
'ಕುರುಕ್ಷೇತ್ರ' ಚಿತ್ರೀಕರಣದ ಸಮಯದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದ್ದು ಅಭಿಮಾನಿಗಳಿಗೆ ಬೇಸರ ಮಾಡುತ್ತಲೇ ಇದೆ.
'ಕುರುಕ್ಷೇತ್ರ' ಬಹುನಿರೀಕ್ಷಿತ ಚಿತ್ರವಾದುದರಿಂದ ಅಭಿಮಾನಿಗಳು ಟ್ರೇಲರ್ ರಿಲೀಸ್‌ಗೆ ಕಾಯುತ್ತಿದ್ದರು. ಆದರೆ ಎರಡು ಟೀಸರ್ ಸೇರಿಸಿ ರೆಡಿ ಮಾಡಿರುವ ಟ್ರೇಲರ್ ನೋಡಿ ಬೇಸರ ವ್ಯಕ್ತಪಡಿಸಿದ್ದರು. ಅದರಲ್ಲೂ ವಿಡಿಯೋದಲ್ಲಿ ಸುಮಾರು 1 ನಿಮಿಷ ನಿರ್ಮಾಪಕ ಮುನಿರತ್ನ ಹೆಸರೇ ಕಾಣುತ್ತದೆ ಎಂದು ಮುನ್ನಿರತ್ನ ವಿರುದ್ಧ ಅಭಿಮಾನಿಗಳು ಮುನಿಸಿಕೊಂಡಿದ್ದರು.
ಮುನಿರತ್ನ ಮೇಲೆ ಮುನಿಸಿಕೊಂಡ ಡಿ-ಬಾಸ್ ಫ್ಯಾನ್ಸ್!
ಇನ್ನು ಟ್ರೈಲರ್‌ನಲ್ಲಿ ಮೊದಲು ಬರುವ ಸಾಲುಗಳಲ್ಲಿ ಕನ್ನಡ ಪದ ತಪ್ಪಾಗಿ ಬಳಕೆ ಆಗಿದ್ದು ಆನಂತರ ಅದನ್ನು ತಿದ್ದಲಾಗಿದೆ. 'ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಜಗತಿನ ಚಲನಚಿತ್ರ ರಂಗದಲ್ಲೇ' ಎಂಬ ಸಾಲಿದ್ದು ಅದರಲ್ಲಿ 'ಜಗತ್ತು' ಎಂದು ಬರೆಯುವ ಬದಲು ಜಗತು ಎಂದು ತೋರಿಸಲಾಗಿತ್ತು. ಇದನ್ನು ಗಮನಿಸಿದ ಅಭಿಮಾನಿಗಳು ಪದ ಬಳಕೆ ತಪ್ಪಾಗಿದೆ. ಸರಿ ಮಾಡಿ ಎಂದು ಸಾಕಷ್ಟು ಕಾಮೆಂಟ್‌ಗಳನ್ನು ಮಾಡಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.