Chandana Ananthakrishna: ಮಗು ಮಾಡಿಕೊಳ್ಳುವ ಬಗ್ಗೆ ಕೇಳಿದ್ರೆ ಲಕ್ಷ್ಮೀ ನಿವಾಸ ಚಿನ್ನುಮರಿ ಹೀಗೆ ಹೇಳೋದಾ? ಸುಸ್ತಾದ ಫ್ಯಾನ್ಸ್​!

Published : Jun 03, 2025, 06:12 PM IST
Chandana Ananthakrishna

ಸಾರಾಂಶ

ಈಚೆಗೆ ಮದುವೆಯಾಗಿರುವ ಲಕ್ಷ್ಮೀ ನಿವಾಸ ಚಿನ್ನುಮರಿ ಉರ್ಫ್​ ಚಂದನಾ ಅನಂತಕೃಷ್ಣ ಅವರು ಮಗು ಮಾಡಿಕೊಳ್ಳುವ ಪ್ರಶ್ನೆಗೆ ರಿಯಾಕ್ಟ್​ ಮಾಡಿದ್ದು ಹೀಗೆ ನೋಡಿ!

ಲಕ್ಷ್ಮೀ ನಿವಾಸದ ಚಿನ್ನುಮರಿ ಜಾಹ್ನವಿ ಶ್ರೀಲಂಕಾದ ಸಮುದ್ರದಲ್ಲಿ ಬಿದ್ದು, ಚೆನ್ನೈನಲ್ಲಿ ಎದ್ದು ಸದ್ಯ ಸೀರಿಯಲ್​ನಲ್ಲಿ ವಿಶ್ವನ ಮನೆ ತಲುಪಿದ್ದಾಳೆ. ವಿಶ್ವನ ಕಾರಿನ ಡಿಕ್ಕಿಯಲ್ಲಿ ಅಡಗಿ ಕುಳಿತಿದ್ದ ಜಾನು, ಅವನಿಗೂ ಅರಿವಿಲ್ಲದೇ ಮನೆಗೆ ಬಂದಿದ್ದಾಳೆ. ಅತ್ತ ತನ್ನ ಪತ್ನಿ ಸತ್ತೇ ಹೋದಳು ಎಂದು ಜಯಂತ್​ ಗೋಗರೆಯುತ್ತಿದ್ದಾನೆ. ಇದೀಗ, ವಿಶ್ವನ ಮನೆ ಸೇರಿರೋ ಜಾಹ್ನವಿ ಅಲ್ಲಿಂದಲೂ ಹೊರಗೆ ಹೋಗುವ ಕಾಲ ಬಂದಿದೆ. ಏಕೆಂದರೆ ವಿಶ್ವನಿಗೆ ಜಾಹ್ನವಿ ತನ್ನದೇ ಮನೆಯಲ್ಲಿ ಇದ್ದಾಳೆ ಎನ್ನುವ ಗುಮಾನಿ ಶುರುವಾಗಿದೆ. ಆದ್ದರಿಂದ ಜಾಹ್ನವಿ ಮನೆಯಿಂದ ಹೋಗಲು ನೋಡಿದರೂ ಅದು ಸಾಧ್ಯವಾಗಲಿಲ್ಲ. ಅದೇ ಇನ್ನೊಂದೆಡೆ, ಸೈಕೋ ಜಯಂತ್​ಗೆ ತನ್ನ ಪತ್ನಿ ಬದುಕಿದ್ದಾಳೆ ಎಂದೇ ಎನ್ನಿಸುತ್ತಿದೆ. ಆದ್ದರಿಂದ ಅವಳನ್ನು ಹುಡುಕಲು ಡಿಟೆಕ್ಟಿವ್​ನ ಇಟ್ಟಿದ್ದಾನೆ. ಈಗ ಜಾಹ್ನವಿ ಬದುಕಿದ್ದಾಳೆ ಎನ್ನುವ ಸುಳಿವು ಅವನಿಗೆ ಸಿಕ್ಕಿದೆ. ಇನ್ನೇನು ಜಾಹ್ನವಿ ಏನಾದ್ರೂ ಅವನ ಕೈಗೆ ಸಿಕ್ಕರೆ ಮುಗೀತು ಕಥೆ. ಒಟ್ಟಿನಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್​ ರೋಚಕ ಹಂತಕ್ಕೆ ಬಂದು ನಿಂತಿದೆ.

