
ಖ್ಯಾತ ಗಣಿತಶಾಸ್ತ್ರಜ್ಞ ಆನಂದ್ ಕುಮಾರ್ ಜೀವನಾಧಾರಿತ, ಹೃತಿಕ್ ರೋಷನ್ ಅಭಿನಯದ ಸಿನಿಮಾ ಸೂಪರ್ 30 ತೆರೆಗೆ ಬರಲು ಸಿದ್ಧವಾಗಿದೆ.
ಗಣಿತಶಾಸ್ತ್ರಜ್ಞ ಆನಂದ್ ಕುಮಾರ್ ಆಘಾತಕಾರಿ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ. ಆನಂದ್ ಕುಮಾರ್ ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿದ್ದು ಆದಷ್ಟು ಬೇಗ ತಮ್ಮ ಬಯೋಪಿಕ್ ನ್ನು ತೆರೆ ಮೇಲೆ ನೋಡಲು ಬಯಸುವುದಾಗಿ ಹೇಳಿದ್ದಾರೆ.
ರಾಮಾಯಣ ಖ್ಯಾತಿ ರಮಾನಂದ ಸಾಗರ್ ಮೊಮ್ಮಗಳೀಕೆ!
ಆನಂದ್ ತಮ್ಮ ಆರೋಗ್ಯದ ಬಗ್ಗೆ ಮಾತನಾಡುತ್ತಾ, 2014 ರಲ್ಲಿ ನನ್ನ ಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ನನ್ನ ಬಲ ಕಿವಿ ಕೇಳಿಸುತ್ತಿರಲಿಲ್ಲ. ಸಾಕಷ್ಟು ಚಿಕಿತ್ಸೆಗೆ ಒಳಗಾದೆ. ಕೊನೆಗೆ ನನ್ನ ಬಲ ಕಿವಿ 80 ರಷ್ಟು ಕೇಳಿಸಿಕೊಳ್ಳುವ ಶಕ್ತಿಯನ್ನೇ ಕಳೆದುಕೊಂಡಿದೆ ಎಂದು ಹೇಳಿದರು. ನಂತರ ಟ್ಯೂಮರ್ ಇರುವುದು ಗೊತ್ತಾಯಿತು ಎಂದಿದ್ದಾರೆ.
ನನ್ನ ಬಯೋಪಿಕ್ ಗೆ ಹೃತಿಕ್ ರೋಷನ್ ಗೆ ಮಾತ್ರ ನ್ಯಾಯ ಒದಗಿಸಲು ಸಾಧ್ಯ. ನಾನು ಬದುಕಿರುವವರೆಗೆ ನನ್ನ ಜರ್ನಿ ಸರಿಯಾದ ರೀತಿಯಲ್ಲಿ ತೆರೆ ಮೇಲೆ ಮೂಡಿಬರಬೇಕು. ಹಾಗಾಗಿ 13 ಬಾರಿ ಸ್ಕ್ರಿಪ್ಟ್ ಓದಿದ್ದೇನೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.