ಮಾಜಿ ವಿಶ್ವ ಸುಂದರಿ ಮೇಲೆ ಪ್ರೀತಿಯ ಸುರಿಮಳೆ ಸುರಿಸಿದ ಲಲಿತ್ ಮೋದಿ; 'ನೀವು ಇನ್ನೂ ಬಿಟ್ಟಿಲ್ವಾ' ಎಂದ ಫ್ಯಾನ್ಸ್

Published : Nov 20, 2026, 09:50 PM IST
lalit modi and sushmita sen

ಸಾರಾಂಶ

ಮಾಜಿ ವಿಶ್ವ ಸುಂದರಿ ಮೇಲೆ ಲಲಿತ್ ಮೋದಿಗೆ ಮತ್ತೆ ಸಾಣೆ ಲವ್ ಆದಂತಿದೆ. ದಿಢೀರ್ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಫೋಟೋ ಶೇರ್ ಮಾಡಿ 'ಹ್ಯಾಪಿ ಬರ್ತ್‌ಡೇ ಮೈ ಫ್ರೆಂಡ್' ಎಂದು ಬರೆದುಕೊಂಡಿದ್ದಾರೆ.

ಬೆಂಗಳೂರು: ಬಾಲಿವುಡ್‌ನ ಸ್ಟಾರ್ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ನವೆಂಬರ್ 19 ರಂದು 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ವಿಶೇಷ ಸಂದರ್ಭದಲ್ಲಿ ಮಾಜಿ ಗೆಳೆಯ ಲಲಿತ್ ಮೋದಿ, ನಟಿಯ ಮೇಲೆ ಪ್ರೀತಿಯ ಸುರಿಮಳೆಗೈದಿದ್ದಾರೆ! ಜೊತೆಗೆ ಅವರನ್ನು ವಿಶೇಷ ಹೆಸರಿನಿಂದ ಕರೆದು ಸುದ್ದಿಯಾಗಿದ್ದಾರೆ.

ಲಲಿತ್ ಮೋದಿ ಪೋಸ್ಟ್‌ನಲ್ಲಿ ಏನಿದೆ?

ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಸುಶ್ಮಿತಾ ಸೇನ್, ಹುಟ್ಟು ಹಬ್ಬದ ದಿನ ಸೋಶಿಯಲ್ ಮಿಡಿಯಾದಲ್ಲಿ ಸ್ಪೆಷಲ್ ಪೋಸ್ಟ್ ಹಾಕಿದ್ದಾರೆ. ಅದಲ್ಲಿ ಅವರು 'ನನ್ನ ಆತ್ಮೀಯ ಸ್ನೇಹಿತೆ ಸುಶ್ಮಿತಾ ಸೇನ್‌ಗೆ ಹುಟ್ಟುಹಬ್ಬದ ಶುಭಾಶಯಗಳು. ನಗುತ್ತಲೇ ಇರಿ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಅವರ ಜೊತೆಗೆ ಕಳೆದ ಹಳೆಯ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಲಲಿತ್ ಮೋದಿ ಪೋಸ್ಟ್ ನೋಡಿದ ಕೆಲವರು, ನೀವಿನ್ನೂ ಅವರನ್ನೂ ಬಿಟ್ಟಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು, ಲಲಿತ್ ಮೋದಿ ಪೋಸ್ಟ್ ನೆಟ್ಟಿಗರಿಗೆ ಆಹಾರ ಆಗಿದೆ. ಲಲಿತ್ ಮೋದಿ, ಪರ ಚರ್ಚೆ ಆರಂಭಿಸಿದ್ದಾರೆ.

ಸುಷ್ಮಿತಾ ಸೇನ್ ಮತ್ತು ಲಲಿತ್ ಮೋದಿ 2022ರಲ್ಲಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದ್ದರು.ಲಲಿತ್ ಮೋದಿ ತಮ್ಮ ರಜೆಯ ಫೋಟೋಗಳನ್ನು ಹಂಚಿಕೊಂಡರು. ಅವರನ್ನು ತಮ್ಮ ಆತ್ಮೀಯ ಸಂಗಾತಿ ಎಂದು ಬಣ್ಣಿಸಿದ್ದರು. ಕೆಲವು ದಿನಗಳ ನಂತರ ಇಬ್ಬರ ಸಂಬಂಧ ಹಳಸಿತು. ನಟಿ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಲಲಿತ್ ಮೋದಿ ಲಂಡನ್‌ನಲ್ಲಿದ್ದಾರೆ. ಈ ಸಂಬಂಧ ಫೆಬ್ರವರಿ 2025 ರಲ್ಲಿ ಕೊನೆಗೊಂಡಿದೆ.

