ನಟನಾಗಿದ್ದಾಗ ಕದ್ದು ನೋಡಿ ಸಿನಿಮಾ ಮೇಕಿಂಗ್ ಕಲಿತೆ: ಸುಜಯ್ ಶಾಸ್ತ್ರಿ

By Web DeskFirst Published Aug 5, 2019, 9:41 AM IST
Highlights

ಸಗಣಿ ಪಿಂಟೋ ಎಂದೇ ಖ್ಯಾತರಾಗಿರುವ ಸುಜಯ್ ಶಾಸ್ತ್ರಿ ನಿರ್ದೇಶಕರಾಗಿ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಎನ್ನುವ ಚಿತ್ರವನ್ನು ರೂಪಿಸಿದ್ದಾರೆ. ಅವರ ಮೊದಲ ನಿರ್ದೇಶಕದ ಚಿತ್ರದ ಟ್ರೇಲರ್ ಸದ್ದು ಮಾಡುತ್ತಿದೆ. ತಮಾಷೆಯನ್ನೇ ಪ್ರಧಾನವಾಗಿಟ್ಟುಕೊಂಡು ಬಂದಿರುವ ನಿರ್ದೇಶಕ ಸುಜಯ್ ಶಾಸ್ತ್ರಿ ಮಾತುಗಳು ಇಲ್ಲಿವೆ

ಅರ್ ಕೇಶವಮೂರ್ತಿ

ಸಗಣಿ ಪಿಂಟೋ ಆಚೆಗೆ ಸುಜಯ್ ಶಾಸ್ತ್ರಿ ಯಾರು?

ರಂಗಭೂಮಿ ಕಲಾವಿದ ಆಗಿದ್ದೆ. ಹಲವಾರು ನಾಟಕಗಳಲ್ಲಿ ನಟಿಸಿದ್ದೇನೆ. ರಂಗಭೂಮಿಯ ನೆರಳಿನಿಂದ ಬಂದ ಹುಡುಗ ನಾನು. ಆ ನಂತರ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ಕಿರುತೆರೆಗೂ ಆತ್ಮೀಯ ನಾನು. ನಾನು ‘ಬೆಲ್‌ಬಾಟಂ’ ಚಿತ್ರದಲ್ಲಿ ಸಗಣಿ ಪಿಂಟೋ ಆಗುವ ಮೊದಲು ‘ಶ್ರೀನಿವಾಸ ಕಲ್ಯಾಣ’ ಚಿತ್ರದಲ್ಲಿ ಬೆಂಕಿ ಆಗಿದ್ದೆ. ಈಗ ನನ್ನದೇ ನಿರ್ದೇಶನದ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಾನಿ ಆಗಿದ್ದೇನೆ.

ನಟನಾಗಲು ಬಂದವರು ನಿರ್ದೇಶಕನಾಗಿದ್ದು ಹೇಗೆ?

ನಟನಾಗಲು ಬಂದವನು ನಿರ್ದೇಶನ, ಕತೆ ಬರೆಯುವುದು, ಒಂದು ಚಿತ್ರವನ್ನು ಮೇಕಿಂಗ್ ಮಾಡುವುದು ಹೇಗೆಂದು ಕದ್ದು ಕದ್ದು ನೋಡುತ್ತಿದ್ದೆ. ಕಿರುತೆರೆಯಲ್ಲಿದ್ದಾಗಲಂತೂ ಹೋಗಿ ನಿರ್ದೇಶಕರ ಹಿಂದೆ ನಿಲ್ಲುತ್ತಿದ್ದೆ. ಅವರು,ಹೋಗಿ ಸೀನ್ ಪೇಪರ್ ನೋಡಿಅಂದ್ರೂ ಅಲ್ಲೇ ಇರುತ್ತಿದ್ದೆ. ನಿರ್ದೇಶಕ ಶ್ರೀನಿ ನನ್ನ ಗೆಳೆಯ. ಅವರ ಎಲ್ಲ ಚಿತ್ರಗಳ ಜತೆಗೂ ನಾನಿದ್ದೆ. ಈ ಎಲ್ಲ ಅನುಭವ ನನ್ನ ನಿರ್ದೇಶಕನನ್ನಾಗಿಸಿತು. ಒಳ್ಳೆಯದನ್ನು ಕದ್ದರೆ ಒಳ್ಳೆಯದೇ ಆಗುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ. 

