
ಬೆಂಗಳೂರು (ಜ. 02): ಹೊಸ ವರ್ಷವನ್ನು ಸಂಭ್ರಮದೊಂದಿಗೆ ಆಹ್ವಾನಿಸಲು ಎಲ್ಲೆಲ್ಲೂ ಸಂಭ್ರಮವೇ ಮನೆ ಮಾಡಿರುತ್ತೆ. ವರ್ಷದ ಮೊದಲ ದಿನವನ್ನು ಇಷ್ಟದ ವ್ಯಕ್ತಿಗಳು, ಇಷ್ಟದ ಜಾಗದಲ್ಲಿ ಇಷ್ಟಪಟ್ಟ ಹಾಗೆ ಆಚರಿಸಿಕೊಳ್ಳಬೇಕು ಎನ್ನುವ ಕನಸು ಸಾಕಷ್ಟು ಜನರದ್ದು. 2018 ರ ಮುಕ್ತಾಯ, 2019 ರ ಆರಂಭಕ್ಕೆ ನಮ್ಮ ಬಾಲಿವುಡ್ ಬೆಡಗಿಯರೂ ಇದೇ ರೀತಿ ಸಾಕಷ್ಟು ತಯಾರಿ ಮಾಡಿಕೊಂಡು ದೇಶ ವಿದೇಶಗಳಲ್ಲಿ ಮೋಜು, ಮಜಾ, ಮಸ್ತಿ ಮಾಡಿದ್ದಾರೆ. ಜೊತೆಗೆ ಮರೆಯದೇ ಒಂದಷ್ಟು ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಕೆಲವು ಬೆಸ್ಟ್ ಇಲ್ಲಿವೆ.
ಸ್ವಿಡ್ಜರ್‌ಲ್ಯಾಂಡ್‌ನಲ್ಲಿ ಪತಿ ನಿಕ್ ಜೋನ್ಸ್ ಜೊತೆ ನ್ಯೂ ಇಯರ್ ಸೆಲಬ್ರೇಟ್ ಮಾಡಿದ ಪಿಗ್ಗಿ
ಕ್ರಿಸ್ಟಲ್ ಡಿಸೋಜಾ ಹಾಗೂ ಸ್ನೇಹಿತೆ ಗೋವಾ ಬೀಚ್ ಬಳಿ ಕಂಡು ಬಂದಿದ್ದು ಹೀಗೆ
ಸ್ನೇಹಿತರ ಜೊತೆ ಪಾರ್ಟಿಯಲ್ಲಿ ಸಂಭ್ರಮಿಸಿದ ರಣಬೀರ್ ಕಪೂರ್-ಅಲಿಯಾ ಭಟ್
ಐಶ್ವರ್ಯಾ ರೈ -ಅಭಿಷೇಕ್ ಹೊಸ ವರ್ಷ ಆಚರಿಸಿಕೊಂಡಿದ್ದು ಹೀಗೆ
ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಜೊತೆ ಹೊಸ ವರ್ಷ ಸೆಲಬ್ರೇಟ್ ಮಾಡಿದ್ದು ಹೀಗೆ
ಆಸ್ಟ್ರೇಲಿಯಾದಲ್ಲಿ ಹೊಸ ವರ್ಷ ಸೆಲಬ್ರೇಟ್ ಮಾಡಿದ ವಿರುಷ್ಕಾ ಜೋಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.