ಧೋನಿಯೆಂದರೆ ಬೆಚ್ಚಿಬೀಳುವ ಲಕ್ಷ್ಮೀ ರೈ

Published : Oct 05, 2016, 11:04 AM ISTUpdated : Apr 11, 2018, 12:38 PM IST
ಧೋನಿಯೆಂದರೆ ಬೆಚ್ಚಿಬೀಳುವ ಲಕ್ಷ್ಮೀ ರೈ

ಸಾರಾಂಶ

ದಕ್ಷಿಣ ಭಾರತದ ಮಾದಕ ನಟಿ ಲಕ್ಷ್ಮೀ ರೈ ನಿಟ್ಟುಸಿರು ಬಿಟ್ಟಿದ್ದಾರೆ. ಹೋಗಿಬಂದಲ್ಲಿ ಅವರಿಗೆ ಧೋನಿಯದ್ದೇ ಭಯ! ಕೆಲ ತಿಂಗಳ ಹಿಂದೆ ಧೋನಿ ಟೆಸ್ಟ್‌ಗೆ ನಿವೃತ್ತಿ ಹೇಳಿದಾಗ, ಒಂದಿಷ್ಟು ಮಂದಿ ಅವರಿಗೆ ಇಲ್ಲಸಲ್ಲದ ಪ್ರಶ್ನೆ ಕೇಳಿದ್ದರಂತೆ. ಅದಕ್ಕೂ ತುಸು ಹಿಂದೆ ಸಾಕ್ಷಿ, ಧೋನಿಯನ್ನು ಮದುವೆಯಾದಾಗಲೂ ಇಂಥದ್ದೇ ತರ್ಲೆ ಪ್ರಶ್ನೆ ರೈ ಅವರ ಮುಂದೆ ಬಂದಿತ್ತಂತೆ. ಇನ್ನೇನು ಧೋನಿಯ ಬಯೋಪಿಕ್ ಬರುತ್ತಿದೆಯೆಂದಾಗಲೂ, ‘ಈ ಚಿತ್ರದಲ್ಲಿ ನಿಮ್ಮದೂ ಪಾತ್ರ ಇದೆಯಂತೆ?’ ಎಂದು ಮತ್ತೆ ಧೋನಿ ಸುತ್ತಲಿನ ಪ್ರಶ್ನೆಗಳೇ. ಇಷ್ಟಕ್ಕೆ ಸಾಕು ಸಾಕಾಗಿ ಹೋದ ಲಕ್ಷ್ಮಿ ರೈ, ‘ನಾನು ಧೋನಿಯ ಮಾಜಿ ಪ್ರೇಯಸಿಯೇ ಅಲ್ಲ’ ಎಂದು ಖಡಕ್ಕಾಗಿ ಹೇಳಿಬಿಟ್ಟಿದ್ದರು.

ಈಗ ಧೋನಿಯ ಬಯೋಪಿಕ್ ಬಂದಿದೆ. ಅಲ್ಲಿ ಲಕ್ಷ್ಮಿ ರೈ ಪಾತ್ರವಿಲ್ಲ. ಅಸಲಿಗೆ ಲಕ್ಷ್ಮಿ ರೈ ಈ ಸಿನಿಮಾವನ್ನು ನೋಡಿಯೇ ಇಲ್ವಂತೆ. ಚಿತ್ರ ವೀಕ್ಷಿಸಿದ ಆಪ್ತರು, ಪಾತ್ರವಿಲ್ಲದರ ಬಗ್ಗೆ ದೃಢೀಕರಿಸಿದ್ದಾರೆ. ಮತ್ತೆ ಪ್ರಶ್ನೆಗಳನ್ನು ಉದ್ಭವಿಸದಂತೆ ಮಾಡಿರುವ ಧೋನಿ ಚಿತ್ರಕ್ಕೆ ರೈ ಮನಸ್ಸಿನಲ್ಲಿಯೇ ಥ್ಯಾಂಕ್ಸ್ ಹೇಳಿದ್ದಾರೆ. ‘ಧೋನಿ ಬಗ್ಗೆ ಏನಾದರೂ ಬೆಳವಣಿಗೆಯಾದಾಗ ನನ್ನನ್ನು ಪುನಃ ಎಳೆದು ತರುವುದು ಸರಿಯಲ್ಲ’ ಎನ್ನುವುದು ಲಕ್ಷ್ಮಿ ರೈ ಆಕ್ಷೇಪ. ಹಾಗೆ ನೋಡಿದರೆ, ಧೋನಿ ಚಿತ್ರದಲ್ಲಿ ಮಾಜಿ ಸಂಗಾತಿಗಳಾದ ದೀಪಿಕಾ ಪಡುಕೋಣೆ ಇರಬೇಕಿತ್ತು. ಪ್ರೀತಿ ಸಿಮೋಸ್ ಪ್ರಸ್ತಾಪವೂ ಆಗಬೇಕಿತ್ತು. ಐಪಿಎಲ್ ವೇಳೆ ಮಿಡ್‌ನೈಟ್‌ನಲ್ಲಿ ಭೇಟಿಯಾಗಿದ್ದ ನಟಿ ಆಸಿನ್ ನೆರಳೂ ಅಲ್ಲಿ ಹಾಜರಾತಿ ಹಾಕಬೇಕಿತ್ತು. ಈ ಎಲ್ಲ ಗರ್ಲ್‌`ಫ್ರೆಂಡ್`ಗಳನ್ನು ಬದಿಗಿಟ್ಟು, ಪ್ರಿಯಾಂಕಾ ಝಾ ಎಂಬ ಏಕೈಕ ಸಂಗಾತಿಯನ್ನಷ್ಟೇ ಪ್ರೇಕ್ಷಕರ ಮುಂದಿಟ್ಟರು ನಿರ್ದೇಶಕ ನೀರಜ್ ಪಾಂಡೆ.

