ಆಡಂ ಕನ್ನಡ ಕಲಿತರೇ ನಾನೇ ಮದುವೆಯಾಗುತ್ತೇನೆ ಅಂದ್ರು ಸೋನು ಪಾಟೀಲ್!

By Web DeskFirst Published Nov 11, 2018, 12:30 PM IST
Highlights

ನಿನ್ನೆ ನಡೆದ ವಾರದ ಮಾತುಕತೆಯಲ್ಲಿ ಮದುವೆ ಪ್ರಸ್ತಾಪವೊಂದು ಸದ್ದಿಲ್ಲದೆ ಸುದ್ದಿಯಾಗಿದೆ. ಮನೆಯೊಳಗಿರುವ ನಟಿಯೊಬ್ಬಳು ತಾನೇ ನೀಡಿದ ಹೇಳಿಕೆಯಿಂದ ಪೇಚಿಗೀಡಾಗಿದ್ದಾರೆ. ಬಿಗ್ ಮನೆಯಲ್ಲಿ ಸಹ ಸ್ಪರ್ಧಿಗೆ ಕೊಟ್ಟ ಮಾತಿನಂತೆ ಮದುವೆಯಾಗುತ್ತಾರಾ ಎಂಬ ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಆ ನಟಿ ಯಾರು? ಜೋಡಿ ಯಾವುದು ಅಂತೀರಾ? ಇಲ್ಲಿದೆ ವಿವರ

ಬಿಗ್ ಬಾಸ್ ಆರಂಭವಾಗಿ ಮೂರು ವಾರಗಳಾಗಿವೆ. ಸ್ಪರ್ಧಿಗಳ ನಡುವೆ ಜಗಳ, ಕೋಪ, ನಗು, ಗೆಳೆತನ ಸಾಮಾನ್ಯವಾಗಿದೆ. ಒಂದೆಡೆ ಅಕ್ಷತಾ ಹಾಗೂ ರಾಕೇಶ್ ಬಹಳ ಆತ್ಮೀಯವಾಗಿದ್ದರೆ, ಮತ್ತೊಂದೆಡೆ ಆ್ಯಂಡ್ರೂ ಹಾಗೂ ಆಡಂ ಪಾಷಾ ನಡುವಿನ ಗೆಳೆತನವೂ ಗಟ್ಟಿಯಾಗುತ್ತಿದೆ. ಸೋನು ಪಾಟೀಲ್‌ಗೆ ನವೀನ್ ಮೇಲಿರುವ ಕಾಳಜಿಯೂ ಎಲ್ಲರ ಕಣ್ಣಿಗೆ ಬಿದ್ದಿದೆ. ಆದರೆ ಇವೆಲ್ಲದರ ನಡುವೆ ನಿನ್ನೆ ನಡೆದ ವಾರದ ಮಾತುಕತೆಯಲ್ಲಿ ಮದುವೆ ಪ್ರಸ್ತಾಪವೊಂದು ಸದ್ದಿಲ್ಲದೆ ಸುದ್ದಿಯಾಗಿದೆ. ಮನೆಯೊಳಗಿರುವ ನಟಿಯೊಬ್ಬಳು ತಾನೇ ನೀಡಿದ ಹೇಳಿಕೆಯಿಂದ ಪೇಚಿಗೀಡಾಗಿದ್ದಾರೆ. ಬಿಗ್ ಮನೆಯಲ್ಲಿ ಸಹ ಸ್ಪರ್ಧಿಗೆ ಕೊಟ್ಟ ಮಾತಿನಂತೆ ಈ ಕನ್ನಡತಿ ಮದುವೆಯಾಗುತ್ತಾರಾ ಎಂಬ ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಆ ನಟಿ ಯಾರು? ಜೋಡಿ ಯಾವುದು ಅಂತೀರಾ? ಇಲ್ಲಿದೆ ವಿವರ

