ಸೂಪರ್'ಸ್ಟಾರ್ ರಜನಿ ಪುತ್ರಿ ದಾಂಪತ್ಯದಲ್ಲಿ ಬಿರುಕು: ಡೈವೋರ್ಸ್‌ನತ್ತ ಸೌಂದರ್ಯ-ಅಶ್ವಿನ್‌?

Published : Sep 17, 2016, 03:10 AM ISTUpdated : Apr 11, 2018, 01:12 PM IST
ಸೂಪರ್'ಸ್ಟಾರ್ ರಜನಿ ಪುತ್ರಿ ದಾಂಪತ್ಯದಲ್ಲಿ ಬಿರುಕು: ಡೈವೋರ್ಸ್‌ನತ್ತ ಸೌಂದರ್ಯ-ಅಶ್ವಿನ್‌?

ಸಾರಾಂಶ

ಚೆನ್ನೈ(ಸೆ.17): ಸೂಪರ್​ಸ್ಟಾರ್​ ರಜಿನಿಕಾಂತ್ ಪುತ್ರಿಯ ದಾಂಪತ್ಯ ಕೊನೆಗೊಳ್ಳುತ್ತಿದೆ. ಕಾಲಿವುಡ್'​ನಲ್ಲಿ ಇದೇ ಸದ್ಯದ ಹಾಟ್​ನ್ಯೂಸ್​. ತಲೈವಾ ಪುತ್ರಿಯ ದಾಂಪತ್ಯದಲ್ಲಿ ಬಿರುಕು ಮೂಡಿದ್ದಾದರೂ ಯಾಕೆ? ಇಲ್ಲಿದೆ ವಿವರ.

ತಲೈವಾ ಪುತ್ರಿಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕಾಲಿವುಡ್​'ನಲ್ಲಿ ಓಡಾಡುತ್ತಿದೆ.  ಸೂಪರ್​ ಸ್ಟಾರ್​ ರಜನಿಕಾಂತ್ ಅಭಿಮಾನಿಗಳಿಗೆ ಇದು ನಿಜಕ್ಕೂ ಶಾಕಿಂಗ್ ನ್ಯೂಸ್. 6 ವರ್ಷಗಳ ಹಿಂದೆ ಉದ್ಯಮಿ ಅಶ್ವಿನ್ ಕುಮಾರ್ ಜೊತೆ ಅದ್ದೂರಿಯಾಗಿ ವಿವಾಹವಾಗಿದ್ದ ಸೌಂದರ್ಯ ದಾಂಪತ್ಯದಲ್ಲಿ ಬಿರುಕು ಮೂಡಿದೆಯಂತೆ.

ಸೌಂದರ್ಯ ಹಾಗೂ ಅಶ್ವಿನ್​ ದಂಪತಿಗೆ ಓರ್ವ ಪುತ್ರನಿದ್ದಾನೆ. ಸದ್ಯ ಈ ದಂಪತಿ ಮದ್ಯೆ ಭಿನ್ನಾಭಿಪ್ರಾಯಗಳು ಮೂಡಿದೆಯಂತೆ. ಹೀಗಾಗಿ ಪರಸ್ಪರ ಒಪ್ಪಿಕೊಂಡೇ ಈ ಜೋಡಿ ದೂರಾಗಲು ನಿರ್ಧರಿಸಿದ್ದಾರೆ ಅನ್ನೋ ಸುದ್ದಿ  ಹರಿದಾಡುತ್ತಿದೆ. ಆದರೆ ಯಾವ ಕಾರಣಕ್ಕೆ ಡಿವೋರ್ಸ್'ಗೆ ನಿರ್ಧರಿಸಿದ್ದಾರೆ ಎನ್ನುವುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಇನ್ನು ಕಳೆದ 2 ವರ್ಷಗಳ ಹಿಂದೆ ಇದೇ ಸೌಂದರ್ಯ ತಂದೆ ರಜಿನಿಯ ಕೊಚಾಡಯನ್​ ಚಿತ್ರ ನಿರ್ದೇಶಿಸಿದ್ದರು.

ಈ ಜೋಡಿಯ ದಾಂಪತ್ಯ ಕಾಪಾಡಲು ಸಹೋದರಿ ಐಶ್ವರ್ಯ ಮತ್ತು ಧನುಷ್ ದಂಪತಿ ಹಾಗೂ ಸ್ವತಃ ರಜನಿಕಾಂತ್​ ಸಹ ಹಲವು ಸುತ್ತಿನ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲವಂತೆ. ಸದ್ಯ ಸೌಂದರ್ಯ ಪತಿ ಅಶ್ವಿನ್ ಕುಮಾರ್, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರಂತೆ. ಮತ್ತೆ ಅಶ್ವಿನ್​ ಭಾರತಕ್ಕೆ ಹಿಂತಿರುಗಿದ ಮೇಲೆ ಇಬ್ಬರು ಡಿವೋರ್ಸ್‌ ಆಗಲಿದ್ದಾರೆ ಅನ್ನೋದು ಕಾಲಿವುಡ್'​ನಿಂದ ಬಂದ ಲೇಟೆಸ್ಟ್​ ಸುದ್ದಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ದೃಷ್ಟಿಬೊಟ್ಟು' ಮೂಲಕ ಕನ್ನಡಿಗರ ಮನಗೆದ್ದ ಅರ್ಪಿತಾ ಮೋಹಿತೆ ಈಗ ತೆಲುಗು ಸೀರಿಯಲ್ ನಾಯಕಿ
ಕನ್ನಡ ಇಂಡಸ್ಟ್ರಿಗೆ ಪ್ರಾಣ ಕೊಟ್ಟರೂ ಚೆನ್ನಾಗಿ ನೋಡಿಕೊಂಡಿಲ್ಲ: ಕಣ್ಣೀರು ಹಾಕಿದ ತುಪ್ಪದ ಬೆಡಗಿ ರಾಗಿಣಿ ಹೇಳಿದ್ದೇನು?