
‘ರುಸ್ತುಂ’ ಚಿತ್ರ ಚಿತ್ರೀಕರಣದ ನಡುವೆಯೇ ಅವರು ಕಾಲಿವುಡ್‌ನಲ್ಲಿ ‘ಕೆ 13’ ಹೆಸರಿನ ಚಿತ್ರವೊಂದರಲ್ಲಿ ಅಭಿನಯಿಸಿದ್ದು, ಫೆಬ್ರವರಿ ತಿಂಗಳಲ್ಲಿ ಅದು ತೆರೆಗೆ ಬರುವುದು ಗ್ಯಾರಂಟಿ. ಭರತ್ ನೀಲಕಂಠನ್ ನಿರ್ದೇಶನದ ಚಿತ್ರದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಕರುಣಾ ನಿಧಿ ಮೊಮ್ಮಗ ಅರುಳ್ ನಿಧಿ ನಾಯಕರಾಗಿ ಅಭಿನಯಿಸಿದ್ದು, ಅವರಿಗೆ ನಾಯಕಿ ಆಗಿ ಸಾಥ್ ನೀಡಿರುವುದು ಶ್ರದ್ಧಾ ಶ್ರೀನಾಥ್.
ಎಸ್.ಪಿ. ಸಿನಿಮಾಸ್ ಮೂಲಕ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಶ್ರದ್ಧಾ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ‘ ಕಳೆದ ವರ್ಷದ ಆರಂಭದಲ್ಲೇ ಒಪ್ಪಿಕೊಂಡ ಸಿನಿಮಾವಿದು. ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಕಥಾ ಹಂದರದ ಚಿತ್ರ. ನನ್ನ ಪಾತ್ರವೂ ಕೂಡ ವಿಶೇಷವಾಗಿದೆ’ ಎನ್ನುತ್ತಾರೆ ನಟಿ ಶ್ರದ್ಧಾ ಶ್ರೀನಾಥ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.