ಟೋಬಿ ಚಿತ್ರದ ವಿತರಣೆ ಹಕ್ಕು ತೆಗೆದುಕೊಂಡ ಕೆವಿಎನ್‌ ಪ್ರೊಡಕ್ಷನ್

Published : Jul 14, 2023, 08:03 AM IST
ಟೋಬಿ ಚಿತ್ರದ ವಿತರಣೆ ಹಕ್ಕು ತೆಗೆದುಕೊಂಡ ಕೆವಿಎನ್‌ ಪ್ರೊಡಕ್ಷನ್

ಸಾರಾಂಶ

ಆಗಸ್ಟ್‌ 25ಕ್ಕೆ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲು ಸಿದ್ದವಾಗುತ್ತಿರುವ ರಾಜ್‌ ಬಿ ಶೆಟ್ಟಿ ನಟನೆಯ ‘ಟೋಬಿ’ ಚಿತ್ರವನ್ನು ಕೆವಿಎನ್‌ ಪ್ರೊಡಕ್ಷನ್ ಸಂಸ್ಥೆ ವಿತರಣೆ ಮಾಡುತ್ತಿದೆ. 

ಆಗಸ್ಟ್‌ 25ಕ್ಕೆ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲು ಸಿದ್ದವಾಗುತ್ತಿರುವ ರಾಜ್‌ ಬಿ ಶೆಟ್ಟಿ ನಟನೆಯ ‘ಟೋಬಿ’ ಚಿತ್ರವನ್ನು ಕೆವಿಎನ್‌ ಪ್ರೊಡಕ್ಷನ್ ಸಂಸ್ಥೆ ವಿತರಣೆ ಮಾಡುತ್ತಿದೆ. ರಕ್ಷಿತ್‌ ಶೆಟ್ಟಿ ಅವರ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಂತರ ಕೆವಿಎನ್‌ ಈಗ ವಿತರಣೆ ಮೂಲಕ ರಾಜ್‌ ಬಿ ಶೆಟ್ಟಿ ಚಿತ್ರದ ಜೊತೆ ನಿಂತಿದೆ. ನಿರ್ಮಾಪಕ ವೆಂಕಟ್‌ ನಾರಾಯಣ್‌ ಕೋಣಂಕಿ ಅವರನ್ನು ಭೇಟಿ ಮಾಡಿ ಚಿತ್ರತಂಡ ವಿತರಣೆ ಹಕ್ಕು ನೀಡಿದೆ. ಈ ಚಿತ್ರವನ್ನು ಬಾಸಿಲ್ ನಿರ್ದೇಶಿಸಿದ್ದು, ಮಿಥುನ್ ಮುಕುಂದನ್ ಸಂಗೀತ ಇದೆ. ಟಿ ಕೆ ದಯಾನಂದ ಕತೆ ಬರೆದಿದ್ದಾರೆ. ಚಿತ್ರದ ನಾಯಕಿಯರಾಗಿ ಸಂಯುಕ್ತ ಹೊರನಾಡು, ಚೈತ್ರಾ ಆಚಾರ್ ನಟಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ ಚಿತ್ರದ ಮುಖ್ಯ ಪಾತ್ರಧಾರಿಗಳು.

ರುದ್ರ ಭಯಂಕರ ರಾಜ್ ಬಿ ಶೆಟ್ಟಿ: ರಾಜ್ ಬಿ ಶೆಟ್ಟಿ ಯಾವುದೇ ಸಿನಿಮಾ ಮಾಡಿದರೂ ತುಂಬು ತೀವ್ರತೆಯಿಂದ ಮಾಡುತ್ತಾರೆ ಎಂಬುದಕ್ಕೆ ಸಾಕ್ಷಿಯೇ ‘ಟೋಬಿ’ ಸಿನಿಮಾದ ಪೋಸ್ಟರ್‌ಗಳು. ಸದ್ಯ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಪೋಸ್ಟರ್ ಸಿನಿಮಾ ಪ್ರೇಮಿಗಳನ್ನು ಅಚ್ಚರಿಗೆ ದೂಡಿದೆ. ಪೋಸ್ಟರ್‌ನಲ್ಲಿ ಬಳೆಯಾಕಾರದ ದೊಡ್ಡದೊಂದು ಮೂಗುತಿ ಧರಿಸಿರುವ ರಾಜ್ ಬಿ ಶೆಟ್ಟಿ ಕಣ್ಣಲ್ಲಿ ಬೆಂಕಿಯುಗುಳುವಂತೆ ಕಾಣಿಸಿಕೊಂಡಿದ್ದಾರೆ. ಅವರ ಮುಖದಲ್ಲಿ ಗಾಯಗಳಿವೆ. ಎದೆಯಲ್ಲಿ ಬೆಂಕಿಯುರಿಯುವಂತೆ ಪೋಸ್ಟರ್‌ನಲ್ಲಿ ಭಾಸವಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ 'ಟೋಬಿ'ಯ ರಕ್ತ- ಸಿಕ್ತ ಅವತಾರ ಫುಲ್ ವೈರಲ್: ಪಾತ್ರದ ಬಗ್ಗೆ ರಾಜ್.ಬಿ.ಶೆಟ್ಟಿ ಹೇಳಿದ್ದೇನು?

