ವಸಿಷ್ಠ ಸಿಂಹ ಈಗ ವಿಲನ್ ಟ್ರ್ಯಾಕ್ ದಾಟಿ ಹೀರೋಗಿರಿಗೂ ಇಳಿದಿದ್ದಾರೆ. ಮೂರ್ನಾಲ್ಕು ಚಿತ್ರಗಳಲ್ಲಿ ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಸದ್ದಿಲ್ಲದೆ ಹೀರೋ ಆಗಿ ಟಾಲಿವುಡ್ಗೂ ಎಂಟ್ರಿ ಆಗಿದ್ದಾರೆ. ಅದರ ಟೈಟಲ್ ಇನ್ನೂ ಫೈನಲ್ ಆಗಿಲ್ಲ. ಇಂಥಾ ಕಲಾವಿದನಿಗೆ ಈಗ ದೂರದ ಪಂಜಾಬ್ನಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅದಕ್ಕೆ ಕಾರಣ‘ಕೆಜಿಎಫ್’ ಚಿತ್ರ ಎನ್ನುತ್ತಾರೆ ವಸಿಷ್ಠ.
‘ಕೆಲವು ದಿನಗಳ ಹಿಂದೆ ನಾಗತಿಹಳ್ಳಿ ಸರ್ ಸಿನಿಮಾ ಶೂಟಿಂಗ್‌ಗೆ ಪಂಜಾಬ್ನ ಅಮೃತ್‌ಸರ್‌ಗೆ ಹೋಗಿದ್ದೆವು. ಅಲ್ಲಿನ ಜನ ನನ್ನನ್ನು ನೋಡಿ, ಕುತೂಹಲದಿಂದ ಮುತ್ತಿಕೊಂಡರು. ಅವರೆಲ್ಲ ಯಾಕೆ ಬಂದರು ಅಂತ ಗಾಬರಿಯಾದೆ. ಆಮೇಲೆ ಗೊತ್ತಾಗಿದ್ದು ಅವರು ಕೆಜಿಎಫ್ ಸಿನಿಮಾದ ಟ್ರೇಲರ್ ನೋಡಿದವರು. ಸಿನಿಮಾ ಬರುವ ಮುನ್ನ ಟ್ರೇಲರ್ ನೋಡಿಯೇ ನನ್ನನ್ನು ಗುರುತಿಸಿ ಸೆಲ್ಫಿ ತೆಗೆದುಕೊಂಡಿದ್ದು ರೋಚಕ ಎನಿಸಿತು. ಅದೇ ಅನುಭವ ಹೈದರಾಬಾದ್‌ನಲ್ಲೂ ಆಯ್ತು.
ತೆಲುಗು ಸಿನಿಮಾ ಶೂಟಿಂಗ್‌ಗೆ ಹೋದಾಗ ಸಾಕಷ್ಟು ಜನಮಾತನಾಡಿಸಿ ಸೆಲ್ಫಿ ತೆಗೆಸಿಕೊಂಡರು. ಇದೆಲ್ಲ ಸಾಧ್ಯವಾಗಿದ್ದು ಕೆಜಿಎಫ್ ಮೂಲಕ’ ಎನ್ನುತ್ತಾ ಕೆಜಿಎಫ್ ಪಾತ್ರದ ಮೂಲಕ ಆದ ಬೆಳವಣಿಗೆಳನ್ನು ವಿವರಿಸುತ್ತಾರೆ ವಸಿಷ್ಠ ಸಿಂಹ.
ಕರ್ನಾಟಕ ಜನತೆಗೆ ನಟ ವಶಿಷ್ಠ ಸಿಂಹ ಸಂದೇಶ
ಕನ್ನಡದಲ್ಲಿ ‘ಕಾಲಚಕ್ರ’ ವಸಿಷ್ಠ ಹೀರೋ ಆದ ಮೊದಲ ಸಿನಿಮಾ. ಅದು ಚಿತ್ರೀಕರಣ ಮುಗಿಸಿದೆ. ‘ತಲ್ವಾರ್ ಪೇಟೆ’ ಶೀಘ್ರವೇ ಶೂಟಿಂಗ್ ಶುರುವಾಗಲಿದೆ. ಇನ್ನು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಅದ್ಭುತವಾಗಿ ಬಂದಿದೆ ಎನ್ನುವ ಖುಷಿ ಅವರದ್ದು.