
ಮೇಘನಾ ಗಾಂವ್ಕರ್ ಈಗ ‘ಡಾಕ್ಟರ್ ಮೇಘನಾ ಗಾಂವ್ಕರ್’. ಚಿತ್ರರಂಗಕ್ಕೆ ಸಂಬಂಧಿಸಿದ ವಿಷಯದ ಮೇಲೆ ಪಿಎಚ್‌ಡಿ ಪ್ರಬಂಧ ಮಂಡಿಸಿ, ಮುಂಬೈ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪಡೆದುಕೊಂಡಿರುವ ಮೇಘನಾ ಮಾತುಗಳು ಇಲ್ಲಿವೆ.
ಆರ್. ಕೇಶವಮೂರ್ತಿ
ಹತ್ತು ವರ್ಷಗಳ ಹಿಂದೆಯೇ ಹೀಗೊಂದು ಕನಸು ಇತ್ತು. ಆ ಕನಸಿನ ಬೆನ್ನು ಹತ್ತಿದೆ. 2019ರಲ್ಲಿ ಪಿಎಚ್‌ಡಿಗೆ ಅಡ್ಮಿಷನ್ ಮಾಡಿಸಿಕೊಂಡೆ. ಪ್ರೀ ಪಿಎಚ್‌ಡಿಗಾಗಿಯೇ 2 ವರ್ಷ ಟೈಮ್ ಕೊಟ್ಟೆ. ಕೋವಿಡ್ ಬಂತು. 2025ರಲ್ಲಿ ಪದವಿ ಅನೌನ್ಸ್ ಆಯಿತು. ಮೊನ್ನೆ ನಡೆದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರಮಾಣ ಮಾಡಿದರು.
ನಾನು ಇಂಗ್ಲಿಷ್‌ನಲ್ಲಿ ಥೀಸಿಸ್ ಮಂಡಿಸಿರುವುದು. ಆಯ್ಕೆ ಮಾಡಿಕೊಂಡಿದ್ದ ವಿಷಯ ‘The Metamorphosis of Literature into Cinema: A Study in Adaptation’ ಎಂಬುದು. ನಾನು ಆಯ್ಕೆ ಮಾಡಿಕೊಳ್ಳುವ ವಿಷಯ ನನಗೆ ಓದುವ, ಬರೆಯುವ ಮತ್ತು ಅಧ್ಯಯನ ಮಾಡುವ ಆಸಕ್ತಿ ಇರುವ ಕ್ಷೇತ್ರವೇ ಆಗಬೇಕಿತ್ತು. ಹೀಗಾಗಿ ಸಿನಿಮಾ ವಿಷಯದಲ್ಲಿ ಪಿಎಚ್‌ಡಿ ಮಾಡಿದ್ದೇನೆ.
ಕಾದಂಬರಿ ಆಧಾರಿತವಾಗಿ ನಿರ್ಮಾಣವಾಗಿರುವ, ಆಸ್ಕರ್ ನಾಮನಿರ್ದೇಶನದ 6 ಇಂಗ್ಲಿಷ್ ಸಿನಿಮಾಗಳ ಅಧ್ಯಯನ- ವಿಶ್ಲೇಷಣೆ, ಸಿನಿಮಾ ಬಿಸಿನೆಸ್, ಕಾದಂಬರಿಗಳು ಸಿನಿಮಾಗಳಾಗಿ ರೂಪಾಂತರ ಆಗುವ ಹಿಂದಿನ ವಿಜ್ಞಾನ, ಸೌತ್ ಇಂಡಿಯನ್ ಸಿನಿಮಾ ಬೆಳವಣಿಗೆ, ಸರ್ಕಾರದ ಪ್ರೋತ್ಸಾಹ, ಸಂಭಾವನೆ ತಾರತಮ್ಯ ಹೀಗೆ ಸಾಕಷ್ಟು ವಿಷಯಗಳು ಒಳಗೊಂಡಿದೆ.
ನಿಮ್ಮ ಈ ಥೀಸಿಸ್ ಚಿತ್ರರಂಗಕ್ಕೆ ಯಾವ ರೀತಿ ಪ್ರಾಕ್ಟಿಕಲ್ಲಾಗಿ ಉಪಯೋಗ ಆಗಹುದು?
‘ಇದೊಂದು ಅತ್ಯುತ್ತಮ ಪಿಎಚ್‌ಡಿ ಥೀಸಿಸ್ ಆಗಿದೆ. ಪುಸ್ತಕ ಮಾಡಿ ಫಿಲಮ್ ಸ್ಕೂಲ್ಸ್‌ಗೆ ಕಳುಹಿಸಿ’ ಅಂತ ನನ್ನ ಮಾರ್ಗದರ್ಶಕರು ಹೇಳಿದ್ದಾರೆ. ಸಿನಿಮಾ ಬಿಸಿನೆಸ್ ಪಾರ್ಟ್ ಇದೆ. ಅದು ತುಂಬಾ ಮಹತ್ವ ಅನಿಸಿದೆ. ಯಾರಾದರೂ ಸಹಾಯ ಮಾಡಿದರೆ ಕನ್ನಡಕ್ಕೂ ಅನುವಾದ ಮಾಡುವ ಯೋಚನೆ ಇದೆ.
ಡಾಕ್ಟರೇಟ್ ಪದವಿ ಸ್ವೀಕರಿಸಿದಾಗ ಏನನಿಸಿತು?
ಡಾಕ್ಟರೇಟ್ ಪ್ರದಾನ ಕಾರ್ಯಕ್ರಮಕ್ಕೆ ನನ್ನ ತಂದೆ, ತಾಯಿ ಕೂಡ ಬಂದಿದ್ದರು. ಅವರ ಮುಖದಲ್ಲಿ ಸಂತೋಷ ನೋಡಿ ನನಗೂ ಖುಷಿ ಆಯಿತು. ಡಾಕ್ಟರೇಟ್ ಮಾಡಬೇಕು ಎಂಬುದು ನನ್ನ ತಂದೆಯ ಕನಸು. ಅವರ ಕನಸು ಈಡೇರಿಸಿದ್ದೇನೆಂಬ ಹೆಮ್ಮೆ ಮೂಡಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.