ಟೋಬಿ ಸಿನಿಮಾ ಟಿಕೆ ದಯಾನಂದ ಅವರ ಕತೆ ಆಧರಿಸಿದ ಸಿನಿಮಾ. ದಯಾನಂದರ ಕತೆಯನ್ನು ಚಿತ್ರಕತೆ ರೂಪಕ್ಕೆ ತಂದಿದ್ದು ಖುದ್ದು ರಾಜ್ ಬಿ ಶೆಟ್ಟಿ. ಆ ಚಿತ್ರಕತೆಯನ್ನಿಟ್ಟುಕೊಂಡು ಬಾಸಿಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ತಂಡ ಕಡಿಮೆ ದಿನದಲ್ಲಿ, ಕಡಿಮೆ ಬಜೆಟ್‌ನಲ್ಲಿ ಸಿನಿಮಾ ಮಾಡುವುದಕ್ಕೆ ಸಿದ್ಧಹಸ್ತಕು. ಈ ಸಿನಿಮಾವನ್ನು ಕೂಡ ಕಡಿಮೆ ಬಜೆಟ್‌ನಲ್ಲಿ ರೂಪಿಸಿದ್ದಾರೆ. ಹೆಚ್ಚು ಸದ್ದು ಮಾಡದೆ ಮಂಗಳೂರಿನ ಆಸುಪಾಸಲ್ಲೇ ಈ ಸಿನಿಮಾ ರೂಪಿಸಿರುವುದು ಸಿನಿಮಾದ ವಿಶೇಷ.

ಬರವಣಿಗೆ ಕುರಿತಾಗಿ ತುಂಬಾ ಶ್ರದ್ಧೆ ತೋರಿಸುವ ರಾಜ್ ಬಿ ಶೆಟ್ಟಿ ಅನವಶ್ಯಕವಾಗಿ ಎಲ್ಲಿಯೂ ಮಾತನಾಡುವುದಿಲ್ಲ. ಸಿನಿಮಾ ಬಿಡುಗಡೆಗೆ ಬಂದಾಗ ಎಲ್ಲಿಯೂ ಮಾತನಾಡುವುದಕ್ಕೆ ಹಿಂಜರಿಯುವುದಿಲ್ಲ. ಸಿನಿಮಾವನ್ನು ಅಪಾರವಾಗಿ ಪ್ರೀತಿಸುವ ಅವರು ಇತ್ತೀಚೆಗೆ ಅನೇಕ ಕಡೆಗಳಲ್ಲಿ ಮಾತನಾಡಿದ್ದಾರೆ. ಅಲ್ಲಿ ಮಾತನಾಡಿದ ಅವರ ಕೆಲವು ಮಾತುಗಳು ವೈರಲ್ ಆಗುತ್ತಿವೆ. 

1. ಸಿನಿಮಾ ರಂಗದಲ್ಲಿ ಬರಹಗಾರರಿಗೆ ಮನ್ನಣೆ ಕೊಡುವುದಿಲ್ಲ. ಸರಿಯಾದ ಸಂಭಾವನೆ ನೀಡುವುದಿಲ್ಲ. ಒಂದು ವೇಳೆ ಸರಿಯಾದ ಸಂಭಾವನೆ ಮತ್ತು ಗೌರವ ನೀಡಿದರೆ ಒಳ್ಲೆಯ ಸಿನಿಮಾಗಳು ಬರುತ್ತವೆ. ಬರವಣಿಗೆಯನ್ನೇ ನಂಬಿಕೊಂಡ ಬರಹಗಾಗರರಿಗೆ ಸೂಕ್ತವಾದ ಸಂಭಾವನೆಯನ್ನು ನೀಡಬೇಕು.

Toby: ರಾಜ್ ಬಿ ಶೆಟ್ಟಿ ಮುಂದಿನ ಚಿತ್ರ 'ಟೋಬಿ', ನಟನೆ ಜೊತೆಗೆ ನಿರ್ದೇಶನ

2. ನನ್ನ ಸಿನಿಮಾ ಸಿದ್ಧವಾದ ಮೇಲೆ ನಾನು ಅದನ್ನು ನೋಡುವುದಿಲ್ಲ. ಸಿನಿಮಾದ ಪ್ರೀಮಿಯರ್ ಪ್ರದರ್ಶನ ಶುರುವಾದ ಕೂಡಲೇ ನಾನು ಹೊರಗೆ ಬರುತ್ತೇನೆ. ನಾನು ಆ ಸಿನಿಮಾವನ್ನು ಅಲ್ಲಿಗೆ ಬಿಟ್ಟು ಬಿಡುತ್ತೇನೆ. ಒಂದು ವೇಳೆ ನಾನು ಅದನ್ನು ಹಿಡಿದುಕೊಂಡರೆ ಹೊಸತಿಗೆ ಹೋಗಲು ಸಾಧ್ಯವಿಲ್ಲ. ಆಯಾ ಸಿನಿಮಾದ ಪಾತ್ರವನ್ನು ಅಲ್ಲಿಯೇ ಬಿಡಬೇಕು. ಆಗ ಮಾತ್ರ ನಮ್ಮಲ್ಲಿ ಹೊಸತು ಹುಟ್ಟುತ್ತದೆ. ಹೊಸತು ಹುಟ್ಟುವ ಪ್ರಕ್ರಿಯೆ ಕಡೆ ಹೋಗುವುದು ನನಗೆ ಇಷ್ಟ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಂಡನ ಜಾಕೆಟ್ ಕದ್ದ ದೀಪಿಕಾ ಪಡುಕೋಣೆ.. ಅಂಥ ಪರಿಸ್ಥಿತಿಗೆ ಬಂದು ತಲುಪಿದ್ರಾ ಬಾಲಿವುಡ್ ಸ್ಟಾರ್ ನಟಿ?
Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!