
ಬೆಂಗಳೂರು (ಜ.21): ಮಲಯಾಳಂ ನಟಿ ಭಾವನಾ ಇದೇ ತಿಂಗಳ 22 ನೇ ತಾರೀಖು ಹಸೆಮಣೆ ಏರಲಿದ್ದಾರೆ. ಬಹುಕಾಲದ ಗೆಳೆಯ ಪ್ರೊಡ್ಯೂಸರ್ ನವೀನ್ ಅವರನ್ನು ಭಾವನಾ ವರಿಸಲಿದ್ದಾರೆ.
ತ್ರಿಸೂರ್'ನಲ್ಲಿರುವ ಜವಹರ್'ಲಾಲ್ ಕನ್ವೆನ್ಷನ್ ಸೆಂಟರ್'ನಲ್ಲಿ ಮದುವೆ ನಡೆಯಲಿದೆ. ಹತ್ತಿರದ ಕುಟುಂಬದವರು ಹಾಗೂ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಅದೇ ದಿನ ಸಂಜೆ ಅಲ್ಲಿಯೇ ಇರುವ ಲಾಲು ಕನ್ವೆನ್ಷನ್ ಹಾಲ್'ನಲ್ಲಿ ಅದ್ದೂರಿಯಾಗಿ ರೆಸೆಪ್ಷನ್ ಇಟ್ಟುಕೊಂಡಿದ್ದು, ವಿಐಪಿಗಳು, ಸೆಲೆಬ್ರಿಟಿಗಳು, ಸಿನಿಮಾರಂಗದವರು ಭಾಗವಹಿಸಲಿದ್ದಾರೆ. ಕಳೆದ ವರ್ಷವೇ ಆಗಬೇಕಿದ್ದ ಮದುವೆ ಭಾವನಾ ತಂದೆ ಸಾವಿನಿಂದ ವಿಳಂಬವಾಗಿದೆ.
ಭಾವನಾ ಮೆಹಂದಿ ಶಾಸ್ತ್ರದ ವಿಡಿಯೋ ಝಲಕ್ ನೋಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.