ಬೇರೆಲ್ಲ ಸಂಗಾತಿಗಳನ್ನು ಕೈಬಿಡೋದಕ್ಕೂ, ಲಕ್ಷ್ಮಿ ರೈ ಅವರನ್ನು ಬಿಡೋದಕ್ಕೂ ವ್ಯತ್ಯಾಸವಿದೆ. 2002ರ ವ್ಯಾಲೆಂಟೈನ್ಸ್ ಡೇಯಂದು ಅಪಘಾತದಲ್ಲಿ ಮಡಿದ ಪ್ರಿಯಾಂಕಾ ಝಾಳ ನಂತರ ಧೋನಿ ಬದುಕಿನಲ್ಲಿ ಬಂದಿದ್ದು ಇದೇ ಲಕ್ಷ್ಮಿ ರೈ. 2008ರಲ್ಲಿ ಐಪಿಎಲ್ ಕಹಳೆ ಎದ್ದಾಗ, ಚೆನ್ನೈ ತಂಡಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿದ್ದೂ ಇದೇ ನಟಿಯೇ. ಇಬ್ಬರೂ ಅಲ್ಲಿಲ್ಲಿ ಸುತ್ತಾಡಿದ್ದರ ಬಗ್ಗೆ ಸಾಕಷ್ಟು ಸುದ್ದಿಯೂ ಆಗಿತ್ತು. ಒಂದು ವರ್ಷಕ್ಕೂ ಅಕ ಕಾಲ ಇಬ್ಬರ ನಡುವೆ ಪ್ರೇಮಸಂಬಂಧವಿತ್ತು ಎನ್ನಲಾಗಿದೆ. ಯಾವಾಗ ಧೋನಿ, ಸಾಕ್ಷಿಯನ್ನು ಪ್ರೇಮಿಸಿ ಮದುವೆಯಾದರೋ ಆಗ ಲಕ್ಷ್ಮಿ ರೈ, ‘ಧೋನಿ ನನ್ನ ಬದುಕಿನಲ್ಲಿ ಆರದ ಗಾಯ’ ಎಂದಿದ್ದರು.

ಈಗ ಧೋನಿ ಬಗ್ಗೆ ಏನೇ ಮಾತನಾಡಲು ಹೋದರೂ ಲಕ್ಷ್ಮಿ ರೈ ಹೀಗೆ ಹೇಳುತ್ತಿದ್ದಾರೆ; ‘ಧೋನಿಯ ಬಗ್ಗೆ ಏನೇ ಕೇಳಿದರೂ ನಾನು ಏನನ್ನೂ ಹೇಳಲಾರೆ. ನನ್ನ ಮತ್ತು ಧೋನಿಯ ನಡುವೆ ಈಗ ಯಾವ ಸಂಬಂಧವೂ ಇಲ್ಲ. ಧೋನಿ ಅವರ ಬದುಕಿನಲ್ಲಿ ತುಂಬಾ ಮುಂದೆ ಸಾಗಿದ್ದಾರೆ. ಅವರಿಗೊಬ್ಬಳು ಮಗಳೂ ಇದ್ದಾಳೆ. ಬಯೋಪಿಕ್ ಬಂದಾಗ ನನ್ನ ಪ್ರಸ್ತಾಪವೇಕೆ?’. ಹಾಗೆ ಮುಂದುವರಿದು ಮತ್ತೆ ಹೇಳುತ್ತಾರೆ, ‘ನನಗೆ ಧೋನಿ ಬಗ್ಗೆ ಬೇರೇನೂ ಗೊತ್ತಿಲ್ಲ. ಅವರು ಕ್ರಿಕೆಟರ್, ನ್ಯಾಶನಲ್ ಫಿಗರ್ ಅನ್ನೋದಷ್ಟೇ ಗೊತ್ತು’!

ಒಂದು ವೇಳೆ ಬಯೋಪಿಕ್‌ನಲ್ಲಿ ಲಕ್ಷ್ಮಿ ರೈ ಪಾತ್ರವಿರುತ್ತಿದ್ದರೆ ಮತ್ತೊಂದಿಷ್ಟು ಪ್ರಶ್ನೆಗಳು ನಟಿಯನ್ನು ಮುತ್ತಿಕೊಳ್ಳುತ್ತಿದ್ದವೋ ಏನೋ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಾಮಾಕ್ಯ ದೇವಿ ಸನ್ನಿಧಾನದಲ್ಲಿ ‘ತೀರ್ಥರೂಪ ತಂದೆಯವರಿಗೆ’ ತಂಡ
ಬಿಗ್ ಬಾಸ್ ಮನೆಯಿಂದ ಹೊರ ಬಂದ ಜಾಹ್ನವಿ ಏನು ಮಾಡ್ತಿದ್ದಾರೆ?