'ಚರ್ಚ್‌ಗೆ ಹೋಗಿ ಮದ್ವೆ ಆಗ್ಬಿಡೋಣ' ಎಂದಿದ್ದ ಸೈಫ್: ಕರೀನಾ ಬಿಚ್ಚಿಟ್ರು ಕ್ಯೂಟ್ ಪ್ರೇಮಕಥೆ

Published : Jul 26, 2026, 04:35 PM IST
Saif Kareena Love Story

ಸಾರಾಂಶ

ಬಾಲಿವುಡ್‌ನ ಕ್ಯೂಟ್ ಜೋಡಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್. ಸೈಫ್ ತನಗೆ ಮದುವೆ ಪ್ರಪೋಸ್ ಮಾಡಿದ್ದು ಹೇಗೆ ಅನ್ನೋ ಸ್ವಾರಸ್ಯಕರ ಕಥೆಯನ್ನು ಕರೀನಾ ಒಮ್ಮೆ ಹಂಚಿಕೊಂಡಿದ್ದರು. ಆ ಕ್ಯೂಟ್ ಕಥೆ ಇಲ್ಲಿದೆ.

ಬಾಲಿವುಡ್‌ನ ಪವರ್ ಕಪಲ್ ಅಂದ್ರೆ ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಜೋಡಿ ಥಟ್ಟಂತ ನೆನಪಾಗುತ್ತೆ. ಇವರಿಬ್ಬರ ಕೆಮಿಸ್ಟ್ರಿ, ಸ್ಟೈಲ್ ಮತ್ತು ಒಬ್ಬರಿಗೊಬ್ಬರು ತೋರಿಸೋ ಪ್ರೀತಿಗೆ ಲಕ್ಷಾಂತರ ಮನರಂಜನೆ ಪ್ರಿಯರಿದ್ದಾರೆ. ಈ ಜೋಡಿ ಎಲ್ಲೇ ಕಾಣಿಸಿಕೊಂಡರೂ, ಅವರ ನಡುವಿನ ಪ್ರೀತಿ ಎದ್ದು ಕಾಣುತ್ತೆ.

ಸೈಫ್ ಮತ್ತು ಕರೀನಾ ಪ್ರೀತಿ

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮತ್ತು ಸಂದರ್ಶನಗಳಲ್ಲಿ ಕರೀನಾ ಬಗ್ಗೆ ಸೈಫ್ ತೋರಿಸೋ ಕಾಳಜಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇವರಿಬ್ಬರು ಒಬ್ಬರಿಗೊಬ್ಬರು ಪರ್ಫೆಕ್ಟ್ ಜೋಡಿ ಅಂತ ಅಭಿಮಾನಿಗಳು ಯಾವಾಗಲೂ ಹೇಳ್ತಾರೆ. ಇದೇ ರೀತಿ, ಒಮ್ಮೆ ಪ್ರಿಯಾಂಕಾ ಚೋಪ್ರಾ ಜೊತೆ 'ಕಾಫಿ ವಿತ್ ಕರಣ್' ಶೋಗೆ ಬಂದಿದ್ದಾಗ, ಕರೀನಾ ತಮ್ಮ ಪ್ರಪೋಸಲ್ ಕಥೆಯನ್ನು ಹಂಚಿಕೊಂಡಿದ್ದರು.

ಸೈಫ್ ಪ್ರಪೋಸ್ ಮಾಡಿದ್ದು ಹೀಗೆ

ಹೌದು, ನೀವು ಓದಿದ್ದು ನಿಜ. ಸೈಫ್ ತನಗೆ ಪ್ರಪೋಸ್ ಮಾಡಿದ್ದರ ಬಗ್ಗೆ ಕರೀನಾ ಹೀಗೆ ಹೇಳಿದ್ದರು: "ನಾವು 'ಚಲಿಯಾ ಚಲಿಯಾ' ಹಾಡಿನ ಶೂಟಿಂಗ್ ಮಾಡ್ತಿದ್ವಿ. ಅದು ನನ್ನ ಹಾಡಾಗಿದ್ದರೂ, ಸೈಫ್ ಶೂಟಿಂಗ್‌ಗೋಸ್ಕರ ಅಲ್ಲೇ ಉಳಿದುಕೊಂಡಿದ್ದರು. ಒಂದು ದಿನ ಬೆಳಗ್ಗೆ ಎದ್ದು, ‘ಮದುವೆ ಆಗೋಣ ಬಾ. ನಾನು ನಿನ್ನನ್ನೇ ಮದುವೆ ಆಗ್ಬೇಕು ಅನ್ಕೊಂಡಿದ್ದೀನಿ. ಇಲ್ಲೇ ಒಂದು ಚರ್ಚ್‌ಗೆ ಹೋಗಿ ಮದುವೆ ಆಗಿಬಿಡೋಣ’ ಅಂದರು. ಆಗ ನಾನು, ‘ನಿಮಗೆ ಹುಚ್ಚಾ?’ ಅಂತ ಕೇಳಿದೆ. ಅದಕ್ಕೆ ಅವರು, ‘ಹೌದು, ನನಗೇನೂ ಪರವಾಗಿಲ್ಲ. ನಾನು ಮದುವೆ ಆಗ್ಬೇಕು ಅಷ್ಟೇ. ನನ್ನ ಜೀವನವನ್ನು ನಿನ್ನ ಜೊತೆ ಕಳೆಯಬೇಕು. ಇದಕ್ಕಿಂತ ಬೇರೆ ದಾರಿ ನನಗೆ ಕಾಣ್ತಿಲ್ಲ’ ಅಂದರು. ಆಗಲೇ ನನಗೆ ಅನಿಸಿದ್ದು, ಇವನೇ ಸರಿ ಅಂತ."

ಸಿನಿಮಾ ರಂಗದಲ್ಲಿ

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಕರೀನಾ ಸದ್ಯ 'ದಾಯ್ರಾ' ಅನ್ನೋ ಇನ್ವೆಸ್ಟಿಗೇಟಿವ್ ಕ್ರೈಮ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೊಂದೆಡೆ, ಸೈಫ್ ಅಲಿ ಖಾನ್ ಅವರ ಇತ್ತೀಚಿನ ಮತ್ತು ಮುಂಬರುವ ಪ್ರಮುಖ ಪ್ರಾಜೆಕ್ಟ್‌ಗಳಲ್ಲಿ 'ಹೈವಾನ್', 'ಹಮ್ ಹಿಂದೂಸ್ತಾನಿ' ಮತ್ತು 'ಕರ್ತವ್ಯ' ಸೇರಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿಯ 'ಆ ಒಂದು ಸಿನಿಮಾ' ಫ್ಲಾಪ್ ಆಗಿದ್ಯಾ? ಇಷ್ಟು ದಿನ ಮುಚ್ಚಿಟ್ಟಿದ್ದ ಗುಟ್ಟು ಈಗ ರಟ್ಟು!
SDCC 2026ನಲ್ಲಿ 'ರಾಮಾಯಣ' ಚಿತ್ರದ ಗಿಫ್ಟ್ ಬಾಕ್ಸ್ ವೈರಲ್: ಚಿನ್ನದ ಶಂಖ ನೋಡಿ ಫ್ಯಾನ್ಸ್ ಥ್ರಿಲ್