ಲಲಿತ್ ಮೋದಿ ಬ್ರಿಟಿಷ್ ಪ್ರಜೆ

ಇತ್ತೀಚೆಗೆ ಲಲಿತ್ ಮೋದಿ ತಾವು ಬ್ರಿಟಿಷ್ ಪ್ರಜೆಯಾದ ಸುದ್ದಿ ಹಂಚಿಕೊಂಡಿದ್ದಾರೆ. ಒಂದು ಹೆಮ್ಮೆಯ ಕ್ಷಣ, ಹೊಸ ಅಧ್ಯಾಯ. ಇಂದು ನವೆಂಬರ್ 14, 2026 ರಂದು ಆಕ್ಸ್‌ಫರ್ಡ್ ಒಕ್ಕೂಟವನ್ನು ಉದ್ದೇಶಿಸಿ ಮಾತನಾಡುವ ಗೌರವ ನನಗೆ ಸಿಕ್ಕಿತು. ಇಲ್ಲಿ ನನ್ನ ಜೀವನದಲ್ಲಿ ಬಹಳ ವಿಶೇಷವಾದ ಮತ್ತು ವೈಯಕ್ತಿಕ ಮೈಲಿಗಲ್ಲಿನ ಬಗ್ಗೆ ನಾನು ಸಾರ್ವಜನಿಕವಾಗಿ ಮಾತನಾಡಿದ್ದೇನೆ. ಬ್ರಿಟಿಷ್ ಪ್ರಜೆಯಾಗಲು ನನಗೆ ಹೆಮ್ಮೆಯಿದೆ ಎಂದು ಬರೆದುಕೊಂಡಿದ್ದರು.

ಮುಂದುವರಿದು.. ಸೆಪ್ಟೆಂಬರ್ 15, 2026 ರಂದು ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಾನು ಬ್ರಿಟಿಷ್ ಪ್ರಜೆ ಆಗುವುದನ್ನ ಸಮಾರಂಭದಲ್ಲಿ ಆಚರಿಸಿದೆ. ಈ ಸಮಾರಂಭವು ಯಾವಾಗಲೂ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ. ಬ್ರಿಟನ್ ಹಲವು ವರ್ಷಗಳಿಂದ ನನ್ನ ಮನೆಯಾಗಿದೆ. ಇಲ್ಲಿನ ಜನ, ಸಂಸ್ಥೆಗಳು, ಸಂಪ್ರದಾಯಗಳು ಮತ್ತು ಮೌಲ್ಯಗಳ ಬಗ್ಗೆ ಆಳವಾದ ಗೌರವ ಇದೆ. ಬ್ರಿಟಿಷ್ ಪ್ರಜೆಯಾಗುವುದು ಒಂದು ಸವಲತ್ತು ಮತ್ತು ಜವಾಬ್ದಾರಿ ಎರಡೂ ಆಗಿದೆ. ಅದನ್ನು ನಾನು ಹೆಮ್ಮೆ, ಕೃತಜ್ಞತೆ ಮತ್ತು ಸೇರಿದ ಭಾವನೆಯಿಂದ ಸ್ವೀಕರಿಸುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕರುನಾಡ ತಾಯಿ ಸದಾ ಚಿನ್ಮಯಿ' ಹಾಡಿನಲ್ಲೇ ಕನ್ನಡದ ಬಾವುಟ ಉಲ್ಟಾ! 41 ವರ್ಷಗಳ ಬಳಿಕ ಈಗ ವೈರಲ್​
'ಲಕ್ಷ್ಮೀಪುತ್ರ' ವೇದಿಕೆಯಲ್ಲಿ ಯಶ್ ಅವರ ಫೇಮಸ್ ಡೈಲಾಗ್ ಹೊಡೆದ ಚಿಕ್ಕಣ್ಣ; ಖಡಕ್ ಸಂದೇಶ ಪಾಸ್ ಮಾಡಿದ್ದು ಯಾರಿಗೆ?