ಕಾಂತಾರದ Varaha Roopam ಹಾಡಿಗೆ ಕಾನೂನು ತೊಡಕು, ಕೋಝಿಕ್ಕೋಡ್‌ ಕೋರ್ಟ್‌ನಿಂದ ತಡೆಯಾಜ್ಞೆ!

By Santosh Naik  |  First Published Oct 28, 2022, 9:53 PM IST

ಕಾಂತಾರ ಚಿತ್ರದ ಕ್ಲೈಮಾಕ್ಸ್‌ನಲ್ಲಿ ಬರುವ ವರಾಹ ರೂಪಂ ಹಾಡಿಗೆ ಕಾನೂನು ತೊಡಕು ಎದುರಾಗಿದೆ. ಕೇರಳದ ತೈಕುಡಂ ಬಿಡ್ಜ್‌ ಬ್ಯಾಂಡ್‌ ಈ ಕುರಿತಾಗಿ ಕೋರ್ಟ್‌ ಮೆಟ್ಟಿಲೇರಿತ್ತು. ಶುಕ್ರವಾರ ಇದರ ವಿಚಾರಣೆ ನಡೆಸಿದ ಕೋಝಿಕ್ಕೋಡ್‌ ಕೋರ್ಟ್‌ ಈ ಹಾಡಿನ ಬಳಕೆಗೆ ತಡೆಯಾಜ್ಞೆ ನೀಡಿದೆ.
 


ಕೋಝಿಕ್ಕೋಡ್‌ (ಅ. 28): ಒಂದು ತಿಂಗಳ ಹಿಂದೆ ಬಿಡಗಡೆಯಾಗಿ ದೇಶಾದ್ಯಂತ ದೊಡ್ಡ ಮಟ್ಟದ ಯಶಸ್ಸು ಸಂಪಾದಿಸಿರುವ ರಿಷಬ್‌ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರಕ್ಕೆ ಕಾನೂನು ತೊಡಕು ಎದುರಾಗಿದೆ. ಚಿತ್ರದದಲ್ಲಿ ಬಳಕೆ ಮಾಡಲಾಗಿರುವ ವರಾಹ ರೂಪಂ ಹಾಡಿನ ಸಂಗೀತ ನಮ್ಮ ಸೃಷ್ಟಿ ಅದನ್ನು ಅನುಮತಿಯಿಲ್ಲದೆ ಬಳಸಿಕೊಳ್ಳಲಾಗಿದೆ ಎಂದು ತೈಕುಡಂ ಬ್ರಿಡ್ಜ್‌ ಬ್ಯಾಂಡ್‌ ಕೋಝಿಕ್ಕೋಡ್‌ ಕೋರ್ಟ್‌ನ ಮೆಟ್ಟಿಲೇರಿತ್ತು. ಈ ಕುರಿತಾಗಿ ಶುಕ್ರವಾರ ವಿಚಾರಣೆ ಮಾಡಿದ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಮ್ಯೂಸಿಕ್‌ ಆಪ್‌ಗಳಲ್ಲಿ ಈ ಹಾಡನ್ನು ಪ್ಲೇ ಮಾಡದಂತೆ ಸೂಚನೆ ನೀಡಿದ್ದು, ತೈಕ್ಕುಡಂ ಬ್ರಿಡ್ಜ್‌ನ ಅನುಮತಿಯಿಲ್ಲದೆ ಚಿತ್ರದಲ್ಲಿ "ವರಾಹ ರೂಪಂ" ಹಾಡನ್ನು ಪ್ಲೇ ಮಾಡುವಂತಿಲ್ಲ ಎಂದು ತಡೆಯಾಜ್ಞೆ ನೀಡಿದೆ. ಇದೇ ವಿಷಯವನ್ನು ತೈಕುಡಂ ಬ್ರಿಡ್ಜ್‌ ಬ್ಯಾಂಡ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ಚಲನಚಿತ್ರದಲ್ಲಿ ಬಳಸಲಾದ ಹಾಡು ತಮ್ಮ "ನವರಸಂ" ಹಾಡಿನ ಭಾಗಗಳನ್ನು ನೇರವಾಗಿ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿ ಬ್ಯಾಂಡ್ ಸಲ್ಲಿಸಿದ ಔಪಚಾರಿಕ ದೂರಿನ ನಂತರ ಈ ಬೆಳವಣಿಗೆ ಸಂಭವಿಸಿದೆ.

