ಇದೇ ಮೊದಲ ಬಾರಿಗೆ ಡಬ್ಬಿಂಗ್ ಸಿನಿಮಾದ ಆಡಿಯೋ ರಿಲೀಸ್

Published : Aug 22, 2018, 10:48 AM ISTUpdated : Sep 09, 2018, 10:10 PM IST
ಇದೇ ಮೊದಲ ಬಾರಿಗೆ ಡಬ್ಬಿಂಗ್ ಸಿನಿಮಾದ ಆಡಿಯೋ ರಿಲೀಸ್

ಸಾರಾಂಶ

ಕಮಾಂಡೋ ಚಿತ್ರ ಸಕಲ ಸಿದ್ಧತೆಗಳೊಂದಿಗೆ ತೆರೆಕಾಣಲು ಸಜ್ಜಾಗಿದೆ. ಹರಿವು ಕ್ರಿಯೇಷನ್ಸ್ ತನ್ನ ಚೊಚ್ಚಲ ಕಾಣಿಕೆಯಾಗಿ ಕಮಾಂಡೋ ಎಂಬ ಡಬ್ಬಿಂಗ್ ಚಿತ್ರವನ್ನು ನಿರ್ಮಾಣ ಮಾಡಿದೆ. ಈ ಚಿತ್ರದ ಹಾಡುಗಳನ್ನು ಕನ್ನಡದ ಪ್ರತಿಭೆಗಳು ಹಾಡಿದ್ದಾರೆ.  

ಬೆಂಗಳೂರು (ಆ. 22): ಕನ್ನಡ ಸಿನಿಮಾಗಳು ಸಿನಿಮಾ ಬಿಡುಗಡೆಗೆ ಮುಂಚೆ ಟೀಸರ್ ರಿಲೀಸ್ ಮಾಡಿ, ನಂತರ ಆಡಿಯೋ ರಿಲೀಸ್ ಮಾಡುವುದನ್ನು ಕೇಳಿದ್ದೀರಿ. ಒಂದು ಸಿನಿಮಾದ ಆಡಿಯೋ ರಿಲೀಸ್ ಮಾಡುತ್ತಿದ್ದಾರೆ ಅಂದರೆ ಸದ್ಯದಲ್ಲೇ ಆ ಚಿತ್ರ ತೆರೆ ಕಾಣುತ್ತದೆ ಎಂದು ಅರ್ಥ.

ಇದೇ ಮೊದಲ ಬಾರಿಗೆ ಇದೇ ತಂತ್ರವನ್ನು ಕನ್ನಡಕ್ಕೆ ಡಬ್ ಆಗಿರುವ ಸಿನಿಮಾವೊಂದು ಬಳಸುತ್ತಿದೆ. ಹರಿವು ಕ್ರಿಯೇಷನ್ಸ್ ತಂಡ ಅಜಿತ್‌ಕುಮಾರ್ ಮತ್ತು ಕಾಜಲ್ ಅಗರ್‌ವಾಲ್ ಅಭಿನಯಜ ಕಮಾಂಡೋ ಎಂಬ ಡಬ್ಬಿಂಗ್ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಇಟ್ಟುಕೊಂಡಿದೆ. ಅಲ್ಲಿಗೆ ಡಬ್ಬಿಂಗ್ ಚಿತ್ರವೊಂದು ಕನ್ನಡದಲ್ಲೂ ತನ್ನ ಬಲವಾದ ಹೆಜ್ಜೆಗಳನ್ನು ಊರಲು ಸಿದ್ಧತೆ ನಡೆಸಿದೆ ಎನ್ನಬಹುದು. ಇಲ್ಲಿಯ ತನಕ ಅಂಥ ಪ್ರಚಾರವಿಲ್ಲದೇ, ಡಬ್ಬಿಂಗ್ ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು.

ಈಗ ಕಮಾಂಡೋ ಚಿತ್ರ ಸಕಲ ಸಿದ್ಧತೆಗಳೊಂದಿಗೆ ತೆರೆಕಾಣಲು ಸಜ್ಜಾಗಿದೆ. ಹರಿವು ಕ್ರಿಯೇಷನ್ಸ್ ತನ್ನ ಚೊಚ್ಚಲ ಕಾಣಿಕೆಯಾಗಿ ಕಮಾಂಡೋ ಎಂಬ ಡಬ್ಬಿಂಗ್ ಚಿತ್ರವನ್ನು ನಿರ್ಮಾಣ ಮಾಡಿದೆ. ಈ ಚಿತ್ರದ ಹಾಡುಗಳನ್ನು ಕನ್ನಡದ ಪ್ರತಿಭೆಗಳು ಹಾಡಿದ್ದಾರೆ. ಸೋನಿ ಮ್ಯೂಸಿಕ್ ಇಂಡಿಯಾ ಇದರ ಹಾಡುಗಳು ಹಂಚಿಕೆ ಮಾಡುತ್ತಿದೆ. ಸೋನಿ ಮ್ಯೂಸಿಕ್ ಸಂಸ್ಥೆಯ ಅಧಿಕಾರಿಗಳು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಆಹ್ವಾನ ಪತ್ರಿಕೆ ಮಾಧ್ಯಮ ಸಂಸ್ಥೆಗಳ ಕೈ ಸೇರಿದೆ.

ಇಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರೇಣುಕಾಂಬ ಸ್ಟುಡಿಯೋದಲ್ಲಿ ಆಡಿಯೋ ಕಾರ್ಯಕ್ರಮ ಏರ್ಪಾಡಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