
ದೀಪಾವಳಿಯಂದು ವಿಭಿನ್ನ ಟಾಸ್ಕ್ ಮೂಲಕ ಎಲ್ಲರನ್ನೂ ಪಾಲ್ಗೊಳ್ಳುವಂತೆ ಮಾಡಿದ ಬಿಗ್ ಬಾಸ್ ಕೊನೆಗೂ ಎಲ್ಲರಿಗೂ ಖುಷಿ ಕೊಡುವಂಥ ಕೆಲಸ ಮಾಡಿಸಿದ್ದಾರೆ. ಕೇವಲ ಸ್ವೀಟ್, ಟಾಸ್ಕ್ ಹಾಗೂ ಮನೆಯವರ ಪ್ರೀತಿ ಮಾತ್ರವಲ್ಲ, ಸ್ಪರ್ಧಿಗಳ ಮನೆ ಮಂದಿಯೂ ಈ ಟಾಸ್ಕ್‌ನಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು ವಿಶೇಷ.
ಹೇಗಪ್ಪಾ ಅಂತ ಯೋಚನೆ ಮಾಡುತ್ತಿದ್ದೀರಾ? ಗಿಫ್ಟ್ ಮೂಲಕ. ಮನೆಯ ಸದಸ್ಯರಿಗೆ ಕೌಟುಂಬಿಕರು ಕಳುಹಿಸಿದ ಪತ್ರದ ಮೂಲಕ ಸ್ಪರ್ಧಿಗಳನ್ನು ಖುಷಪಡಿಸಲಾಗಿದೆ. ಮನೆಯಿಂದ ಬಂದ ಪತ್ರವನ್ನು ಓದಲಾಗುತ್ತದೆ. ಅದನ್ನು ಯಾರಿಗೆ ಬರೆದಿದ್ದಾರೆಂಬುವುದನ್ನು ಗುರುತಿಸಿದಾಗ ಗಿಫ್ಟ್ ಕಳುಹಿಸಲಾಗಿತ್ತು. ಹಾಗೆ ಬಂದ ಪತ್ರಗಳಲ್ಲಿ ಒಂದು ಮಾತ್ರ ವಿಭಿನ್ನವಾಗಿತ್ತು..! ಯಾರು? ಯಾರಿಗೆ ಬರೆದಿದ್ದು, ಓದಿ ಇಂಟರೆಸ್ಟಿಂಗ್ ಕಹಾನಿ.
ಯಾರಿಗಪ್ಪ ಇದು ಎಂದು ಓದಿ ನೋಡಿದರೆ ಮನೆ ಮಂದಿಗೆಲ್ಲಾ ಫುಲ್ ಕನ್ಫ್ಯೂಸೋ ಕನ್ಫ್ಸ್ಯೂಸ್. ಕವನದ ರೂಪದಲ್ಲಿದ್ದ ಪತ್ರ, ಸ್ನೇಹಾ-ನಯನ್‌ಗಿರಬಹುದಾ ಎಂಬ ಅನುಮಾನವಿತ್ತು. ಅದರಲ್ಲಿಯೂ ಶ್ರಾವಣ ಮಾಸವನ್ನು ಉಲ್ಲೇಖಿಸಿದ್ದರಿಂದ ಊಹಾಪೋಹಗಳು ಎಲ್ಲೆಲ್ಲೋ ಹೋಗಿತ್ತು. ಆದರೆ, ರವಿ ಮುಂದೆ ಹೋದರು.
ಹೌದು, ಅದು ಅವರಿಗೇ ಬಂದ ಪತ್ರ. ಓಪನ್ ಮಾಡಿದರೆ ಮಿಕ್ಕಿ ಮೌಸ್ ಗಿಫ್ಟ್! ಹೌದು. ಇದು ಅವರಿಗೆ ಮನೆಯಿಂದ ಹೆಂಡತಿ ಕಳುಹಿಸಿದ ಗಿಫ್ಟ್! ಅದೂ ಅವರ ಪತ್ನಿ ಬಾಡಿ ಬ್ಯುಲ್ಡರ್ ರವಿ ಅವರನ್ನು ಮದುವೆಯಾದಾಗ ತವರಿನಿಂದ ತಂದಿದ್ದ ಒಂದೇ ಒಂದು ವಸ್ತು! ಹುಟ್ಟುವ ಮಗಳಿಗೆಂದು ತಂದಿದ್ದು. ಒಂದು ರೀತಿ ವರದಕ್ಷಿಣೆ ಎನ್ನಬುಹುದು. ಬರೀ ಕಷ್ಟದಲ್ಲಿಯೇ ಬದುಕುತ್ತಿದ್ದ ರವಿ ಜೀವನದಲ್ಲಿ ಬಂದ ಅದೃಷ್ಟ ದೇವತೆ ಅವರ ಪತ್ನಿ. ಈ ಗೊಂಬೆ ಇವರಿಬ್ಬರೊಂದಿಗೆ ಸದಾ ಇರುತ್ತತ್ತಂತೆ.ಬಿಗ್‌ಬಾಸ್ ಮನೆಗೂ ಕಾಲಿಟ್ಟ ಈ ಪ್ರೀತಿಯ ಉಡುಗೊರೆಯನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ರವಿ ಹೊಣೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.