ಬಿಗ್ ಮನೆಗೆ ಎಂಟ್ರಿ ಪಡೆದಿರುವವರಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು, ಡ್ರ್ಯಾಗನ್ ಕ್ವೀನ್ ಪ್ರಸಿದ್ಧಿಯ ಆಡಂ ಪಾಷಾ. ಬ್ಯಾಂಕಾಕ್‌ನಲ್ಲಿದ್ದ ಇವರು ಹೆಚ್ಚಾಗಿ ಇಂಗ್ಲೀಷ್ ಭಾಷೆಯಲ್ಲೇ ಮಾತನಾಡುತ್ತಾರೆ. ಇದೇ ಕಾರಣದಿಂದ ಬಿಗ್ ಬಾಸ್ ಆರಂಭವಾಗಿ ಮನೆಯೊಳಗೆ ಕಳುಹಿಸಿಕೊಡುವ ಸಮಯದಲ್ಲೂ ಕಿಚ್ಚ ಸುದೀಪ್ ಕನ್ನಡದಲ್ಲೇ ಮಾತನಾಡಲು ಪ್ರಯತ್ನಿಸಿ ಎಂಬ ಸಲಹೆ ನೀಡಿದ್ದರು. ಸುದೀಪ್ ಮಾತಿಗೆ ಸೈ ಎಂದಿದ್ದ ಆಡಂ ಬಿಗ್ ಮನೆಯೊಳಗೆ ಗ್ರ್ಯಾಂಡ್ ಎಂಟ್ರಿ ಪಡೆದಿದ್ದರು. ಈ ವೇಳೆ ಅವರನ್ನು ಸ್ವಾಗತಿಸಿದ್ದು ಪಕ್ಕಾ ಉತ್ತರ ಕನ್ನಡ ಭಾಷೆಯಲ್ಲೇ ಮಾತನಾಡುವ ಹುಡುಗಿ ಸೋನು ಪಾಟೀಲ್. ಅಂದು ಆಡಂ ಪಾಷಾರನ್ನು ನೋಡಿದ ಖುಷಿಯಲ್ಲೋ ಅಥವಾ ಕನ್ನಡದ ಮೇಲಿನ ಅಭಿಮಾನವೋ ಗೊತ್ತಿಲ್ಲ ಆದರೆ, ಡ್ರ್ಯಾಗನ್ ಕ್ವೀನ್ ಇಂಗ್ಲೀಷ್‌ನಲ್ಲೇ ಮಾತನಾಡಿದ್ದನ್ನು ನೋಡಿದ ಸೋನು ಮಾತ್ರ ನೀವು ಬಿಗ್ ಬಾಸ್ ಮನೆಯಿಂದ ಹೊರಗೋಗುವ ಮೊದಲು ಸಂಪೂರ್ಣವಾಗಿ ಕನ್ನಡದಲ್ಲೇ ಮಾತನಾಡಿದರೆ ನಾನೇ ನಿಮ್ಮನ್ನು ಮದುವೆಯಾಗುತ್ತೇನೆ ಎಂದಿದ್ದರು.

ಅತ್ತ ಸೋನು ಪಾಟೀಲ್‌ರವರು ಮದುವೆಯಾಗುತ್ತೇನೆಂದ ಹೇಳಿದ್ದ ಪ್ರಭಾವವೋ, ಬಿಗ್ ಬಾಸ್ ಆದೇಶ ಪಾಲಿಸಬೇಕೆರಂಬ ಇಚ್ಛೆಯಿಂದಲೋ ಗೊತ್ತಿಲ್ಲ ಆದರೆ ಆಡಂ ಪಾಷಾ ಮಾತ್ರ ಕನ್ನಡ ಕಲಿಯಲು ಬಹಳಷ್ಟು ಆಸಕ್ತಿ ತೋರಿದ್ದಾರೆ. ಗೆಳೆಯ ಆ್ಯಂಡ್ರೂ ಹಾಗು ಇತರ ಸ್ಪರ್ಧಿಗಳು ಅವರಿಗೆ ಕನ್ನಡ ಮಾತನಾಡಲು ಬಹಳಷ್ಟು ಸಹಾಯ ಮಾಡುತ್ತಾರೆ. ಮೂರು ವಾರದಲ್ಲಿ ಕನ್ನಡ ಬಳಕೆ ಬಹಳಷ್ಟು ಹೆಚ್ಚಾಗಿದ್ದು, ಇದೇ ರೀತಿ ಮುಂದುವರೆದರೆ ಬಿಗ್ ಬಾಸ್ ಮುಗಿಯುವ ಮೊದಲು ಸಂಪೂರ್ಣವಾಗಿ ಕನ್ನಡದಲ್ಲೇ ಮಾತನಾಡುತ್ತಾರೆ ಎಂಬುವುದರಲ್ಲಿ ಅನುಮಾನವಿಲ್ಲ. ಆದರೀಗ ಈ ವಿಚಾರ ಸೋನು ಪಾಟೀಲ್‌ರನ್ನು ಮಾತ್ರ ಭಾರೀ ಚಿಂತೆಗೀಡು ಮಾಡಿದೆ.

