ಬಿಗ್‌ ಫ್ರಾಡ್‌ನಲ್ಲಿ 'ಮಾಂಗಲ್ಯಂ ತಂತುನಾನೇನ' ನಟನ ಹೆಸರು?

Published : Jul 20, 2019, 02:22 PM ISTUpdated : Jul 20, 2019, 03:36 PM IST
ಬಿಗ್‌ ಫ್ರಾಡ್‌ನಲ್ಲಿ  'ಮಾಂಗಲ್ಯಂ ತಂತುನಾನೇನ' ನಟನ ಹೆಸರು?

ಸಾರಾಂಶ

ಸಿನಿಮಾ, ಧಾರಾವಾಹಿ ಅಂದ್ಮೇಲೆ ಸಾಮಾಜಿಕ ಜಾಲತಾಣದಲ್ಲಿ ನಟ-ನಟಿಯರ ಹೆಸರಲ್ಲಿ ಸಾಕಷ್ಟು ಫೇಕ್ ಖಾತೆಗಳು ತೆರೆದುಕೊಳ್ಳುತ್ತದೆ. ಅಂತಹ ಖಾತೆ ತೆರೆದ ಫ್ಯಾನ್ ಒಬ್ಬ ಖ್ಯಾತ ನಟನ ಹೆಸರು ಹೇಳಿ ಜನರಿಗೆ ದೊಡ್ಡ ಮೋಸ ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುವ 'ಮಾಂಗಲ್ಯಂ ತಂತುನಾನೇನ' ಧಾರಾವಾಹಿಯ ಮುದ್ದು ಮುಖದ ನಟ ತೇಜು ಅಲಿಯಾಸ್ ಚಂದನ್. ಹೌದು! ಸಂಜೆ ಆದ್ರೆ ಸಾಕು ಟಿವಿ ಮುಂದೆ ಕೂತು ಮಿಸ್ ಮಾಡದೇ ಧಾರಾವಾಹಿ ನೋಡುತ್ತಾರೆ ಅಂದ್ಮೇಲೆ ಈ ಲವರ್ ಬಾಯ್‌ಗೆ ಸಿಕ್ಕಾಪಟ್ಟೆ ಹುಡುಗಿಯರು ಫ್ಯಾನ್ಸ್‌ ಇದ್ದಾರೆ ಅಂತಾನೇ ಅರ್ಥ ಅಲ್ವೇ?

ಇನೋಸೆಂಟ್ ಚಂದನ್‌ ಬಗ್ಗೆ ಫೇಸ್ ಬುಕ್‌ ಖಾತೆಯ ಮೂಲಕ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದೆ. ಚಂದನ್ ಹೆಸರಿನಲ್ಲಿ ಫ್ಯಾನ್ ಒಬ್ಬ ನಕಲಿ ಖಾತೆ ತೆಗೆದು ಜನರಿಗೆ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಿ ಆನಂತರ ಭೇಟಿ ಮಾಡುವುದಾಗಿ, ಹಣ ಕೊಡುವುದಾಗಿ ಹೇಳಿ ಮೋಸ ಮಾಡಿರುವ ಆರೋಪಗಳು ಕೇಳಿ ಬರುತ್ತಿದೆ. ಈ ಬಗ್ಗೆ ಸ್ವತಃ ಚಂದನ್‌ ತನ್ನ ಅಫಿಶಿಯಲ್ ಖಾತೆಯಿಂದ ಸ್ಪಷ್ಟನೆ ನೀಡಿದ್ದಾರೆ.

'ನನ್ನ ಹೆಸರಿನಲ್ಲಿ ಹಲವಾರು ನಕಲಿ ಖಾತೆಗಳಿವೆ. ಅವುಗಳಿಂದ ಜನರ ಒಳಿತಿಗೆ, ಸಹಾಯಕ್ಕಾಗಿ ಹಣ ಕಳಿಸಿಕೊಡಿ ಎಂದು personal message ಬಂದರೆ, ನಿಮ್ಮನ್ನು ಭೇಟಿಯಾಗುತ್ತೇನೆ ನಂಬರ್ ಕೊಡಿ ಎಂದು ಕೇಳಿದರೆ ಅದನ್ನು ನಂಬದಿರಿ. ಸಾಕಷ್ಟು ಜನ ಹಣ ಕಳೆದುಕೊಂಡಿರುವುದು, ಮೋಸ ಹೋಗಿರುವುದು ನನ್ನ ಗಮನಕ್ಕೆ ಬಂದಿದೆ. Facebook ನಲ್ಲಿ ಕೇವಲ official page ಮಾತ್ರ ಇದ್ದು ಇನ್ಯಾವುದೇ ಖಾತೆಗಳಿಲ್ಲ. Instagramನಲ್ಲಿ @iam___rk ಮಾತ್ರ ಖಾಸಗಿ ಖಾತೆ.' ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆ್ಯಂಕರ್ ಸುಮಾ-ರಾಜೀವ್ ವಿಚ್ಛೇದನ: ತಂದೆ-ತಾಯಿ ಡಿವೋರ್ಸ್ ಬಗ್ಗೆ ಅಸಲಿ ಸತ್ಯ ಬಿಚ್ಚಿಟ್ಟ ಮಗ ರೋಶನ್
Record Breaking Collection.. ಬಾಲಯ್ಯರ 'ಅಖಂಡ 2' ಚಿತ್ರದ ಮೊದಲ ದಿನದ ಗಳಿಕೆ ಇಷ್ಟೊಂದು ಕೋಟಿನಾ?