ಮಂಡ್ಯ ಚುನಾವಣೆ ನಂತರ ನಿಖಿಲ್ ಬೆನ್ನುತಟ್ಟಿದ ಸುಮಲತಾ!

Published : Aug 10, 2019, 12:46 PM IST
ಮಂಡ್ಯ ಚುನಾವಣೆ ನಂತರ ನಿಖಿಲ್ ಬೆನ್ನುತಟ್ಟಿದ  ಸುಮಲತಾ!

ಸಾರಾಂಶ

  ರಾಜ್ಯಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿರುವ 'ಮುನಿರತ್ನ ಕುರುಕ್ಷೇತ್ರ' ಚಿತ್ರ ನೋಡಿದ ಮಂಡ್ಯ ಸಂಸದೆ ಸುಮಲತಾ ಪ್ರತಿ ಸ್ಪರ್ಧಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಅಭಿನಯಕ್ಕೆ ಭೇಷ್ ಎಂದು ಬೆನ್ನು ತಟ್ಟಿದ್ದಾರೆ.

ಕುರುಕ್ಷೇತ್ರ ಸಿನಿಮಾವನ್ನು ಮೊದಲ ದಿನವೇ ನೋಡುವ ಕಾತುರ ಜನ ಸಾಮಾನ್ಯರಿಗೆ ಮಾತ್ರವಲ್ಲದೇ ಸಿನಿ ತಾರೆಯರಿಗೂ ಇತ್ತು. ಸಂಸದೆ ಸುಮಲತಾ ಸಿನಿಮಾ ನೋಡಿ ಪಾತ್ರಧಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಚುನಾವಣೆ ನಂತರ ನಿಖಿಲ್ ಗೌಡ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಡಬ್ಬಿಂಗ್ ನಲ್ಲಿಯೂ ಭಾಗಿಯಾಗದೇ ಅಂತರ ಕಾಯ್ದುಕೊಂಡಿದ್ದರು. ಇದು ಮಾಧ್ಯಮಗಳಲ್ಲಿ ಸುದ್ದಿಯಾದ ಕೂಡಲೇ ಡಬ್ಬಿಂಗ್ ಗೆ ಬಂದು, ಚುನಾವಣೆ ಒತ್ತಡದಿಂದ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದು ವಿವಾದಕ್ಕೆ ತೇಪೆ ಹಚ್ಚುವ ಪ್ರಯತ್ನ ಮಾಡಿದರು. ಒಟ್ಟಿನಲ್ಲಿ ಸಾಂಗವಾಗಿ ಕುರುಕ್ಷೇತ್ರ ತೆರೆ ಕಾಣುವಂತಾಯಿತು.

ಚಿತ್ರ ವಿಮರ್ಶೆ: ಕುರುಕ್ಷೇತ್ರ

ಚಿತ್ರ ರಿಲೀಸ್‌ಗೂ ಮುನ್ನ ಅಭಿಷೇಕ್ ಅಂಬರೀಶ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ನೇಹಿತ ನಿಖಿಲ್ ಗೌಡಗೆ ಶುಭಾಶಯ ತಿಳಿಸಿದ್ದರು. ಆ ನಂತರ ಮೊದಲ ದಿನ ಸಿನಿಮಾ ನೋಡಿ ಸಂಸದೆ ಸುಮಲತಾ 'ನಿಖಿಲ್ ಸೂಪರ್ ಆಗಿ ಆ್ಯಕ್ಟ್ ಮಾಡಿದ್ದಾರೆ. ಅವರಿಗೆ ಇದೊಂದು ರೆಕಾರ್ಡ್ ಬ್ರೇಕಿಂಗ್ ಸಿನಿಮಾ' ಎಂದು ಟ್ಟಿಟ್ ಮಾಡಿದ್ದರು.

 

ವಾದ- ವಿವಾದ, ಆರೋಪ - ಪ್ರತ್ಯಾರೋಪಗಳು ಚುನಾವಣೆಯಲ್ಲಿ ಸಹಜ. ಅದು ರಾಜಕೀಯಕ್ಕೆ ಮಾತ್ರ ಸೀಮಿತ. ವೈಯಕ್ತಿಕವಾಗಿ ಆ ದ್ವೇಷ ಯಾರೂ ಮುಂದುವರೆಸುವುದಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ.

ಇನ್ನು ನಿಖಿಲ್ ತೆರೆ ಮೇಲೆ 15 ರಿಂದ 20 ನಿಮಿಷ ಕಾಣಿಸಿಕೊಂಡಿದ್ದಾರೆ. ಕಡಿಮೆ ಸಮಯದಲ್ಲೇ ಜನರಿಗೆ ಇಷ್ಟ ಆಗುವುದಂತೂ ಗ್ಯಾರಂಟಿ!

ಕುರುಕ್ಷೇತ್ರ ನೋಡಿ ಅಂಬರೀಶ್ ನೆನೆದು ಭಾವುಕರಾದ ಸುಮಲತಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಕಾವ್ಯ ಶೈವ ಹತ್ತಿಸಿದ ಕಿಡಿ; ಧ್ರುವಂತ್‌, ರಜತ್‌ ಮಧ್ಯೆ ಮಾರಾಮಾರಿ ಜಗಳ, ಹೊರಬೀಳೋರು ಯಾರು?
Amruthadhaare Serial: ಪ್ಲ್ಯಾನ್‌ ಬದಲಾಯಿಸಿದ ಜಯದೇವ್;‌ ಇನ್ನೊಂದು ಅವಾಂತರ ಆಗಲಿದೆಯಾ?