ಆರಂಭದ ದಿನ ತಾನೇನು ಹೇಳಿದ್ದೆ ಎಂದು ಮರೆತಿದ್ದ ಸೋನುಗೆ ಮೂರನೇ ವಾರಾಂತ್ಯದಲ್ಲಿ ನಡೆದ ವಾರದ ಮಾತುಕತೆಯಲ್ಲಿ ಕಿಚ್ಚ ಸುದೀಪ್ ಎಲ್ಲವನ್ನೂ ನೆನಪಿಸಿದ್ದಾರೆ. ಸುದೀಪ್‌ರವರ ಈ ಮಾತು ಕೇಳಿದ ಸೋನು ಒಂದು ಬಾರಿ ಶಾಕ್ ಆಗಿದ್ದಾರೆ. ತಾನು ಹೀಗಂದಿಲ್ಲ ಆಡಂ ನನ್ನನ್ನು ಹೆಂಡ್ತಿ ಎನ್ನುತ್ತಾರೆ ಎಂದು ಮರುತ್ತರ ನೀಡಿದ್ದಾರೆ. ಆದರೆ ಕಿಚ್ಚ ಮಾತ್ರ ಘಟನೆ ಸಹಿತವಾಗಿ ವಿವರಿಸಿದ್ದಾರೆ. ಈ ವೇಳೆ ಆಡಂ ಕೂಡಾ ನಾನು ಕನ್ನಡ ಕಲಿಯುತ್ತೇನೆ ಎಂದು ಮತ್ತಷ್ಟು ಆತ್ಮ ವಿಶ್ವಾಸದಿಂದ ಹೇಳಿದ್ದಾರೆ. ಇದಕ್ಕೆ ತಕ್ಕಂತೆ ಕಿಚ್ಚ ಮದುವೆ ಮಾಡಿಸುವ ಜವಾಬ್ದಾರಿಯನ್ನು ಗೆಳೆಯ ಆ್ಯಂಡ್ರೂ ಹಾಗೂ ಮನೆಯವರಿಗೆ ವಹಿಸಿದ್ದಾರೆ. ಇವೆಲ್ಲವೂ ’ಕನ್ನಡತಿ’ ಸೋನುಗೆ ಆಘಾತವುಂಟು ಮಾಡಿದೆ.

ಈಗಾಗಲೇ ನವೀನ್‌ರನ್ನು ಕಂಡರೆ ನಾಚಿ ನೀರಾಗುತ್ತಿದ್ದ ಸೋನು ತನ್ನ ಮಾತಿನಿಂದ ತಾನೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಅದೇನಿದ್ದರೂ ಬಿಗ್ ಬಾಸ್ ಮುಗಿಯುವುದರೊಳಗೆ ಆಡಂ ಕನ್ನಡ ಕಲಿತರೆ ಸೋನು ತಾನು ಕೊಟ್ಟ ಮಾತಿನಂತೆ ಅವರನ್ನು ಮದುವೆಯಾಗುತ್ತಾರಾ ಎಂಬುವುದೇ ಸದ್ಯಕ್ಕಿರುವ ಕುತೂಹಲ.

click me!