‘ಕೋಟಿಗೊಬ್ಬ 3’ ಯಾವಾಗ ರಿಲೀಸ್? ಏನಂತಾರೆ ಕಿಚ್ಚ ಸುದೀಪ್?

By Web DeskFirst Published Dec 12, 2018, 11:47 AM IST
Highlights

ಟೀಸರ್ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದ ‘ಕೋಟಿಗೊಬ್ಬ 3’ ಚಿತ್ರದ ಕತೆ ಏನಾಯಿತು ಎಂಬ ಪ್ರಶ್ನೆ ಸುದೀಪ್ ಅಭಿಮಾನಿಗಳದ್ದು. ಆ ಪ್ರಶ್ನೆಗೆ ಇಲ್ಲಿದೆ ಉತ್ತರ | ಕ್ಲೈಮ್ಯಾಕ್ಸ್ ಶೂಟಿಂಗ್‌ಗೆ ಬ್ಯಾಂಕಾಕ್ ತೆರಳಲು ಚಿತ್ರತಂಡ ಸಿದ್ಧತೆ

ಬೆಂಗಳೂರು (ಡಿ. 12): ಕಿಚ್ಚ ಸುದೀಪ್ ನಟನೆಯಲ್ಲಿ ಎರಡು ದೊಡ್ಡ ಸಿನಿಮಾಗಳು ಒಟ್ಟಿಗೆ ಸೆಟ್ಟೇರಿತ್ತು. ಹೊಸ ನಿರ್ದೇಶಕ ಶಿವ ಕಾರ್ತಿಕ್ ನಿರ್ದೇಶನದಲ್ಲಿ ‘ಕೋಟಿಗೊಬ್ಬ 3’ ಹಾಗೂ ಕೃಷ್ಣ ನಿರ್ದೇಶನದಲ್ಲಿ ‘ಪೈಲ್ವಾನ್’. ಆದರೆ, ಈಗ ‘ಪೈಲ್ವಾನ್’ ಮಾತ್ರ ಶೂಟಿಂಗ್ ಸೆಟ್‌ನಲ್ಲಿದೆ.

ಅದೇ ಚಿತ್ರದ್ದೇ ಹೊಸ ಹೊಸ ಲುಕ್ ಗಳು ಬಿಡುಗಡೆಯಾಗುತ್ತಿವೆ. ಆದರೆ ‘ಕೋಟಿಗೊಬ್ಬ 3’ ಸುದ್ದಿ ಇಲ್ಲ. ಆ ಚಿತ್ರ ಸಿನಿಮಾ ಏನಾಯಿತು? ಅದರ ಚಿತ್ರೀಕರಣ ಎಲ್ಲಿವರೆಗೂ ಬಂತು? ಇಷ್ಟಕ್ಕೂ ಕೋಟಿಗೊಬ್ಬ 3 ಚಾಲ್ತಿಯಲ್ಲಿದೆಯೇ ಎನ್ನುವಂತಹ ಪ್ರಶ್ನೆಗಳು ಸುದೀಪ್ ಅವರ ಅಭಿಮಾನಿಗಳಲ್ಲಿ ಚರ್ಚೆಯಾಗುತ್ತಿವೆ.

ಎರಡೂ ಚಿತ್ರಗಳನ್ನು ಸಮಾನವಾಗಿಯೇ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದ ಸುದೀಪ್ ಅವರಿಗೆ ಈ ಎರಡೂ ಚಿತ್ರಗಳ ಜತೆಗೆ ಬೇರೆ ಬೇರೆ ಸಿನಿಮಾಗಳ ಚಿತ್ರೀಕರಣ ಕೂಡ ಇತ್ತು. ಹೀಗಾಗಿ ಎರಡು ಚಿತ್ರಗಳ ಪೈಕಿ ಒಂದಕ್ಕೆ ಗಮನ ಕೊಟ್ಟಿದ್ದಾರೆ ಸುದೀಪ್. ಹಾಗಾದರೆ ‘ಕೋಟಿಗೊಬ್ಬ 3’ ಚಿತ್ರದ ಕತೆ ಏನು ಎನ್ನುವ ಅವರ ಅಭಿಮಾನಿಗಳಿಗೆ ಇಲ್ಲಿದೆ ಸಂತಸದ ಸುದ್ದಿ.

ನಲವತ್ತು ದಿನ ಚಿತ್ರೀಕರಣ:

ಕೋಟಿಗೊಬ್ಬ 3 ಚಿತ್ರದ ಮೊದಲ ಹಂತದ ಚಿತ್ರೀಕರಣ ಒಂದೇ ಹಂತದಲ್ಲಿ ೪೦ ದಿನಗಳ ಕಾಲ ಸರ್ಬಿಯಾ ದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ ಶೂಟಿಂಗ್ ಮಾಡಿರುವ ಭಾಗಗಳನ್ನು ಎಡಿಟಿಂಗ್ ಕೂಡ
ಮಾಡಲಾಗಿದೆ. ಅಲ್ಲಿನ ಶೂಟಿಂಗ್ ದೃಶ್ಯಗಳನ್ನೇ ಇಟ್ಟುಕೊಂಡು ರೂಪಿಸಿದ, ಸುದೀಪ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾದ ‘ಕೋಟಿಗೊಬ್ಬ ೩’ ಚಿತ್ರದ ಟೀಸರ್‌ಗೆ ಯೂಟ್ಯೂಬ್‌ನಲ್ಲಿ ಅದ್ಭುತವಾದ ರೆಸ್ಪಾನ್ಸ್ ಬಂದಿತ್ತು.

