
'ಲಕ್ಷ್ಮೀ ಬಾರಮ್ಮ...' ಧಾರವಾಹಿ ಮೂಲಕ ಅಳು, ಮುಗ್ಧ ಗ್ರಾಮ್ಯ ಭಾಷಯಿಂದಲೇ ಮನೆ, ಮನದಲ್ಲಿ ಸ್ಥಾನ ಪಡೆದವರು ಚಿನ್ನು ಆಲಿಯಾಸ್ ಕವಿತಾ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದರೂ ಗ್ರಾಮ್ಯ ಭಾಷ್ಯದಿಂದಲೇ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದವರು.
'ಕೋಟಿ ಕೊಟ್ಟರೂ ಬಿಗ್‌ಬಾಸ್ ಮನೆಗೆ ಹೋಗೋಲ್ಲ..' ಎನ್ನುತ್ತಿದ್ದ ಕವಿತಾ ಹುಟ್ಟಿ ಬೆಳೆದಿದ್ದು ಬೆಂಗಳೂರಿನ ಮಲ್ಲೇಶ್ವರಂನಲ್ಲಿ. 'ಬಿಗ್ ಬಾಸ್ ಮನೆಯನ್ನು ಅನುಭವಿಸಬೇಕು. ತನ್ನನ್ನು ತಾನು ಅರ್ಥ ಮಾಡಿಕೊಳ್ಳಲು ಇದಕ್ಕಿಂತ ಮತ್ತೊಂದು ಒಳ್ಳೆಯ ಅವಕಾಶ ಸಿಗುವುದಿಲ್ಲ,' ಎಂದು ಹೇಳಿಕೊಂಡಿದ್ದಾರೆ ಕವಿತಾ. ಮಲ್ಲೇಶ್ವರಂ ಹುಡುಗಿ ಎಂದೇ ಹೇಳಿಕೊಳ್ಳುವ ಕವಿತಾಗೆ ಅದೇ ಒಂದು ಪುಟ್ಟ ಪ್ರಪಂಚವಂತೆ. ಬೇರೆ ಸ್ಥಳಗಳಿಗೂ ಭೇಟಿ ನೀಡಿದ್ದು ಕಡಿಮೆಯಂತೆ!
ಮೂರು ವರ್ಷಗಳ ಕಾಲ ಚಿನ್ನುವಾಗಿ ಮಿಂಚಿದ ಕವಿತಾ, ನಂತರ ತಮಿಳು ಕಿರುತೆರೆ ಲೋಕಕ್ಕೆ ಕಾಲಿಟ್ಟವರು. ಈ ನಡುವೆ 'ಶ್ರೀ ನಿವಾಸ ಕಲ್ಯಾಣ' ಚಿತ್ರದಲ್ಲಿಯೂ ನಟಿಸಿದ್ದಾರೆ.
ನೀವೇಕೆ ಬಿಗ್ ಬಾಸ್ ಮನೆಯಲ್ಲಿ 100 ದಿನಗಳ ಕಾಲ ಉಳಿಯಬೇಕೆಂದು ಕೇಳಿದರೆ, 'ನಾನು ಶಾಂತ ಜೀವಿ. ಎಲ್ಲ ಸಂದರ್ಭವನ್ನೂ ಕೂಲ್ ಆಗಿಯೇ ನಿಭಾಯಿಸುತ್ತೇನೆ. ಜಗಳ ಸೃಷ್ಟಿಯಾಗದಂತೆ ನೋಡಿಕೊಳ್ಳುವ ಸಾಮರ್ಥ್ಯವಿದೆ ನಂಗೆ,' ಎಂದಿದ್ದಾರೆ.
ಭರತನಾಟ್ಯ ಡ್ಯಾನ್ಸರ್ ಆದ ಕವಿತಾ, ಇನ್ನು ಬೇರೆ ಬೇರೆ ನ್ಯತ್ಯ ಪ್ರಕಾರವನ್ನು ಕಲಿಯಬೇಕೆಂಬ ಆಸೆ ಹೊಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.