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡಲು ರೆಡಿಯಾಗಿದ್ದಾರೆ ರಾಜ್ ಬಿ ಶೆಟ್ಟಿ

ಈ ಚಿತ್ರದ ಕತೆ ಹೊಳೆದಿದ್ದು ಹೇಗೆ?

ಕತೆಗೆ ಮೂಲ ಪ್ರೇರಣೆ ಚಿತ್ರದ ಹೆಸರೇ ಹೇಳುವ ಗಾಧೆ ಮಾತು. ನನ್ನ ಸ್ನೇಹಿತ ಪ್ರದೀಪ್ ಒಂದು ಸಾಲಿನ ಕತೆ ಬರೆದು ಕೊಟ್ಟರು. ಅದನ್ನು ನಾನು ಕೂತು ಒಂದು ವಿಸ್ತರಿಸಿಕೊಂಡು ಕತೆ ಮಾಡಿಕೊಂಡೆ. ಹಾಗೆ ಹುಟ್ಟಿಕೊಂಡ ಕತೆ ಇದು. 

ನಿಮ್ಮ ಈ ಕತೆಗೆ ರಾಜ್ ಬಿ ಶೆಟ್ಟಿ ಸಿಗದೆ ಹೋಗಿದ್ದರೆ?

ನಿಜ ಹೇಳಬೇಕು ಅಂದರೆ ಕತೆ ಮಾಡುವಾಗ ನನ್ನನ್ನೇ ಹೀರೋ ಮಾಡಬೇಕು ಅಂತ ತಂಡ ಮಾತನಾಡಿತು. ಆಗ ಮಾತುಕತೆ ಮಾಡುವಾಗ ಕಿಶೋರ್ ಅವರು ರಾಜ್ ಬಿ ಶೆಟ್ಟಿ ಹೆಸರು ಹೇಳಿದರು. ನಮ್ಮ ಕತೆಗೂ ಅವರು ಪಕ್ಕಾ ಸೂಕ್ತ ಅನಿಸಿತು. ನಾನು ಅವರಿಗೆ ನಿರ್ದೇಶನ ಮಾಡಿದ್ದೇನೆ ಎನ್ನುವುದಕ್ಕಿಂತ ಅವರಿಂದ ತುಂಬಾ ಕಲಿತಿದ್ದೇನೆ. ಕೆಲವು ಡೈಲಾಗ್ಗಳು ಸ್ಕ್ರೀನ್ ಮೇಲೆ ವರ್ಕ್ ಆಗಲ್ಲ ಎಂದಿದ್ದು ನಿಜವಾಗಿದೆ. ಅವರ ಸಲಹೆಗಳನ್ನು ತೆಗೆದುಕೊಂಡೇ ಇಡೀ ಸಿನಿಮಾ ಮಾಡಿದ್ದೇವೆ. 

 

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಟ್ರೇಲರ್ ಹಿಟ್

'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಟ್ರೇಲರ್ ಬಿಡುಗಡೆಯಾಗಿ ಒಂದು ದಿನ ಕಳೆಯುವ ಮುನ್ನವೇ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ನಂ.೨ ಸ್ಥಾನದಲ್ಲಿದೆ. ಐದೂವರೆ ಲಕ್ಷಕ್ಕೂ ಅಧಿಕ ಜನ ಟ್ರೇಲರ್ ವೀಕ್ಷಿಸಿದ್ದಾರೆ. ಇದು ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಚಿತ್ರ ತಂಡಕ್ಕೂ ಇದೇ ಹವಾ ಸಿನಿಮಾ ತೆರೆಗೆ ಬಂದಾಗಲೂ ಮುಂದುವರಿಯುವ ವಿಶ್ವಾಸವಿದೆ. ಸಿನಿಮಾ ಇದೇ ತಿಂಗಳು
15 ರಂದು ತೆರೆ ಕಾಣಲಿದೆ.

 

 

 

click me!