ಕೋಟಿಗೊಬ್ಬನ ಮುಂದಿನ ಶೂಟಿಂಗ್ ಯಾವಾಗ?‘:

ಟೀಸರ್ ಮೂಲಕವೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಮೂಡಿಸಿದ್ದ ನಂತರ ತಣ್ಣಗಾಗಿದ್ದು ಯಾಕೆಂಬುದು ಗೊತ್ತಿಲ್ಲ. ಆದರೆ, ವಿದೇಶದಲ್ಲೇ 40 ದಿನ ಚಿತ್ರೀಕರಣ ಮಾಡಿಕೊಂಡು ಬಂದ ‘ಕೋಟಿಗೊಬ್ಬ 3’ ಈಗಾಗಲೇ ಶೇ.೬೦ ಭಾಗ ಚಿತ್ರೀಕರಣವನ್ನೇ ಮುಗಿಸಿದೆ. ಈಗ ಸದ್ದಿಲ್ಲದೆ ಎರಡನೇ ಹಂತಕ್ಕೆ ಭರ್ಜರಿ ತಯಾರಿ ಮಾಡಿಕೊಂಡಿದೆ. ಸಂಕ್ರಾಂತಿ ೧೪ರ ನಂತರ ಕಿಚ್ಚನ ಚಿತ್ರದ ಶೂಟಿಂಗ್‌ಗೆ ಚಾಲನೆ ನೀಡಲಾಗುವುದು. ಕೇವಲ 50 ದಿನ ಮಾತ್ರ ಚಿತ್ರೀಕರಣ ಬಾಕಿ ಉಳಿದುಕೊಂಡಿದೆ.

ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಬ್ಯಾಂಕಾಕ್‌ನಲ್ಲಿ ನಡೆಯಲಿದೆ. ಆ ನಂತರ ಬೆಂಗಳೂರಿನಲ್ಲಿ ಉಳಿದ ಪೂರ್ತಿ ಶೂಟಿಂಗ್ ಮಾಡಲಾವುದು. ಜನವರಿ ತಿಂಗಳಲ್ಲಿ ಚಿತ್ರೀಕರಣ ಸೇರಿದಂತೆ ಎಲ್ಲ ಕೆಲಸಗಳನ್ನು ಮುಗಿಸಿಕೊಳ್ಳುವ ಪ್ಲಾನ್ ಚಿತ್ರತಂಡದ್ದು. 

ಡಬ್ಬಿಂಗ್ ಹಕ್ಕುಗಳು 9 ಕೋಟಿಗೆ ಮಾರಾಟ!

ಈಗಾಗಲೇ ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ನೋಡಿಯೇ ‘ಕೋಟಿಗೊಬ್ಬ ೩’ ಚಿತ್ರದ ಡಬ್ಬಿಂಗ್ ರೈಟ್ಸ್ ಕೋಟಿಗಳ ಲೆಕ್ಕದಲ್ಲಿ ಸದ್ದು ಮಾಡುತ್ತಿದೆ. ಈಗ ಬಂದಿರುವ ಮಾಹಿತಿಯಂತೆ ಬಾಂಬೆ ಮೂಲದ ಕಂಪನಿಯೊಂದು ಬರೋಬ್ಬರಿ ೯ ಕೋಟಿಗೆ ಡಬ್ಬಿಂಗ್ ಹಕ್ಕುಗಳನ್ನು ಕೇಳಿದೆ ಎನ್ನಲಾಗುತ್ತಿದೆ.

ಆದರೆ, ಚಿತ್ರದ ಎರಡನೇ ಹಂತದ ಚಿತ್ರೀಕರಣದ ವರೆಗೂ ಕಾಯುತ್ತಿರುವ ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ‘ಕೋಟಿಗೊಬ್ಬ 3’ ಚಿತ್ರದಿಂದಲೇ 10 ಕೋಟಿ ಡಬ್ಬಿಂಗ್ ರೈಟ್ಸ್‌ನಿಂದಲೇ ಬರಲಿದೆ ಎನ್ನುವ ಭರವಸೆ ಇದೆ. ಸುದೀಪ್ ಅವರಿಗೆ ಬೇರೆ ಭಾಷೆಯಲ್ಲೂ ಅಭಿಮಾನಿಗಳು ಇರುವ ಕಾರಣ ಅವರ ಚಿತ್ರಕ್ಕೆ ಡಬ್ಬಿಂಗ್ ಬೇಡಿಕೆ ಹೆಚ್ಚಿದೆ. 

click me!