ಕನ್ನಡದ ಹಿರಿಯ ನಟಿ ಎಸ್ ಕೆ ಪದ್ಮಾದೇವಿ ಇನ್ನಿಲ್ಲ

By Web Desk  |  First Published Sep 19, 2019, 1:50 PM IST

ಕನ್ನಡದ ಹಿರಿಯ ನಟಿ ಎಸ್ ಕೆ ಪದ್ಮಾದೇವಿ ವಿಧಿವಶ | ಕನ್ನಡದ ಮೊದಲ ವಾಕ್ಚಿತ್ರ ‘ಭಕ್ತಧ್ರುವ’ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ | 


ಕನ್ನಡ ಚಿತ್ರರಂಗದ ಹಿರಿಯ ನಟಿ, ಮೊದಲ ವಾಕ್ಚಿತ್ರ ‘ಭಕ್ತಧ್ರುವ’ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟು ಛಾಪು ಮೂಡಿಸಿದ್ದ ಎಸ್ ಕೆ ಪದ್ಮಾದೇವಿ ಇಂದು ವಿಧಿವಶರಾಗಿದ್ದಾರೆ. ಇವರಿಗೆ 95 ವರ್ಷ ವಯಸ್ಸಾಗಿತ್ತು. 

ಸಿನಿಮಾಗೆ ಕಾಲಿಡುವ ಮುನ್ನ ರಂಗಭೂಮಿಯಲ್ಲಿ ಪಳಗಿದ್ದರು. ಹೆಚ್ ಎಲ್ ಎನ್ ಸಿಂಹ ಅವರ ನಾಟಕ ಕಂಪನಿಯಲ್ಲಿ ಅಭಿನಯಿಸುತ್ತಾ ತಮ್ಮದೇ ಆದ ಒಂದು ನಾಟಕ ಕಂಪನಿಯನ್ನು ಕಟ್ಟಿದರು. 

Latest Videos

undefined

IIFA Award 2019 : ಯಾರ್ಯಾರಿಗೆ ಯಾವ್ಯಾವ ಪ್ರಶಸ್ತಿ ಗರಿ? ಇಲ್ಲಿದೆ ಲಿಸ್ಟ್

1936 ರಲ್ಲಿ ‘ಸಂಸಾರ ನೌಕ’ ಸಿನಿಮಾ ತೆರೆ ಕಾಣುತ್ತದೆ. ಈ ಚಿತ್ರದಲ್ಲಿ ಪದ್ಮಾದೇವಿ ನಾಲ್ಕು ಹಾಡುಗಳನ್ನು ಹಾಡಿದ್ದಾರೆ. ಈ ಚಿತ್ರ ಯಶಸ್ಸನ್ನೂ ತಂದು ಕೊಟ್ಟಿತು. 

ವಸಂತಸೇನ, ಭಕ್ತ ಸುಧಾಮ, ಜಾತಕ ಫಲ, ಮುಕ್ತಿ, ಅಮರ ಮಧುರ ಪ್ರೇಮ, ಸಂಕ್ರಾಂತಿ,  ಸೇರಿದಂತೆ ಎರಡೂ ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ಆಕಾಶವಾಣಿಯಲ್ಲೂ ಕೆಲಸ ಮಾಡಿದ್ದಾರೆ. 

ಪ್ರೇಕ್ಷಕನ ಕಣ್ಣಲ್ಲಿ ಕಂಡಂತೆ ‘ಪೈಲ್ವಾನ್’!

ಪದ್ಮಾದೇವಿಯವರು ರಂಗಭೂಮಿ ಹಿನ್ನಲೆ ಕುಟುಂಬದಿಂದ ಬಂದವರು. ಇವರ ತಾತ, ಅಪ್ಪ, ಅಮ್ಮ ಎಲ್ಲರೂ ರಂಗಭೂಮಿ ಕಲಾವಿದರು. ಒಂಭತ್ತು ವರ್ಷಕ್ಕೆ ಬಣ್ಣ ಹಚ್ಚುತ್ತಾರೆ. ಮೊದಲ ಸಿನಿಮಾ ಧ್ರುವ ಕುಮಾರ. ಆದರೆ ಅದು ಕಾರಣಾಂತರದಿಂದ ರಿಲೀಸ್ ಆಗಲಿಲ್ಲ. ಆ ನಂತರ ‘ಭಕ್ತಧ್ರುವ’ ಮಾಡುತ್ತಾರೆ.  

click me!