
ಮುಂಬೈ(ಫೆ.25): ಬಾಲಿವುಡ್'ನ ಬಬ್ಲಿ ಹುಡುಗಿ ಎಂದೇ ಖ್ಯಾತಿ ಪಡೆದಿದ್ದ ನಟಿ ಆಯೆಷಾ ಟಾಕಿಯಾ ಇದ್ದಕ್ಕಿದ್ದಂತೆ ಸುದ್ದಿಯಾಗಿದ್ದಾಳೆ. ತನ್ನ ನಗು ಹಾಗೂ ಕ್ಯೂಟ್'ನೆಸ್'ಗೆ ಫೇಮಸ್ ಆದ ಈಕೆ ಇತ್ತೀಚೆಗೆ ಮುಂಬೈನಲ್ಲಿ ರೆಸ್ಟೋರೆಂಟ್ ಒಂದರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆದರೆ ಈ ವೇಳೆ ಕಂಡು ಬಂದ ಈಕೆಯ ಲುಕ್ ಮಾತ್ರ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣವೇನು ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ
ವಾಸ್ತವವಾಗಿ ಅಲ್ಲಿ ಕ್ಲಿಕ್ಕಿಸಿದ ಫೋಟೋಗಳಲ್ಲಿ ಆಯೆಷಾ ತುಂಬಾ ವಿಭಿನ್ನವಾಗಿ ಕಾಣಿಸುತ್ತಿದ್ದು, ಅವರು ತುಟಿಗೆ ಮಾಡಿಸಿಕೊಂಡ ಪ್ಲಾಸ್ಟಿಕ್ ಸರ್ಜರಿ ಪ್ರತಿಯೊಬ್ಬರಿಗೂ ಗೋಚರಿಸುತ್ತದೆ. ಈ ಸಮಾರಂಭಕ್ಕೆ ತನ್ನ ಪತಿ ಫರ್ಹಾನ್ ಆಜ್ಮಿಯೊಂದಿಗೆ ಬಂದಿದ್ದ ಆಯೆಷಾಳ ಗುರುತು ಹಿಡಿಯಲೂ ಕಷ್ಟವಾಗಿತ್ತಂತೆ. ಇನ್ನು ಇದೇ ವಿಚಾರವಾಗಿ ಟ್ವಿಟರ್'ನಲ್ಲೂ ಈಕೆಯ ಕಾಲೆಳೆಲಾಗಿದೆ.
ಬಾಲಿವುಡ್'ನ ಈ ಪ್ರಖ್ಯಾತ ನಟಿ 2004ರಲ್ಲಿ ತೆರೆಕಂಡ ಸಿನಿಮಾ 'ಟಾರ್ಜನ್ ದ ವಂಡರ್ ಕಾರ್' ಮೂಲಕ ಬಾಲಿವುಡ್'ನಲ್ಲಿ ತನ್ನ ವೃತ್ತಿ ಆರಂಭಿಸಿದ್ದರು. ಇನ್ನು ಬಾಲಿವುಡ್'ನ ತನ್ನ ಚೊಚ್ಚಲ ಸಿನಿಮಾಕ್ಕೆ ಬೆಸ್ಟ್ ಡೆಬ್ಯೂ'ನ ಫಿಲ್ಮ್ ಫೇರ್ ಪ್ರಶಸ್ತಿಯನ್ನೂ ಪಡೆದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.