
ಬೆಂಗಳೂರು[ಆ.22]: ಪ್ರವಾಹಕ್ಕೆ ನಲುಗಿದ ಕೊಡಗು ಹಾಗೂ ಕೇರಳ ಜನತೆಯ ಸಂಕಷ್ಟಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಧಾವಿಸಿದೆ.
ಕೊಡಗಿಗೆ 20 ಲಕ್ಷ ರು. ಹಾಗೂ ಕೇರಳಕ್ಕೆ 5 ಲಕ್ಷ ರು.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದೆ. ಈ ಕುರಿತು ವಾಣಿಜ್ಯ ಮಂಡಳಿಯಲ್ಲಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಡಳಿ ಅಧ್ಯಕ್ಷ ಎ.ಚಿನ್ನೇಗೌಡ, ಸದ್ಯ ಕೊಡಗಿಗೆ 20 ಲಕ್ಷ ರು. ಹಾಗೂ ಕೇರಳಕ್ಕೆ 5 ಲಕ್ಷ ರು.ಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವು ನೀಡಲು ಚಿಂತಿಸಲಾಗಿದೆ.ಈಗಾಗಲೇ ನಟರಾದ ಶಿವರಾಜಕುಮಾರ್, ಪುನೀತ್ ರಾಜಕುಮಾರ್ ಸೇರಿದಂತೆ ಚಿತ್ರರಂಗದಿಂದ ಹಲವರು ಆರ್ಥಿಕ ನೆರವು ನೀಡಿದ್ದಾರೆ ಎಂದರು.
ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್, ವಾಣಿಜ್ಯ ಮಂಡಳಿ ಪ್ರಮುಖರಾದ ಕರಿಸುಬ್ಬು, ಕೆ.ಮಂಜು, ಬಾ.ಮಾ.ಹರೀಶ್, ಕೆ.ಎಂ.ವೀರೇಶ್
ಹಾಗೂ ನಿರ್ಮಾಪಕರಾದ ಜಯಣ್ಣ, ರಮೇಶ್ ಯಾದವ್ ಉಪಸ್ಥಿತರಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.