ಜಾಹ್ನವಿಯ ನಿಜವಾದ ಹೆಸರು ಚಂದನಾ ಅನಂತಕೃಷ್ಣ. ಅವರು ಇತ್ತೀಚೆಗೆ, ಉದ್ಯಮಿ ಪ್ರತ್ಯಕ್ಷ್​ ಅವರನ್ನು ಮದುವೆಯಾಗಿದ್ದಾರೆ. ಚಿತ್ರನಟ ದಿವಂಗತ ಉದಯ್ ಹುತ್ತಿನಗದ್ದೆ - ನಟಿ ಲಲಿತಾಂಜಲಿ ದಂಪತಿಯ ಮಗ ಪ್ರತ್ಯಕ್ಷ್​. ಇನ್ನು ಪ್ರತ್ಯಕ್ಷ್​ ಕುರಿತು ಹೇಳುವುದಾದರೆ, ಮೂಲತಃ ಚಿಕ್ಕಮಗಳೂರಿನವರು. ಇವರ ತಂದೆ ಉಯದ್​ ಅವರು, ಕೆಲ ವರ್ಷ ಹಲವು ಚಿತ್ರಗಳಲ್ಲಿ ನಟಿಸಿದರು. 1987ರಲ್ಲಿ ತೆರೆ ಕಂಡಿದ್ದ ಆರಂಭ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿದ್ದವರು. ಅಗ್ನಿಪರ್ವ , ಶುಭ ಮಿಲನ , ಜಯಭೇರಿ , ಉದ್ಭವ , ಅಮೃತ ಬಿಂದು , ಶಿವಯೋಗಿ ಅಕ್ಕಮಹಾದೇವಿ , ಉಂಡು ಹೋದ ಕೊಂಡು ಹೋದ , ಕ್ರಮ ಮುಂತಾದ ಚಿತ್ರಗಳಲ್ಲಿ ಇವರು ಬಣ್ಣ ಹಚ್ಚಿದ್ದಾರೆ. ಬಳಿಕ ಅವರು, ಪೋಟೋಗ್ರಫಿ ಮತ್ತು ವಿಡಿಯೋಗ್ರಫಿ ಮುಂದುವರೆಸಿದರು. ಚಿಕ್ಕಮಗಳೂರಿನಲ್ಲಿ ಕಾಫಿ ಎಸ್ಟೇಟ್ ಹೊಂದಿದ್ದಾರೆ. 2022ರಲ್ಲಿ ಅವರು ನಿಧನರಾಗಿದ್ದು, ಪ್ರತ್ಯಕ್ಷ್​ ಅವರೂ ಕಾಫಿ ಎಸ್ಟೇಟ್​ ನೋಡಿಕೊಳ್ಳುತ್ತಿದ್ದಾರೆ.

