
ಮುಂಬೈ(ಸೆ.17): ಕಾಮಿಡಿ ನಟ ಕಪಿಲ್ ಶರ್ಮಾ ಅಪರಾಧಿಯಲ್ಲ, ಒಬ್ಬ ಉತ್ತಮ ಮನುಷ್ಯ, ಹೀಗಾಗಿ ಅವರು ವಿವಾದದಿಂದ ಹೊರಬರಲು ಸಹಾಯ ಮಾಡುವುದರಲ್ಲಿ ತಪ್ಪಿಲ್ಲ ಎಂದು ನಟ ವಿವೇಕ್ ಓಬೇರಾಯ್ ಅಭಿಪ್ರಾಯ ಪಟ್ಟಿದ್ದಾರೆ.
ಮುಂಬಯಿ ಮಹಾನಗರ ಪಾಲಿಕೆಯಲ್ಲಿ ಲಂಚದ ಬೇಡಿಕೆ ಇಟ್ಟ ಪ್ರಕರಣದ ಸಂಬಂಧ ಟ್ವೀಟ್ ಮಾಡಿ ಕಪಿಲ್ ಶರ್ಮಾ ಸಂಕಷ್ಟದಲ್ಲಿ ಸಿಲುಕಿದ್ದಾರೆ, ಇದರಿಂದ ಹೊರಬರಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಲು ಕಪಿಲ್ ಶರ್ಮಾ ವಿವೇಕ್ ಓಬೇರಾಯ್ ಅವರ ಸಹಾಯ ಕೇಳಿದ್ದಾರೆ ಎಂದು ಹೇಳಲಾಗಿದೆ.
ವಿವೇಕ್ ಓಬೇರಾಯ್ ಗಿರುವ ರಾಜಕೀಯ ಸಂಪರ್ಕ ಉಪಯೋಗಿಸಿಕೊಂಡು ಪ್ರಕರಣದಿಂದ ಹೊರಬರಲು ಕಪಿಲ್ ಶರ್ಮಾ ಓಬೇರಾಯ್ ಸಹಾಯ ಕೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.