
ಬಿಗ್'ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ಮತ್ತೊಂದು ಅಚ್ಚರಿ ನಡೆದಿದೆ. ಗ್ರ್ಯಾಂಡ್ ಫಿನಾಲೆಗೆ ಇನ್ನೆರೆಡು ವಾರ ಉಳಿದಿದ್ದು ಪ್ರೇಕ್ಷಕರಿಗೆ ಶಾಕಿಂಗ್ ನ್ಯೂಸ್ ಹೊರಬಂದಿದೆ.
ಕಳೆದ ವಾರ ಶೋನಲ್ಲಿ ಚೆನ್ನಾಗಿ ಆಡುತ್ತಿದ್ದ ರಿಯಾಜ್ ಔಟಾಗಿದ್ದು ನೊಡುಗರಿಗೆ ಆಶ್ಚರ್ಯ ಹಾಗೂ ಶಾಕ್ ಕೂಡ ಆಗಿತ್ತು. ಆದರೆ ಈ ವಾರ ಗೆಲ್ಲಬೇಕಿದ್ದ ಒಬ್ಬರು ಔಟಾಗಿರುವ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಶೋನಲ್ಲಿ ಚೆನ್ನಾಗಿ ಆಡುತ್ತಿದ್ದ ಅನುಪಮ ಫೈನಲ್'ಗೆ ಹೋಗುತ್ತಾರೆ ಎಂದು ಬಹುತೇಕರು ಭಾವಿಸಿದ್ದರು. ಆದರೆ ಅಚ್ಚರಿಯ ನಿರ್ಧಾರ ಇಂದು ಬಂದಿದೆ.
ಮತ್ತೊಬ್ಬ ಪ್ರಬಲ ಸ್ಪರ್ಧಿ ಅನುಪಮ ಬಿಗ್' ಬಾಸ್'ನಿಂದ ಹೊರ ಹೋಗಿದ್ದಾರೆ ಎನ್ನಲಾಗಿದೆ. ಇವರು ಹೊರ ಹೋಗಿರುವ ಬಗ್ಗೆ ಸುದ್ದಿ ಎಲ್ಲಡೆ ಹರಿದಾಡುತ್ತಿದ್ದು, ಖಚಿತತೆ ಇಂದು ರಾತ್ರಿ ನಿರೂಪಕ ಸುದೀಪ್ ಬಹಿರಂಗ ಪಡಿಸಲಿದ್ದಾರೆ.
ಇನ್ನು ಬಿಗ್'ಬಾಸ್ ಮನೆಯಲ್ಲಿ ಶೃತಿ, ಜೆಕೆ, ಸಮೀರ್, ಚಂದನ್ ಶೆಟ್ಟಿ, ದಿವಾಕರ್, ನಿವೇದಿತಾ ಗೌಡ ಮನೆಯಲ್ಲಿದ್ದು, 6 ಮಂದಿಯಲ್ಲಿ ಒಬ್ಬರು ಟ್ರೋಫಿಯನ್ನು ತನ್ನದಾಗಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.