
ಬೆಂಗಳೂರು(ಫೆ.26): ಎಂಟಿವಿ ರೋಡೀಸ್ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ. ಭಯಂಕರ ಕಷ್ಟಕರ ಟಾಸ್ಕ್‌ಗಳಿರುವ, ಟಾಸ್ಕ್ ಮಾಡದಿದ್ದರೆ ಸಕತ್ತಾಗಿ ಬೈಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಸೂಪರ್‌ಹಿಟ್ ಶೋ ಇದು. ಇದರಲ್ಲಿ ಭಾಗವಹಿಸಬೇಕು ಅಂತ ಅದೆಷ್ಟೋ ಜನ ಕನಸು ಕಂಡಿರುತ್ತಾರೆ. ಇಂಟರೆಸ್ಟಿಂಗ್ ಅಂದರೆ ಹಾಗೆ ಕನಸು ಕಂಡಿರುವವರಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ನಾಯಕಿ ಸಂಯುಕ್ತ ಹೆಗ್ಡೆ ಕೂಡ ಒಬ್ಬರು. ಉಳಿದವರೆಲ್ಲರ ಕನಸು ನನಸಾಗುತ್ತದೋ ಇಲ್ವೋ ಗೊತ್ತಿಲ್ಲ. ಆದರೆ ಸಂಯುಕ್ತ ಹೆಗ್ಡೆ ಕನಸು ನನಸಾಗಿ ಬಿಟ್ಟಿದೆ. 2017ರ ಎಂಟಿವಿ ರೋಡೀಸ್ ರಿಯಾಲಿಟಿ ಶೋದಲ್ಲಿ ಸಂಯುಕ್ತ ಭಾಗವಹಿಸಲಿದ್ದಾರೆ.
‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಯಾವುದಕ್ಕೂ ತಲೆಕೆಡಿಸಿಕೊಳ್ಳದ, ಏನು ಮಾಡುವುದಕ್ಕೂ ರೆಡಿಯಾಗುವ ತರ್ಲೆ ಹುಡುಗಿಯ ಪಾತ್ರವನ್ನು ನಿರ್ವಹಿಸಿದ ಸಂಯುಕ್ತ ನಿಜಜೀವನದಲ್ಲೂ ಹಾಗೇ ಇದ್ದಾರಂತೆ. ಅವರಿಗೆ ಅಡ್ವೆಂಚರ್ ಅಂದ್ರೆ ಇಷ್ಟ. ಟ್ರಾವೆಲಿಂಗ್ ಅಂದ್ರೆ ಪ್ರೀತಿ. ಮೊದಲಿಂದ್ಲೂ ರೋಡೀಸ್ ಬಗ್ಗೆ ಆಸಕ್ತಿ ತೋರಿಸುತ್ತಿದ್ದ ಸಂಯುಕ್ತ ಈ ಸಲ ಪುಣೆಯಲ್ಲಿ ನಡೆದ ಆಡಿಷನ್‌ನಲ್ಲಿ ಭಾಗವಹಿಸಿದ್ದಾರೆ. ರೋಡೀಸ್ ಆಡಿಷನ್ ಪಾಸಾಗೋದು ಅಂದ್ರೆ ಅದೊಂದು ದೊಡ್ಡ ಸಾಧನೆ. ಕಾರ್ಯಕ್ರಮದ ಜಡ್ಜ್‌ಗಳು ಕಷ್ಟಕರ ಟಾಸ್ಕ್‌ಗಳನ್ನು ಕೊಡುತ್ತಾರೆ.
ಈ ಬಗ್ಗೆ ಸಂಯುಕ್ತಾ ಹೇಳಿದ್ದಿಷ್ಟು- ‘ಈ ಸಲ ರಣ್ ವಿಜಯ್ ಸಿಂಗ್, ನೇಹಾ ದೂಫಿಯಾ, ಪ್ರಿನ್ಸ್ ನರುಲ, ಹರ್ಭಜನ್ ಸಿಂಗ್ ಮತ್ತು ಕರಣ್ ಕುಂದ್ರಾ ಆಡಿಷನ್ ಮಾಡುವುದಕ್ಕೆ ಕೂತಿದ್ದರು. ನನಗೆ ಡಾನ್ಸ್ ಮಾಡಿಸಿದರು. ಆಮೇಲೆ ಪುಶಪ್ ತೆಗೆಸಿದರು. ಕಡೆಗೆ ಜಿರಳೆ ಹಿಡಿದುಕೊಳ್ಳಲು ಹೇಳಿದರು. ನಾನು ಅದಕ್ಕೆಲ್ಲಾ ಮೆಂಟಲೀ ಪ್ರಿಪೇರ್ ಆಗಿಯೋ ಹೋಗಿದ್ದು. ಗೆಲ್ಲುವ ಆಸೆ ಇದೆ. ಇನ್ನು ನಾಲ್ಕೈದು ದಿನದಲ್ಲಿ ಶೂಟಿಂಗ್ ಶುರುವಾಗತ್ತೆ. ಫೆ.25ರಂದು ನನ್ನ ಆಡಿಷನ್ ಪ್ರಸಾರವಾಗಲಿದೆ.’
ಅಂದಹಾಗೆ ಕರ್ನಾಟಕದಿಂದ ರೋಡೀಸ್‌ನಲ್ಲಿ ಭಾಗವಹಿಸುತ್ತಿರುವುದು ಸಂಯುಕ್ತ ಒಬ್ಬರೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.