ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಾಂಕ : 7 ವರ್ಷ ಜೈಲು ಶಿಕ್ಷೆ!

Published : Sep 12, 2019, 09:42 AM IST
ಪೊಲೀಸರ ಕೈಗೆ  ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಿಯಾಂಕ :  7 ವರ್ಷ ಜೈಲು ಶಿಕ್ಷೆ!

ಸಾರಾಂಶ

ಬಾಲಿವುಡ್ ಪಿಂಕಿ ಅಲಿಯಾಸ್ ಪ್ರಿಯಾಂಕ ಚೋಪ್ರಾ ಮದುವೆ ನಂತರ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ . ಅವರ ವಿರುದ್ಧ ಮಹಾರಾಷ್ಟ್ರ ಪೊಲೀಸರು IPC ಸೆಕ್ಷನ್ 393 ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ನೀಡಿರುವುದು.  

ಬಾಲಿವುಡ್ ಮೊಸ್ಟ್ ರಿಲ್ಯಾಕ್ಸ್ ನಟಿ ಅಂದ್ರೆ ಪ್ರಿಯಾಂಕ ಚೋಪ್ರಾ ಅನ್ನುತ್ತಾರೆ ಜನರು. ಮದುವೆ ನಂತರ ಕೊಂಚ ಬ್ರೇಕ್ ತೆಗೆದುಕೊಂಡು ಜಾಲಿ  ಮೂಡ್ ನಲ್ಲಿದ್ದ ಪಿಗ್ಗಿ ಈಗ ‘ಸ್ಕೈ ಈಸ್ ಪಿಂಕ್’ ಚಿತ್ರದ ಮೂಲಕ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಅರೇ ಸಿನಿಮಾಗೂ ಪೊಲೀಸರಿಗೂ ಏನ್ ಸಂಬಂಧಾ? ಮದುವೆ ಆಗೋದೆ ತಪ್ಪಾ ಅಥವಾ ಮದುವೆ ಆದ ಮೇಲೆ ಸಿನಿಮಾ ಮಾಡೋದೆ ತಪ್ಪಾ? ಏನಿದು ಎನ್ನುವ ಪ್ರಶ್ನೆ  ಕಾಡುತ್ತಿದೆಯಾ. ಇಲ್ಲಿದೆ ನೋಡಿ ಕ್ಲ್ಯಾರಿಟಿ

'ಅಪ್ಪಾ ಐ ಲವ್‌ ಯೂ' ಅಂದ ಪ್ರಿಯಾಂಕಾ ಚೋಪ್ರಾ!

ತೆರೆ ಮೇಲೆ ಬರಲು ಸಜ್ಜಾಗಿರುವ ಬಾಲಿವುಡ್ ‘ಸ್ಕೈ ಈಸ್ ಪಿಂಕ್’  ಚಿತ್ರದ ಟೀಸರ್ ರಿಲೀಸ್ ಆಗಿದೆ.  ಅದರಲ್ಲೊಂದು ಸಂಭಾಷಣೆಯಲ್ಲಿ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದು, ಯಾವುದಾದರೋ ಬ್ಯಾಂಕ್ ದರೋಡೆ ಮಾಡೋಣ ಎಂದು ಫರಾನ್ ಅಖ್ತಾರ್ ಗೆ ಪ್ರಿಯಾಂಕ ಹೇಳುತ್ತಾರೆ. ಆ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದು ಮಹಾರಾಷ್ಟ್ರ ಪೊಲೀಸರು  ‘ಈ ಘಟನೆ ನಡೆದರೆ IPC Section 393 ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ಹಾಗೂ ದಂಡ ಕಟ್ಟಬೇಕು’ ಎಂದು ಟ್ಟೀಟ್ ಮಾಡಿದ್ದಾರೆ.

 


ಇದನ್ನು ತಕ್ಷಣ ಗಮನಿಸಿದ ಪ್ರಿಯಾಂಕ ‘Oops, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದೆ, ಇದರಿಂದ ಮತ್ತೊಂದು ಪ್ಲಾನ್ ಹುಡುಕಬೇಕು’ ಎಂದು ರಿಟ್ಟೀಟ್  ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕ ಜೊತೆ ಫರಾನ್ ಅಖ್ತಾರ್ ಹಾಗೂ ಮಗಳಾಗಿ ಜೈರಾ  ವಾಸಿಂ ಕಾಣಿಸಿಕೊಂಡಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸೀಮಂತ ಸಂಭ್ರಮದಲ್ಲಿ ‘ಸು ಫ್ರಮ್ ಸೋ’ ನಟಿ ಸಂಧ್ಯಾ ಅರಕೆರೆ : PHOTOS
ಹೈ-ಬಿಪಿಯಿಂದ ಮದುವೆ ಮರುದಿನವೇ ಪ್ರಖ್ಯಾತ ಹಾಸ್ಯನಟನ ಎರಡೂ ಕಿಡ್ನಿ ಫೇಲ್‌, ತನ್ನ ಕಿಡ್ನಿ ನೀಡಿ ಜೀವ ಉಳಿಸಿದ್ದಳು ಪತ್ನಿ!