ಕಿರೀಟಿ ತೊಡೆಯ ಮೇಲೆ ಹತ್ತಿ ಕುಣಿದ ಶ್ರೀಲೀಲಾ.. ಜೂನಿಯರ್ ಜೋಡಿಯಾಗಿ ವೈರಲ್ ವಯ್ಯಾರಿ ಥಕಧಿಮಿತ..!

Published : Jul 05, 2025, 03:11 PM IST
Sreeleela Kireeti

ಸಾರಾಂಶ

ಸಿನಿಮಾಗೆ ಖ್ಯಾತ ಆ್ಯಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೆನ್ಸ್ ಸಾಹಸ ಸಂಯೋಜಿಸಿದ್ದಾರೆ. ದಕ್ಷಿಣ ಚಿತ್ರರಂಗದ ರಾಕ್‌ ಸ್ಟಾರ್‌ ದೇವಿಶ್ರೀ ಪ್ರಸಾದ್‌ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾೆ ಮುಹೂರ್ತಕ್ಕೆ ನಿರ್ದೇಶಕ ರಾಜಮೌಳಿ ಆಗಮಿಸಿ ಶುಭಾಶಯ ತಿಳಿಸಿದ್ದರು.

ಕಿರೀಟಿ (Kireeti) ಚಿತ್ರರಂಗದಲ್ಲಿ ಛಾಪೂ ಮೂಡಿಸಲು ಸಜ್ಜಾಗಿದ್ದು, ಚೊಚ್ಚಲ ಚಿತ್ರ ಜೂನಿಯರ್‌ (Junior) ಟೀಸರ್‌ ಈಗಾಗಲೇ ಭಾರೀ ಸದ್ದು ಮಾಡಿದೆ. ಇದೀಗ ಜೂನಿಯರ್‌ ಸಿನಿಮಾದ ಎರಡನೇ ಹಾಡು ಇಂದು ಅನಾವರಣಗೊಂಡಿದೆ. ಆದಿತ್ಯ ಮ್ಯೂಸಿಕ್‌ ಕನ್ನಡದಲ್ಲಿ ವೈರಲ್‌ ವಯ್ಯಾರಿ ಎಂಬ ಡ್ಯಾನ್ಸಿಂಗ್‌ ನಂಬರ್‌ ಅನಾವರಣಗೊಂಡಿದೆ.

ವೈರಲ್‌ ವಯ್ಯಾರಿ ಹಾಡಿಗೆ ಪವನ್‌ ಭಟ್‌ ಸಾಹಿತ್ಯ ಬರೆದಿದ್ದು, ಹರಿಪ್ರಿಯಾ ಮತ್ತು ದೀಪಕ್‌ ಬ್ಲೂ ಧ್ವನಿಯಾಗಿದ್ದಾರೆ. ದೇವಿಶ್ರೀ ಪ್ರಸಾದ್‌ ಮ್ಯೂಸಿಕ್‌ ಕಿಕ್‌ಗೆ ಕಿರೀಟಿ ಶ್ರೀಲೀಲಾ ಬೊಂಬಾಟ್‌ ಆಗಿ ಕುಣಿದಿದ್ದಾರೆ. ಇವರಿಬ್ಬರ ಎನರ್ಜಿ ಹೈಲೆವೆಲ್‌ನಲ್ಲಿದೆ.

ಈ ಬಹುನಿರೀಕ್ಷಿತ ಜೂನಿಯರ್‌ ಸಿನಿಮಾದಲ್ಲಿ ಕಿರೀಟಿ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ಜೆನಿಲಿಯಾ ಡಿಸೋಜಾ, ಶ್ರೀಲೀಲಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದ 'ಮಾಯಾಬಜಾರ್' ಸಿನಿಮಾದ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಾಹುಬಲಿ, ಆರ್‌ಆರ್‌ಆರ್ ಅಂತಹ ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಕ್ಯಾಮರಾ ವರ್ಕ್ ಮಾಡಿರುವ ಕೆ.ಕೆ.ಸೆಂಥಿಲ್ ಕುಮಾರ್ ಅವರ ಕ್ಯಾಮರಾ ಕೈಚಳಕ ಈ ಚಿತ್ರದಲ್ಲಿದೆ.

ಸಿನಿಮಾಗೆ ಖ್ಯಾತ ಆ್ಯಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೆನ್ಸ್ ಸಾಹಸ ಸಂಯೋಜಿಸಿದ್ದಾರೆ. ದಕ್ಷಿಣ ಚಿತ್ರರಂಗದ ರಾಕ್‌ ಸ್ಟಾರ್‌ ದೇವಿಶ್ರೀ ಪ್ರಸಾದ್‌ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಪ್ರಾರಂಭವಾದಾಗ ನಿರ್ದೇಶಕ ರಾಜಮೌಳಿ ಮುಹೂರ್ತಕ್ಕೆ ಆಗಮಿಸಿ ಶುಭಾಶಯ ತಿಳಿಸಿದ್ದರು. ಜುಲೈ 18ಕ್ಕೆ ಜೂನಿಯರ್‌ ಸಿನಿಮಾ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಟಾಲಿವುಡ್ ಸೇರಿದಂತೆ, ಅದು ಯಾವುದೇ ಚಿತ್ರವಿರಲಿ, ಅದರಲ್ಲಿ ನಟಿ ಶ್ರೀಲೀಲಾ ಡಾನ್ಸ್ ಇದೆ ಅಂದ್ರೆ ಅದಕ್ಕೊಮದು ಹೆಚ್ಚಿನ ಕ್ರೇಜ್ ಸೃಷ್ಟಿಆಗುವುದು ಖಂಡಿತ ಎನ್ನಬಹುದು. ಇಲ್ಲಾಗಿದ್ದೂ ಅದೇ.. ಕಿರೀಟಿ ಸಿನಿಮಾ ಎಂಬ ಅಪಾರ ನಿರೀಕ್ಷೆ ನಡುವೆ ಇದೀಗ ಶ್ರೀಲೀಲಾ ಡಾನ್ಸ್ ಕೂಡ ಈ ಚಿತ್ರದ ತೂಕ ಹೆಚ್ಚಿಸಿದೆ. ಈ ತಿಂಗಳು, ಅಂದರೆ ಜುಲೈ 17ಕ್ಕೆ ಸಿನಿಮಾ 3 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ರಿಲೀಸ್ ಬಳಿಕ ಚಿತ್ರದ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲಿದೆ.

ಹಾಡು ಇಲ್ಲಿ ನೋಡಬಹುದು: 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