗೂ ಪತ್ನಿ ರುಕ್ಮಿಣಿ ಚೌಧರಿ ಇಬ್ಬರನ್ನು ಸಲ್ಮಾನ್ ಖಾನ್ ಮನೆಗೆ ಆಹ್ವಾನಿಸಿದ್ದರು. ಬಿಜೆಪಿ ಯುವ ಮುಖಂಡನ ಜೊತೆ ಸಲ್ಮಾನ್ ಖಾನ್ ಡಿನ್ನರ್ ಮೀಟಿಂಗ್ ಮಾಡಿದ್ದಾರೆ.

ಸಲ್ಮಾನ್ ಮನೆಯಲ್ಲಿ ಸಾಯಿ ಪ್ರಸಾದ್ ಹಾಗೂ ರುಕ್ಮಿಣಿ ಚೌಧರಿ ಇಬ್ಬರಿಗೂ ವಿಶೇಷ ಔತಣಕೂಟ ಆಯೋಜಿಸಲಾಗಿತ್ತು. ಮುಂಬೈನಲ್ಲಿರುವ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಮನೆಯಲ್ಲಿ ವಿಶೇಷ ಭೂಜನ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಭೂಜನದ ವೇಳೆ ವಿಶೇಷ ಮಾತುಕತೆಗಳು ನಡೆದಿದೆ ಎನ್ನಲಾಗುತ್ತಿದೆ.

ವಿಡಿಯೋ ಹಂಚಿಕೊಂಡ ಪ್ರಸಾದ್, ಬಿಜೆಪಿ ಸೇರಿಕೊಳ್ತಾರಾ ಸಲ್ಮಾನ್?

ಬಿಜೆಪಿ ಮುಖಂಜ ಸಾಯಿ ಪ್ರಸಾದ್, ಸಲ್ಮಾನ್ ಮನೆಗೆ ಭೇಟಿ, ಔತಣಕೂಟದ ಕುರಿತು ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ಮನೆಯಲ್ಲಿನ ವಿಶೇಷ ಔತಣಕೂಡ, ಸಲ್ಮಾನ್ ಜೊತೆಗೆ ಭೋಜನ ಸವಿಯುವ ಅವಕಾಶ, ಸಲ್ಮಾನ್ ಖಾನ್ ಸರಳತೆಯನ್ನು ಬಿಜೆಪಿ ಯುವ ಮೋರ್ಜಾ ಮುಖಂಡ ಕೊಂಡಾಡಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲೇ ಸಲ್ಮಾನ್ ಖಾನ್ ಬಿಜೆಪಿ ನಾಯಕರ ಜೊತೆ ಹತ್ತಿರವಾಗುತ್ತಿದ್ದಾರೆ. ಸಲ್ಮಾನ್ ಬಿಜೆಪಿ ಸೇರಿಕೊಳ್ಳುತ್ತಾರಾ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಸಲ್ಮಾನ್ ಖಾನ್ ಹಲವು ರಾಜಕೀಯ ಮುಖಂಡರ ಜೊತೆ ಉತ್ತಮ ಬಾಂದವ್ಯ ಹೊಂದಿದ್ದಾರೆ. ಆದರೆ ಹಲವು ಬಾರಿ ಈ ಸಂಬಂಧ ರಾಜಕೀಯ ನಾಯಕರಿಗೆ ಮುಳುವಾಗಿದೆ. ಇತ್ತೀಚೆಗೆ ಮುಂಬೈನ ಪ್ರಮುಖ ರಾಜಕೀಯ ಮುಖಂಡ ಬಾಬಾ ಸಿದ್ದಿಕಿ ಸಲ್ಮಾನ್ ಖಾನ್ ಜೊತೆ ಆತ್ಮೀಯರಾಗಿದ್ದಾರೆ, ಸಲ್ಮಾನ್ ಖಾನ್‌ಗೆ ಹಲವು ಕಾರ್ಯಕ್ರಮಗಳಲ್ಲಿ ಹಣ ನೀಡುತ್ತಿದ್ದಾರೆ ಎಂಬ ಆರೋಪಡದಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಗುಂಡಿನ ದಾಳಿ ನಡೆಸಿತ್ತು. ಕೃಷ್ಣಮೃಗ ಪ್ರಕರಣ ಸಂಬಂಧ ಲಾರೆನ್ಸ್ ಬಿಷ್ಣೋಯ್ ಹಾಗೂ ಸಲ್ಮಾನ್ ಖಾನ್ ನಡುವಿನ ವೈರತ್ವ ಹೆಚ್ಚಾಗಿದೆ. ಹಲವು ಬಾರಿ ಸಲ್ಮಾನ್ ಖಾನ್ ದಾಳಿಗೂ ಪ್ರಯತ್ನಿಸಲಾಗಿದೆ.

ಸದ್ಯ ಬಿಗ್ ಬಾಸ್ ಶೋನಲ್ಲಿ ತೊಡಗಿಸಿಕೊಂಡಿರುವ ಸಲ್ಮಾನ್ ಖಾನ್, ಒಂದಷ್ಟು ಸಮಯವನ್ನು ಮಾತೃಭೂಮಿ ಸಿನಿಮಾಗಾಗಿ ಮೀಸಲಿಟ್ಟಿದ್ದಾರೆ. ಭಾರತ ಚೀನಾ ಗಡಿ ಭಾಗ ಗಲ್ವಾನ್‌ನಲ್ಲಿ ನಡೆದ ಘರ್ಷಣೆ ಕುರಿತು ಸಿನಿಮಾ ಮಾತೃಭೂಮಿ. ಮಾತೃಭೂಮಿ ಸಿನಿಮಾ CBFC ಸರ್ಟಿಫಿಕೇಟ್‌ಗಾಗಿ ಕಾಯುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಾಕ್ಸ್ ಆಫೀಸ್‌ನಲ್ಲಿ ಭಾರೀ ಧಮಾಕಾ! 4 ದಿನದಲ್ಲಿ ಅಜಯ್ ದೇವಗನ್ 'ದೃಶ್ಯಂ 3' ಗಳಿಸಿದ್ದೆಷ್ಟು?
ಫ್ಯಾನ್ಸ್​ ಆಸೆ ಕೊನೆಗೂ ಈಡೇರಿಸಿದ Bigg Boss ಕಾವ್ಯಾ ಶೈವ ಕೊಟ್ರು ಗುಡ್​​ನ್ಯೂಸ್​: ಅಭಿನಂದನೆಗಳ ಮಹಾಪೂರ