
ಬೆಂಗಳೂರು(ಜೂ.09): ಬಹುಪರಾಕ್ ಸುಂದರಿ ಮೇಘನಾ ರಾಜ್'ಗೆ ಇಂದು ಡಬಲ್ ಧಮಾಕ. ಒಂದೆಡೆ ನೈಜ ಕಥಾಹಂದರವುಳ್ಳ ಖಡಕ್ ಡೈಲಾಗ್ ಒಳಗೊಂಡ ಜಿಂದಾ ರಿಲೀಸ್ ಆಗುತ್ತಿದೆ. ಇನ್ನೊಂದೆಡೆ ನೂರೊಂದು ನೆನಪು ಕೂಡ ಇಂದೇ ತೆರೆ ಮೇಲೆ ಬರುತ್ತಿದೆ.
ಎರಡೂ ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಮೇಘನಾ ನನಗೇ ನಾನೇ ಸ್ಪರ್ಧಿ ಅಂತಿದ್ದಾರೆ. ಖಡಕ್ ಡೈಲಾಗ್'ನಿಂದ ಫೇಮಸ್ ಆಗಿರುವ ಜಿಂದಾ ಚಿತ್ರಕ್ಕೆ ಮುಸ್ಸಂಜೆ ಮಹೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಈ ಚಿತ್ರದಲ್ಲಿ ದೇವರಾಜ್, ಶ್ರೀನಿವಾಸ್ ಮೂರ್ತಿ ಯವ್ರಂತ ಹಿರಿಯ ನಟರ ಜೊತೆ, ಹೊಸಬರ ದಂಡೇ ಇದೆ.
‘ಆ ದಿನಗಳ’ ಮೂಲಕ ಫೇಮಸ್ ಆದ ಚೇತನ್, ಇಂದು ನೂರೊಂದು ನೆನಪುಗಳ ಜೊತೆ ತೆರೆ ಮೇಲೆ ಬರ್ತಿದ್ದಾರೆ. ಇನ್ನೂ ನೂರೊಂದು ನೆನಪು ಮರಾಠಿಯ ದುನಿಯಾದಾರಿ ಚಿತ್ರದ ರಿಮೇಕ್. ಇತ್ತ ಯುಗಪುರುಷ ಕೂಡ ಎಂಟ್ರಿ ಕೊಡೋಕೆ ಸಿದ್ಧವಾಗಿದ್ದಾನೆ. ಕ್ರೇಜಿ ಸ್ಟಾರ್ ಅಭಿಮಾನಿ ಮಸ್ಕಲ್ ಮಟ್ಟಿ ನಿದೇರ್ಶನದ ಚಿತ್ರ. ರವಿಮಾಮನ ಮೇಲಿನ ಅಭಿಮಾನದಿಂದ ಮಸ್ಕಲ್ಮಟ್ಟಿ ತಮ್ಮ ಈ ಚಿತ್ರಕ್ಕೆ ಯುಗಪುರುಷ ಅಂತ ಶೀರ್ಷಿಕೆ ಇಟ್ಟಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ದೇವ್ ನಾಯಕನಾಗಿದ್ದು, ರವಿಚಂದ್ರನ್ ಚಿತ್ರಗಳಲ್ಲಿ ಬರೋ ಹಾಟ್ ಅಂಡ್ ಗ್ಲಾಮರ್ ಈ ಚಿತ್ರದಲ್ಲೂ ಇದೆಯಂತೆ.
ಒಟ್ಟಿನಲ್ಲಿ ಗಾಂಧಿನಗರದ ಥಿಯೇಟರ್'ಗಳಲ್ಲಿ ಕನ್ನಡದ ಮೂರು ಚಿತ್ರಗಳು ತೆರೆಗೆ ಬರುತ್ತಿವೆವೆ. ಸಿನಿರಸಿಕರು ಈ ಮೂರು ಚಿತ್ರಗಳನ್ನು ಹೇಗೆ ಸ್ವಾಗತಿಸುತ್ತಾನೆ ಕಾದು ನೋಡೋಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.