ಆದಿತ್ಯ, ರಾಗಿಣಿ ಮದುವೆ ಮುರಿದು ಬಿತ್ತಾ?

Published : Oct 02, 2017, 01:41 PM ISTUpdated : Apr 11, 2018, 12:54 PM IST
ಆದಿತ್ಯ, ರಾಗಿಣಿ ಮದುವೆ ಮುರಿದು ಬಿತ್ತಾ?

ಸಾರಾಂಶ

ಅದ್ಯಾಕೋ ಬಣ್ಣದ ಲೋಕದಲ್ಲಿ ಡೆಡ್ಲಿ ಆದಿತ್ಯ ಹಾಗೂ ತುಪ್ಪದ ಬೆಡಗಿ ರಾಗಿಣಿಗೆ ಅದೃಷ್ಟ ಕೈ ಕೊಟ್ಟಂತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆದಿದ್ದ ಇವರಿಬ್ಬರ ಮದುವೆ ಅರ್ಧದಲ್ಲೇ ಮುರಿದು ಬೀಳುವ ಕುರಿತು ಗುಸುಗುಸು ಶುರುವಾಗಿದೆ.

ಇಷ್ಟಕ್ಕೂ ನಾವಿಲ್ಲಿ ಹೇಳಹೊರಟಿದ್ದು ಆದಿತ್ಯ ಹಾಗೂ ರಾಗಿಣಿ ಅವರ ನಡುವಿನ ರಿಯಲ್ ಮದುವೆ ಕತೆಯಲ್ಲ. ರೀಲ್ ಮೇಲೆ ಅವರಿಬ್ಬರು ಮದುವೆ ಸನ್ನಿವೇಶದಲ್ಲಿ ಕಾಣಿಸಿಕೊಳ್ಳಲಿದ್ದ ‘ಪ್ರೊಡಕ್ಷನ್ ನಂಬರ್ 7’ ಸಿನಿಮಾದ ಕತೆ. ಇದರ ಸೂತ್ರಧಾರಿಗಳು ನಿರ್ದೇಶಕ ಮುಸ್ಸಂಜೆ ಮಹೇಶ್ ಹಾಗೂ ನಿರ್ಮಾಪಕ ದತ್ತ ಅಲಿಯಾಸ್ ದತ್ತಾತ್ರೇಯ. ಈಗ ನಿರ್ದೇಶಕ ಮುಸ್ಸಂಜೆ ಮಹೇಶ್ ಹಾಗೂ ನಿರ್ಮಾಪಕ ದತ್ತಾತ್ರೇಯ ನಡುವೆ ಸಂಬಂಧ ಹಳಸಿದೆ. ಮಹೇಶ್ ಹೊಸದೊಂದು ಪ್ರಾಜೆಕ್ಟ್‌ನಲ್ಲಿ ಬ್ಯುಸಿ ಆಗಿದ್ದಾರೆ. ಅತ್ತ ನಿರ್ಮಾಪಕ ದತ್ತಾತ್ರೇಯ, ನಿರ್ದೇಶಕ ಒಂ ಪ್ರಕಾಶ್ ಜತೆಗೆ ಸಿನಿಮಾ ಮಾಡುವ ಸುದ್ದಿಯಿದೆ. ಅಲ್ಲಿಗೆ ನಟ ಆದಿತ್ಯ ಹಾಗೂ ರಾಗಿಣಿ ಮದುವೆ ಕತೆಗೆ ಬ್ರೇಕ್ ಬೀಳುವುದು ಗ್ಯಾರಂಟಿ ಅನ್ನುತ್ತಿದೆ ಗಾಂಧಿನಗರ.

ಈ ಮದುವೆ ಕತೆ ಹೇಳುವುದಕ್ಕೂ ಮುನ್ನ ನಿಮಗೆ ಮುಸ್ಸಂಜೆ ಮಹೇಶ್ ಹಾಗೂ ನಿರ್ಮಾಪಕ ದತ್ತ ಜೋಡಿಯ ‘ಜಿಂದಾ ’ಚಿತ್ರದ ಮುಂಚಿನ ಸ್ಟೋರಿ ಹೇಳಲೇಬೇಕು. ಯಾಕಂದ್ರೆ ಆದಿತ್ಯ ಹಾಗೂ ರಾಗಿಣಿ ಮದುವೆಗೆ ಕಾರಣವಾಗಿದ್ದೇ ಆ ಹಿಂದಿನ ಕತೆ. ಗಾಂಧಿನಗರದಲ್ಲಿ ಮುಸ್ಸಂಜೆ ಮಹೇಶ್ ನಿರ್ದೇಶನದ ಜಿಂದಾ ಚಿತ್ರವಿನ್ನು ತೆರೆ ಕಂಡಿರಲಿಲ್ಲ. ಮಹೇಶ್ ಈ ಚಿತ್ರದೊಂದಿಗೆ ಹೊಸ ಬಗೆಯ ಕುತೂಹಲಕಾರಿ ಕತೆ ಹೇಳಹೊರಟಿದ್ದಾರಂತೆ ಎನ್ನುವ ಕಾರಣಕ್ಕೆ ಜಿಂದಾ ಚಿತ್ರ ಸ್ಯಾಂಡಲ್‌ವುಡ್‌ನಲ್ಲಿ ಒಂದಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಹೀಗಾಗಿ ಈ ಚಿತ್ರ ಗೆದ್ದೇ ಗೆಲ್ಲುತ್ತೆ ಎನ್ನುವ ಜೋಶ್‌ನಲ್ಲಿದ್ದರು ನಿರ್ಮಾಪಕ ದತ್ತ.