Tap to resize

Latest Videos

ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಈ ವಿಚಾರವನ್ನು ಬರೆದುಕೊಂಡಿದ್ದ ತೈಕುಡಂ ಬ್ರಿಡ್ಜ್‌ ಬ್ಯಾಂಡ್‌, "ತೈಕ್ಕುಡಂ ಬ್ರಿಡ್ಜ್‌ ಯಾವುದೇ ರೀತಿಯಲ್ಲಿ "ಕಾಂತಾರ" ಚಿತ್ರದೊಂದಿಗೆ ಸಂಯೋಜಿತವಾಗಿಲ್ಲ ಎಂದು ನಮ್ಮ ಕೇಳುಗರಿಗೆ ತಿಳಿಯಬೇಕೆಂದು ನಾವು ಬಯಸುತ್ತೇವೆ. ನಮ್ಮ ಐಪಿ "ನವರಸಂ" ಮತ್ತು "ವರಾಹ ರೂಪಂ" ನಡುವಿನ ಅನಿವಾರ್ಯ ಹೋಲಿಕೆಗಳು ಪರಿಭಾಷೆಯಲ್ಲಿ ಆದ್ದರಿಂದ ಆಡಿಯೊ ಹಕ್ಕುಸ್ವಾಮ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ" ಎಂದು ಬರೆದುಕೊಂಡಿತ್ತು. ಆಪಾದಿತ ಹಕ್ಕುಸ್ವಾಮ್ಯ ಉಲ್ಲಂಘನೆಯ ಬಗ್ಗೆ ಪ್ರಚಾರ ಮಾಡುವಂತೆ ಬ್ಯಾಂಡ್ ತನ್ನ ಬೆಂಬಲಿಗರಲ್ಲಿ ಮನವಿ ಮಾಡಿಕೊಂಡಿತ್ತು.

"ನಮ್ಮ ದೃಷ್ಟಿಕೋನದಿಂದ, "ಪ್ರೇರಿತ" ಮತ್ತು "ಕೃತಿಚೌರ್ಯ" ನಡುವಿನ ಗೆರೆಯು ವಿಭಿನ್ನವಾಗಿದೆ ಮತ್ತು ನಿರ್ವಿವಾದವಾಗಿದೆ ಮತ್ತು ಆದ್ದರಿಂದ ನಾವು ಇದಕ್ಕೆ ಕಾರಣವಾದ ಕ್ರಿಯೇಟಿವ್‌ ಟೀಮ್‌ ವಿರುದ್ಧ ಕಾನೂನು ಕ್ರಮವನ್ನು ಬಯಸುತ್ತೇವೆ. ವಿಷಯ ಮತ್ತು ಹಾಡಿನ ಮೇಲೆ ನಮ್ಮ ಹಕ್ಕುಗಳಿಗೆ ಯಾವುದೇ ಅಂಗೀಕಾರ ನೀಡಲಾಗಿಲ್ಲ. ಚಲನಚಿತ್ರದ ಸೃಜನಾತ್ಮಕ ತಂಡದಿಂದ ಮೂಲ ಕೃತಿಯಾಗಿ ಪ್ರಚಾರ ಮಾಡಲಾಗಿದೆ" ಎಂದು ಅವರ ಪೋಸ್ಟ್‌ನಲ್ಲಿ ವಿವರಿಸಲಾಗಿದೆ.

'ವರಾಹ ರೂಪಂ' ಸಾಂಗ್ ಟ್ಯೂನ್ ಮಲಯಾಳಂ ಕಾಪಿ?: ಸಂಗೀತ ನಿರ್ದೇಶಕರು ಹೇಳಿದ್ದೇನು?

ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿದ್ದು, ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ತೈಕ್ಕುಡಂ ಬ್ರಿಡ್ಜ್ ಕಾಪಿ ಎಂದು ಹೇಳಿಕೊಂಡಿರುವ ಹಾಡಿಗೆ ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

ಕಾಂತಾರದ ಪಂಜುರ್ಲಿ ದೈವದ ದೃಶ್ಯ ರೀಲ್ಸ್ ಮಾಡಿ ಹುಚ್ಚಾಟ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಕೋಝಿಕ್ಕೋಡ್‌ ಕೋರ್ಟ್‌, ಚಿತ್ರದ ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ಅಮೇಜಾನ್‌, ಯೂಟ್ಯೂಬ್‌, ಸ್ಫೋಟಿಫಿ, ವಿಂಕ್‌ ಮ್ಯೂಸಿಕ್‌, ಜಿಯೋ ಸಾವನ್‌ ಹಾಗೂ ಇತರ ಮ್ಯೂಸಿಕ್‌ ಆಪ್‌ಗಳ ವೇದಿಕೆಗಳಿಗೆ ವರಾಹ ರೂಪಂ ಹಾಡನ್ನು ಪ್ಲೇ ಮಾಡದಂತೆ ತಡೆಯಾಜ್ಞೆ ನೀಡಿದೆ. ಇದನ್ನು ಪ್ಲೇ ಮಾಡುವುದಾದರೆ ಅದಕ್ಕೆ ತೈಕುಡಂ ಬ್ರಿಡ್ಜ್‌ನ ಅನುಮತಿ ಬೇಕು ಎಂದು ಕೋರ್ಟ್‌ ತಿಳಿಸಿದೆ. ತೈಕುಡಂ ಬ್ರಿಡ್ಜ್‌ ಬ್ಯಾಂಡ್‌, ಸುಪ್ರೀಂ ಕೋರ್ಟ್‌ ಮ್ಯೂಸಿಕ್‌ ಅಟಾರ್ನಿ ಸತೀಶ್‌ ಮೂರ್ತಿ ಅವರಿಂದ ತಡೆಯಾಜ್ಞೆ ಅರ್ಜಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಿತ್ತು ಎಂದು ಬ್ಯಾಂಡ್‌ ಸೋಷಿಯಲ್‌ ಮೀಡಿಯಾ ವೇದಿಕೆಯಲ್ಲಿ ಬರೆದುಕೊಂಡಿದೆ.

click me!