ಇದೀಗ ನಟಿ ವೈಫೈ ಟಿವಿ ಕನ್ನಡ ಎನ್ನುವ ಇನ್​ಸ್ಟಾಗ್ರಾಮ್​ಗೆ ನೀಡಿರುವ ಸಂದರ್ಶನದಲ್ಲಿ ಮಗು ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ. ನೀವು ಇಷ್ಟೊಂದು ಮುದ್ದು ಮುದ್ದಾಗಿದ್ದೀರಿ. ಇನ್ನು ಮರಿ ಚಂದನಾ ಬಂದರೆ ಹೇಗಿರುತ್ತದೆ ಎಂದು ಪ್ರಶ್ನಿಸಲಾಗಿದೆ. ಅದಕ್ಕೆ ಚಂದನಾ ಅವರು ಜೋರಾಗಿ ಕೂಗಿಕೊಂಡು ಅಯ್ಯಪ್ಪಾ, ಅಯ್ಯೋ ಎಂದುಕೊಂಡು ತಲೆ ಹಿಡಿದುಕೊಂಡರು. ಸದ್ಯಕ್ಕೆ ಈ ವಿಷಯವನ್ನು ಇಲ್ಲಿಗೇ ಬಿಟ್ಟು ಮುಂದಕ್ಕೆ ಹೋಗೋಣ. ನನಗೆ ನನ್ನದೇ ಆದ ಸಿಕ್ಕಾಪಟ್ಟೆ ಲೈಫ್​ ಪ್ಲ್ಯಾನ್ಸ್​ ಇದೆ. ಅದನ್ನೆಲ್ಲಾ ಮೊದಲು ಮುಗಿಸಬೇಕು. ಆಮೇಲೆ ಮಕ್ಕಳ ಯೋಚನೆ ಎಂದರು.

ಇನ್ನು ಚಂದನಾ ಕುರಿತು ಹೇಳುವುದಾದರೆ, ಇವರು ಭರತನಾಟ್ಯ ಕಲಾವಿದೆ ಕೂಡ. ಅದರ ಜೊತೆಯಲ್ಲಿಯೇ ತಾವು ಅತ್ಯಂತ ಸುಂದರವಾಗಿ ಹಾಡಬಲ್ಲೆ ಎನ್ನುವುದನ್ನೂ ಇದರಲ್ಲಿ ತೋರಿಸಿಕೊಟ್ಟಿದ್ದಾರೆ. ಗಾಯನವೊಂದಕ್ಕೆ ದನಿಯಾಗಿದ್ದಾರೆ. ಇನ್ನು ಇವರ ಮದುವೆಯ ಕುರಿತು ಹೇಳುವುದಾದರೆ, ಕಳೆದ ತಿಂಗಳು ಮದುವೆಯಾಗಿದೆ. ಇವರದ್ದು ಅರೆಂಜ್ಡ್​ ಮ್ಯಾರೇಜ್. ಇವರದ್ದು ಹಿರಿಯರು ನೋಡಿ ಆಗಿರುವ ಮದುವೆಯಾಗಿರುವ ಕಾರಣ, ಮದುವೆಯ ಬಗ್ಗೆ ಕೀರ್ತಿ ಅವರು ಕೇಳಿದಾಗ, ಈ ಜೋಡಿ ಸಕತ್​ ತಮಾಷೆಯಾಗಿ ಉತ್ತರ ಕೊಟ್ಟಿದೆ. ಪ್ರತ್ಯಕ್ಷ್​ ಅವರು ಹೇಳಿದ್ದೇನೆಂದರೆ, ಹೀಗೆ ಒಂದು ದಿನ ಆಫೀಸ್​ನಲ್ಲಿ ಕೆಲಸ ಮಾಡುತ್ತಿರುವಾಗ, ಅಮ್ಮ ಮದುವೆಯ ಬಗ್ಗೆ ಹೇಳಿದ್ರು. ಅದು ಇದು ಮಾತೆಲ್ಲಾ ಆದ ಬಳಿಕ ಫೋಟೋ ನೋಡಿದೆ. ಫೋಟೋ ನೋಡಿದ ತಕ್ಷಣ ಈಕೆಯನ್ನು ನಾನು ಮದುವೆಯಾಗುವುದಿಲ್ಲ ಎಂದು ಹೇಳಿದೆ. ಆ ಫೋಟೋದಲ್ಲಿ ಇವಳು ಒಳ್ಳೆ ಮಗು ಥರ ಕಾಣಿಸ್ತಾ ಇದ್ಲು. ಬಾಲ್ಯ ವಿವಾಹ ಆಗತ್ತೆ, ಬೇಡಪ್ಪಾ ಇವಳು ನನಗೆ ಎಂದೆ ಎಂದು ತಮಾಷೆ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!