ಅದೇ ಜೋಶ್‌ನಲ್ಲಿ ಮತ್ತೆರಡು ಚಿತ್ರ ಅನೌನ್ಸ್ ಮಾಡಿದರು. ಅವೆರಡು ಚಿತ್ರಕ್ಕೂ ಮುಂಸ್ಸಂಜೆ ಮಹೇಶ್ ಅವರೇ ನಿರ್ದೇಶಕ. ನಟ ಡೆಡ್ಲಿ ಆದಿತ್ಯ ನಾಯಕ ನಟ. ಒಂದು ಚಿತ್ರಕ್ಕೆ ರಾಗಿಣಿ ನಾಯಕಿ. ಉಳಿದಂತೆ ಇನ್ನೊಂದು ಚಿತ್ರಕ್ಕೆ ನಾಯಕಿ ಆಯ್ಕೆ ಬಾಕಿ ಉಳಿದಿತ್ತು. ವಿಶೇಷ ಅಂದ್ರೆ ಅವೆರಡು ಚಿತ್ರಕ್ಕೂ ಟೈಟಲ್ ಕೂಡ ಫೈನಲ್ ಆಗಿರಲಿಲ್ಲ. ಪ್ರೊಡಕ್ಷನ್ ನಂಬರ್ 6 ಮತ್ತು 7 ಹೆಸರಲ್ಲಿ ಅದ್ಧೂರಿ ಮುಹೂರ್ತ ಫಿಕ್ಸ್ ಆಗಿತ್ತು. ಆ ದಿನ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ಈ ಚಿತ್ರಗಳ ಮುಹೂರ್ತ ಅದ್ಧೂರಿಯಾಗಿಯೇ ನಡೆದಿತ್ತು. ಅಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ಆದಿತ್ಯ-ರಾಗಿಣಿ ಮದುವೆ ಸಂಭ್ರಮ.

ತಳೀರು, ತೋರಣ, ಮಂಟಪ, ಪುರೋಹಿತರು, ಬಂಧು-ಬಳಗದವರು, ಓಲಗದವರು...ಹೀಗೆ ಎಲ್ಲರೂ ಅಲ್ಲಿ ಜಮಾಯಿಸಿದ್ದರು. ವ‘ು-ವರರಿಬ್ಬರು ಶ್ವೇತಾ ವಸ್ತ್ರಧಾರಿಗಳಾಗಿದ್ದರು. ಯಾವುದೇ ರೀತಿಯಲ್ಲೂ ಅದು ನಿಜವಾದ ಮದುವೆಗೆ ಕಮ್ಮಿ ಇರಲಿಲ್ಲ. ಇದಾಗಿ ಇಲ್ಲಿಗೆ ಎರಡು ತಿಂಗಳು ಕಳೆದು ಹೋಗಿದೆ. ನಿರ್ಮಾಪಕ ದತ್ತ ಅವರೀಗ ಓಂ ಪ್ರಕಾಶ್ ಜತೆಗೆ ಹೊಸ ಸಿನಿಮಾ ಮಾಡಲು ರೆಡಿ ಆಗಿದ್ದಾರೆನ್ನುವ ಸುದ್ದಿ. ಅತ್ತ ನಿರ್ದೇಶಕ ಮುಸ್ಸಂಜೆ ಮಹೇಶ್ ಕೂಡ ಹೊಸ ಪ್ರಾಜೆಕ್ಟ್‌ನಲ್ಲಿ ಬ್ಯುಸಿ ಆಗಿದ್ದಾರಂತೆ. ಸದ್ಯಕ್ಕೆ ಕತೆ ಹಾಗೂ ಚಿತ್ರಕತೆ ಸಿದ್ಧ ಪಡಿಸುತ್ತಿದ್ದಾರಂತೆ. ಅಲ್ಲಿಗೆ ಪ್ರೊಡಕ್ಷನ್ ನಂಬರ್ 6 ಮತ್ತು 7 ಕತೆ ಅರ್ಧಕ್ಕೇ ನಿಂತವೇ ಎನ್ನುವುದೇ ಪ್ರಶ್ನೆ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

15 ವರ್ಷಗಳಿಂದ ನಾಗಾರ್ಜುನರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆ ಯಾವುದು? ಯಾಕೆ ಕಡಿಮೆಯಾಗಿಲ್ಲ?
ಆತ ನನ್ನ ಕ್ಲಾಸ್‌ಮೇಟ್.. ಗೆಳೆಯ ಶ್ರೀನಿವಾಸನ್ ನಿಧನ ಆಘಾತ ತಂದಿದೆ: ಭಾವುಕರಾದ ರಜನಿಕಾಂತ್