ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯದ ಗೀತಗೋವಿಂದಮ್ ಚಿತ್ರವನ್ನು ತೆಲುಗು ಸೂಪರ್‌ಸ್ಟಾರ್ ಮಹೇಶ್‌ಬಾಬು ಮೆಚ್ಚಿಕೊಂಡಿದ್ದಾರೆ
ನಾನು ಇಡಿಯಾಗಿ ಎಂಜಾಯ್ ಮಾಡಿದ ಸಿನಿಮಾ ಗೀತ ಗೋವಿಂದಮ್. ಅದರಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅಭಿನಯ ಬ್ರಿಲಿಯಂಟ್ ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಮೆಚ್ಚುಗೆಯನ್ನು ಜಗಜ್ಜಾಹೀರು ಮಾಡಿದ್ದಾರೆ. ತೆಲುಗಿನಲ್ಲೂ ರಶ್ಮಿಕಾ ಗ್ಲಾಮರ್ ಮತ್ತು ಅಭಿನಯ ಎರಡರಿಂದಲೂ ಹೆಸರು ಮಾಡಿದಂತಾಯಿತು. ಗೀತಗೋವಿಂದಮ್ ಚಿತ್ರದಲ್ಲಿ ರಶ್ಮಿಕಾ ನಟನೆಯನ್ನು ಅಭಿಮಾನಿಗಳೂ ಮೆಚ್ಚಿಕೊಂಡು ಹೊಗಳುತ್ತಿದ್ದಾರೆ.ತೆಲುಗು ಚಿತ್ರರಂಗ ಕನ್ನಡದ ನಟಿಯರನ್ನು ಮೆಚ್ಚುವುದು ಮುಂದುವರಿದಿದೆ. ಟಗರು ಚಿತ್ರದ ಮಾನ್ವಿತಾ ನಟನೆ ಮೆಚ್ಚಿ ರಾಮ್ ಗೋಪಾಲ್ ವರ್ಮ ಹೀಗೆಯೇ ದಂಗಾಗಿದ್ದರು