
ಸದ್ಯ ಎಲ್ಲರ ಕಣ್ಣು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಮುಂದಿನ ಸಿನಿಮಾ 'ಸ್ಪಿರಿಟ್' ಮೇಲಿದೆ. ಯಾಕಂದ್ರೆ, ಮಾಸ್ ಸಿನಿಮಾಗಳಿಗೆ ಹೆಸರುವಾಸಿಯಾದ ನಿರ್ದೇಶಕ ವಂಗಾ ಮತ್ತು ನಟ ಪ್ರಭಾಸ್ ಇದೇ ಮೊದಲ ಬಾರಿಗೆ ಒಂದಾಗುತ್ತಿದ್ದಾರೆ. ಈ ಚಿತ್ರದಿಂದ ದೀಪಿಕಾ ಪಡುಕೋಣೆ ಹೊರನಡೆದು, ಅವರ ಜಾಗಕ್ಕೆ ತೃಪ್ತಿ ದಿಮ್ರಿ ಬಂದಾಗಿನಿಂದಲೂ ಸಿನಿಮಾ ಬಗ್ಗೆ ದಿನಕ್ಕೊಂದು ಹೊಸ ಸುದ್ದಿ ಹರಿದಾಡುತ್ತಲೇ ಇದೆ.
'ಸ್ಪಿರಿಟ್' ಚಿತ್ರದಲ್ಲಿ ಕತ್ರಿನಾ ಇದ್ದಾರಾ?
ಈಗೊಂದು ಹೊಸ ಸುದ್ದಿ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ. ಅದೇನೆಂದರೆ, ಈ ಚಿತ್ರದಲ್ಲಿ ಕತ್ರಿನಾ ಕೈಫ್ ಕೂಡ ನಟಿಸಲಿದ್ದಾರೆ ಅನ್ನೋದು. ಹೌದು, ನೀವು ಓದಿದ್ದು ನಿಜ. 'ಡೆಕ್ಕನ್ ಹೆರಾಲ್ಡ್' ವರದಿಯ ಪ್ರಕಾರ, ಚಿತ್ರತಂಡ ಕತ್ರಿನಾ ಕೈಫ್ ಅವರನ್ನು ಒಂದು ಪ್ರಮುಖ ಅತಿಥಿ ಪಾತ್ರಕ್ಕೆ ಪರಿಗಣಿಸುತ್ತಿದೆ. ಈ ಪಾತ್ರವು ಸಿನಿಮಾದ ಕಥೆಗೆ ದೊಡ್ಡ ತಿರುವು ನೀಡಲಿದೆಯಂತೆ. ಆದರೆ, ಈ ಬಗ್ಗೆ ಕತ್ರಿನಾ ಆಗಲಿ ಅಥವಾ ಚಿತ್ರತಂಡವಾಗಲಿ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಕತ್ರಿನಾ ಈ ಹಿಂದೆ ವೆಂಕಟೇಶ್ ಜೊತೆ 'ಮಲ್ಲೀಶ್ವರಿ' ಮತ್ತು ನಂದಮೂರಿ ಬಾಲಕೃಷ್ಣ ಜೊತೆ 'ಅಲ್ಲರಿ ಪಿಡುಗು' ಎಂಬ ತೆಲುಗು ಚಿತ್ರಗಳಲ್ಲಿ ನಟಿಸಿದ್ದರು.
ದೀಪಿಕಾ ಚಿತ್ರದಿಂದ ಹೊರನಡೆದಿದ್ದು ಯಾಕೆ?
ಕೆಲವು ವರದಿಗಳ ಪ್ರಕಾರ, ದೀಪಿಕಾ ಈ ಚಿತ್ರಕ್ಕಾಗಿ ಸುಮಾರು 25 ಕೋಟಿ ರೂಪಾಯಿ ಸಂಭಾವನೆ ಮತ್ತು ಸಿನಿಮಾದ ಲಾಭದಲ್ಲಿ ಶೇ. 10ರಷ್ಟು ಪಾಲು ಕೇಳಿದ್ದರಂತೆ. ಅಷ್ಟೇ ಅಲ್ಲ, ದಿನಕ್ಕೆ ಎಂಟು ಗಂಟೆ ಮಾತ್ರ ಕೆಲಸ ಮಾಡುವುದಾಗಿಯೂ, ದೊಡ್ಡ ಸಿಬ್ಬಂದಿ ಜೊತೆ ಪ್ರಯಾಣಿಸುವುದಾಗಿಯೂ ಷರತ್ತು ಹಾಕಿದ್ದರು ಎನ್ನಲಾಗಿದೆ. ಜೊತೆಗೆ, ತೆಲುಗು ಸಂಭಾಷಣೆಗಳಿಗೆ ಡಬ್ ಮಾಡಲು ಅವರು ಒಲವು ತೋರಿರಲಿಲ್ಲ. ಇದೇ ಕಾರಣಕ್ಕೆ ಚಿತ್ರತಂಡದ ಜೊತೆ ಭಿನ್ನಾಭಿಪ್ರಾಯ ಉಂಟಾಗಿ ಅವರು ಹೊರನಡೆದರು ಎಂದು ಹೇಳಲಾಗುತ್ತಿದೆ. ಇದಾದ ನಂತರವೇ ತೃಪ್ತಿ ದಿಮ್ರಿಯನ್ನು ಆಯ್ಕೆ ಮಾಡಲಾಯಿತು.
ಕತ್ರಿನಾ ಸದ್ಯ ತಮ್ಮ ಮಗ ವಿಹಾನ್ ಕೌಶಲ್ ಜೊತೆ ತಾಯ್ತನದ ಖುಷಿಯಲ್ಲಿದ್ದಾರೆ. ಅವರು ಸದ್ಯಕ್ಕೆ ಸಿನಿಮಾಗಳಿಂದ ದೂರ ಉಳಿದು, ವೈಯಕ್ತಿಕ ಜೀವನಕ್ಕೆ ಹೆಚ್ಚು ಸಮಯ ನೀಡುತ್ತಿದ್ದಾರೆ. ಒಂದು ವೇಳೆ 'ಸ್ಪಿರಿಟ್' ಚಿತ್ರದಲ್ಲಿ ನಟಿಸುವ ಸುದ್ದಿ ನಿಜವೇ ಆದಲ್ಲಿ, ಇದು ಅವರ ವೃತ್ತಿಜೀವನಕ್ಕೆ ಒಂದು ದೊಡ್ಡ ಕಮ್‌ಬ್ಯಾಕ್ ಆಗಲಿದೆ. ಜೊತೆಗೆ, ಅವರ ಕೆರಿಯರ್‌ನಲ್ಲಿ ಇದೊಂದು ಮಹತ್ವದ ಮೈಲಿಗಲ್ಲಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.